ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಸಚಿವ ಸುರೇಶ್ ಕುಮಾರ್

0

ಬೆಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಬೆಳಗ್ಗೆ 11.30ಕ್ಕೆ ಎಲ್ಲ ವಿದ್ಯಾರ್ಥಿಗಳ ಮೊಬೈಲ್​ಗೆ ಎಸ್​ಎಂಎಸ್​ ಮುಖಾಂತರ ಫಲಿತಾಂಶ ರವಾನೆಯಾಗಲಿದೆ. ಮಧ್ಯಾಹ್ನ 12 ಗಂಟೆಯ ನಂತರ ಇಲಾಖೆಯ ಅಧಿಕೃತ ವೆಬ್​ಸೈಟ್​ನಲ್ಲಿ ರಿಸಲ್ಟ್​ ವೀಕ್ಷಿಸಬಹುದು ಎಂದು ಸಚಿವ ಸುರೇಶ್​ ಕುಮಾರ್ ತಿಳಿಸಿದ್ದಾರೆ.

12 ಗಂಟೆ ನಂತರ ಇಲಾಖೆ ಅಧಿಕೃತ ವೆಬ್​ಸೈಟ್ http://karresults.nic.in/indexPUC_2020.asp ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಕಳೆದ ಮಾರ್ಚ್​ 4ರಿಂದ 21ನೇ ತಾರೀಖಿನವರೆಗೂ ದ್ವೀತಿಯ ಪಿಯು ಎಕ್ಸಾಂ ನಡೆದಿತ್ತು. ಮಾರ್ಚ್ 23ರಂದು ಕೊನೆಯದಾಗಿ ಇಂಗ್ಲಿಷ್​ ಪರೀಕ್ಷೆ ನಡೆಯಬೇಕಿತ್ತು. ಅಷ್ಟರಲ್ಲಿ ಕರೊನಾ ಭೀತಿ ಆವರಿಸಿದ್ದರಿಂದ ಈ ಪರೀಕ್ಷೆಯನ್ನು ಮುಂದೂಡಲಾಗಿತ್ತು.

https://www.facebook.com/nimmasuresh/videos/3633591873334798/

ಕಳೆದ ತಿಂಗಳು ಅಂದರೆ ಜೂನ್​ 18ರಂದು ಇಂಗ್ಲಿಷ್​ ಎಕ್ಸಾಂ ನಡೆದಿತ್ತು. ಇದಾದ ಬಳಿಕ ಫಲಿತಾಂಶ ಯಾವಾಗ ಎಂಬ ಪ್ರಶ್ನೆ ಪದೇಪದೆ ಉದ್ಭವಿಸುತ್ತಲೇ ಇತ್ತು. ಇಂದು ಅಧಿಕೃತವಾಗಿ ಪಿಯುಸಿ ಫಲಿತಾಂಶದ ದಿನಾಂಕವನ್ನು ಸಚಿವರು ಘೋಷಿಸಿದ್ದು ನಾಳೆಯೇ ಫಲಿತಾಂಶ ಪ್ರಕಟ ಆಗಲಿದೆ.

Leave A Reply

Your email address will not be published.