BIG BREAKING : ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ರಾಜೀನಾಮೆ

ಗಾಂಧಿನಗರ : ಪ್ರಧಾನಿ ನರೇಂದ್ರ ಮೋದಿ ಅವರು ತವರು ರಾಜ್ಯವಾಗಿರುವ ಗುಜರಾತ್‌ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ವಿಧಾನಸಭಾ ಚುನಾವಣೆಗೆ ಒಂದು ವರ್ಷ ವಿರುವಾಗಲೇ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾಯಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಮುಂದಿನ ಚುನಾವಣೆಗೆ ಪಕ್ಷವನ್ನು ಸಂಘಟನೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಉತ್ತರಾಖಂಡ ಹಾಗೂ ಕರ್ನಾಟಕದಲ್ಲಿ ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿರುವ ಮೋದಿ ಹಾಗೂ ಅಮಿತ್‌ ಶಾ ಇದೀಗ ತಮ್ಮ ತವರು ರಾಜ್ಯದಲ್ಲಿಯೂ ಹೊಸ ರಾಜಕೀಯ ಬದಲಾವಣೆಗೆ ಮುಂದಾಗಿದ್ದಾರೆ. ಉತ್ತಮ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ವಿಜಯ್‌ ರೂಪಾಯಿ ರಾಜೀನಾಮೆ ರಾಜಕೀಯ ವಲಯದಲ್ಲಿ ಹೊಸ ಸಂಚಲನವನ್ನು ಮೂಡಿಸಿದೆ.

ಮುಂದಿನ ವರ್ಷಾಂತ್ಯಕ್ಕೆ ಗುಜರಾತ್‌ನಲ್ಲಿ ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ವೇಳೆಗೆ ಹೊಸ ನಾಯಕನನ್ನು ಸಿದ್ದ ಪಡಿಸೋದು ಬಿಜೆಪಿಯ ಸದ್ಯದ ಲೆಕ್ಕಾಚಾರ. ಹೀಗಾಗಿಯೇ ಗುಜರಾತ್‌ ಸಿಎಂ ಆಗಿ ಹೊಸ ಮುಖ ನೇಮಕವಾಗುವ ಸಾಧ್ಯತೆಯಿದೆ. ಆದರೆ ರೂಪಾನಿ ಅವರ ರಾಜೀನಾಮೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಇದನ್ನೂ ಓದಿ : ಪ್ರಪಂಚವನ್ನು ಕಾಡಲಿರುವ ಆಪತ್ತುಗಳು : ಕೋಡಿಮಠದ ಶ್ರೀಗಳಿಂದ ಸ್ಪೋಟಕ ಭವಿಷ್ಯ

ಇದನ್ನೂ ಓದಿ : ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ : ಸಿಎಂ ಯಡಿಯೂರಪ್ಪ ಘೋಷಣೆ

( (Gujarat Chief Minister Vijay Rupani resigns )

Comments are closed.