JioPhone Prepaid Plans : ಜಿಯೋಫೋನ್‌ನ ಹೊಸ ಪ್ರೀಪೇಡ್‌ ಪ್ಲಾನ್‌! 250 ರೂಪಾಯಿಗಳಿಗಿಂತಲೂ ಕಡಿಮೆ ಇರುವ ಈ ಪ್ಲಾನ್‌ಗಳನ್ನೊಮ್ಮೆ ನೀವೂ ಚೆಕ್‌ ಮಾಡಿ!

ರಿಲಯನ್ಸ್‌ ಜಿಯೋ(JioPhone Prepaid Plans ) ಹಿಂದಿನ ವರ್ಷ ‘ಜಿಯೋಫೋನ್‌ ನೆಕ್ಟ್‌’ ಎಂಬ ಕೈಗೆಟುಕುವ ಬೆಲೆಯ 4ಜಿ ಸ್ಮಾರ್ಟ್‌ಫೋನ್‌ ಪರಿಚಯಿಸಿತ್ತು. ನಂತರ ಇದು ತನ್ನ ಜಿಯೋಫೋನ್‌ ಬಳಕೆದಾರರಿಗೆ ಬಹುಯೋಜನೆಗಳನ್ನು ಪರಿಚಯಿಸುತ್ತಲೇ ಬಂದಿದೆ. ಜಿಯೋಫೋನ್‌ ಬಳಕೆದಾರರಿಗಿರುವ ಪ್ರೀಪೇಡ್‌ ಯೋಜನೆಗಳು ಜಿಯೋ ಬಳಕೆದಾರರಿಗಿಂತ ಭಿನ್ನವಾಗಿರುತ್ತದೆ. ನೀವು ಜಿಯೋಫೊನ್‌ ಹೊಂದಿದ್ದರೆ ಅದರ ಹೊಸ ಪ್ರೀಪೇಡ್‌ ಪ್ಲಾನ್‌ ಒಮ್ಮೆ ಚೆಕ್‌ ಮಾಡಿ. ರಿಲಯನ್ಸ್‌ ಜಿಯೋ ತನ್ನ ಬಳಕೆದಾರರಿಗೆ 250 ರೂಪಾಯಿಗಳಿಗಿಂತಲೂ ಕಡಿಮೆ ಬೆಲೆಗೆ ಹೊಸ ಪ್ಲಾನ್‌ಗಳನ್ನು ಪರಿಚಯಿಸುತ್ತಿದೆ.

250 ರೂಪಾಯಿಗಳಿಗಿಂತಲೂ ಕಡಿಮೆ ಬೆಲೆಯ ಜಿಯೋಫೋನ್‌ನ ಹೊಸ ಪ್ರೀಪೇಡ್‌ ಪ್ಲಾನ್‌ಗಳು:

75 ರೂಪಾಯಿಗಳ ಪ್ಲಾನ್‌ :
ಇದು ಜಿಯೋಫೋನ್‌ ನೀಡುತ್ತಿರುವ ಅತೀ ಕಡಿಮೆ ಬೆಲೆಯ ಪ್ಲಾನ್‌ ಆಗಿದೆ. ದಿನವೊಂದಕ್ಕೆ 0.1ಜಿಬಿ ಡಾಟಾದ ಜೊತೆಗೆ 23ದಿನಗಳ ವ್ಯಾಲಿಡಿಟಿಯನ್ನು ನೀಡುತ್ತಿದೆ. ಇದರ ಅರ್ಥ ಈ ಪ್ರೀಪೇಡ್‌ ಪ್ಲಾನ್ನಲ್ಲಿ ಒಟ್ಟೂ 2.3 ಜಿಬಿ ಡಾಟಾ ಬಳಕೆದಾರರಿಗೆ ಸಿಗುತ್ತದೆ. ಈ ಪ್ಲಾನ್‌ 200 MBಗಳ ಹೆಚ್ಚುವರಿ ಡಾಟಾವನ್ನು ಉಚಿತವಾಗಿ ನೀಡುವುದರಿಂದ ಒಟ್ಟೂ ಡಾಟಾವು 2.5ಜಿಬಿಗಳಾಗಲಿದೆ. ಅದಲ್ಲದೆ, ಈ ಪ್ಲಾನ್‌ ತನ್ನ ಬಳಕೆದಾರರಿಗೆ 50 SMSಗಳನ್ನು ಸಹ ನೀಡಿದೆ.

91 ರೂಪಾಯಿಗಳ ಪ್ಲಾನ್‌:
28 ದಿನಗಳ ವ್ಯಾಲಿಡಿಟಿಯಿರುವ ಈ ಪ್ಲಾನ್‌ 75ರೂಪಾಯಿಗಳ ಪ್ಲಾನ್‌ನಂತೆಯೇ ಇದೆ. ದಿನವೊಂದಕ್ಕೆ 0.1ಜಿಬಿ ಡಾಟಾದಂತೆಯೇ ಒಟ್ಟೂ 2.3ಜಿಬಿ ಡಾಟಾ ಜೊತೆಗೆ ಹೆಚ್ಚುವರಿಯಾಗಿ 200MB ಡಾಟಾ ಮತ್ತು 50 SMSಗಳು ಇದೆ. 75 ರೂಪಾಯಿಗಳ ಪ್ಲಾನ್‌ನಂತೆಯೇ ಇರುವ 91ರೂಪಾಯಿಗಳ ಪ್ಲಾನ್‌ ಹೆಚ್ಚುವರಿ ದಿನಗಳ ವ್ಯಾಲಿಡಿಟಿಯೊಂದಿಗೆ ಉತ್ತಮವಾಗಿದೆ.

ಇದನ್ನೂ ಓದಿ : Jio Live TV: ಜಿಯೋ ಲೈವ್ ಟಿವಿಯನ್ನು ಟಿವಿ, ಲ್ಯಾಪ್ ಟಾಪ್‌ನಲ್ಲಿ ನೋಡೋದು ಹೇಗೆ?

125 ರೂಪಾಯಿಗಳ ಪ್ಲಾನ್‌ :
ಇದು 100 ರೂಪಾಯಿಗಳ ಮೇಲಿನ ಪ್ಲಾನ್‌ ಆಗಿದ್ದು ದಿನವೊಂದಕ್ಕೆ 0.5ಜಿಬಿ ಡಾಟಾ ಮತ್ತು 300 SMSಗಳನ್ನೊಳಗೊಂಡಿದೆ. ಈ ಪ್ಲಾನ್‌ 23ದಿನಗಳ ವ್ಯಾಲಿಡಿಟಿ ಹೊಂದಿದ್ದು, ಒಟ್ಟೂ 11.5 ಜಿಬಿ ಡಾಟಾ ತನ್ನ ಬಳಕೆದಾರರಿಗೆ ನೀಡುತ್ತಿದೆ.

152 ರೂಪಾಯಿಗಳ ಪ್ಲಾನ್‌ :
ಈ ಪ್ಲಾನ್‌ ಸಹ ದಿನವೊಂದಕ್ಕೆ 0.5ಜಿಬಿ ಡಾಟಾ ಮತ್ತು 300 SMSಗಳನ್ನೇಒಳಗೊಂಡಿದೆ. ಆದರೆ 28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್‌ ಒಟ್ಟೂ 14ಜಿಬಿ ಡಾಟಾವನ್ನು ನೀಡುತ್ತಿದೆ.

186 ರೂಪಾಯಿಗಳ ಪ್ಲಾನ್‌:
ಜಿಯೋ ತನ್ನ ಜಿಯೋಫೋನ್‌ ಬಳಕೆದಾರರಿಗೆ 186 ರೂಪಾಯಿಗಳ ಪ್ರೀಪೇಡ್‌ ಪ್ಲಾನ್‌ ಪರಿಚಯಿಸಿದೆ. ಈ ಪ್ರೀಪೇಡ್‌ ಪ್ಲಾನ್‌ನಲ್ಲಿ ದಿನವೊಂದಕ್ಕೆ 1ಜಿಬಿ ಡಾಟಾದಂತೆಯೇ 28ದಿನಗಳ ವ್ಯಾಲಿಡಿಟಿ ಹೊಂದಿದೆ. 100 SMSಗಳಿರುವ ಈ ಪ್ಲಾನ್‌ ಒಟ್ಟೂ 28ಜಿಬಿ ಡಾಟಾ ನೀಡುವ 200 ರೂಪಾಯಿಗಳ ಒಳಗಿನ ಜಿಯೋಫೋನ್‌ ಪ್ರೀಪೇಡ್‌ ಪ್ಲಾನ್‌ ಇದಾಗಿದೆ.

222 ರೂಪಾಯಿಗಳ ಪ್ಲಾನ್‌:
ಕೊನೆಯದಾಗಿ ಜಿಯೋ ದಿನವೊಂದಕ್ಕೆ 2ಜಿಬಿ ಡಾಟಾ ಇರುವ 28ದಿನಗಳ ವ್ಯಾಲಿಡಿಟಿ ಹೊಂದಿರುವ 222ರೂಪಾಯಿಗಳ ಪ್ಲಾನ್‌ ಪರಿಚಯಿಸಿದೆ. ಈ ಪ್ಲಾನ್‌ ಒಟ್ಟೂ 56ಜಿಬಿಗಳನ್ನು ಜಿಯೋಫೋನ್‌ ಬಳಕೆದಾರರಿಗೆ ನೀಡಿದೆ. ಪ್ರತಿದಿನ 100 SMSಗಳಿರುವ ಈ ಪ್ಲಾನ್‌ ಅತಿ ಹೆಚ್ಚು ಡಾಟಾ ಬಳಕೆದಾರರಿಗೆ ಉತ್ತಮವಾಗಿದೆ.

ಇದನ್ನೂ ಓದಿ : VI telecom: ನಿಮ್ಮ ಸಿಮ್‌ ಬ್ಯಾನ್‌ ಆಗಬಹುದು ಹುಷಾರ್‌! 7,948 ಕ್ಕೂ ಅಧಿಕ ಸಿಮ್‌ ಕಾರ್ಡ್‌ ಬ್ಯಾನ್‌ ಮಾಡಿದ ವಿ ಟೆಲಿಕಾಂ

(JioPhone Prepaid Plans check these plans that price less than rs 250)

Comments are closed.