SSLC Exams Key Answers : ಎಸ್‌ಎಸ್‌ಎಲ್‌ ಸಿ ಪರೀಕ್ಷೆ ಕೀ ಉತ್ತರ ಪ್ರಕಟ

ಬೆಂಗಳೂರು : ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ (SSLC Exams) ಸರಿ ಉತ್ತರ ಪತ್ರಿಕೆಯನ್ನು ( Key Answers) ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ಇಲಾಖೆಯ ಅಧಿಕೃತ ವೆಬ್‌ಸೈಟ್‌ ಮೂಲಕ ಕೀ ಉತ್ತರಗಳನ್ನು ಚೆಕ್‌ ಮಾಡಬಹುದಾಗಿದೆ. ಅಲ್ಲದೇ ಕೀ ಉತ್ತರಗಳ ಕುರಿತು ಆಕ್ಷೇಪಣೆಗಳನ್ನು ಸಲ್ಲಿಸಲು ಇಲಾಖೆ ಅವಕಾಶ ಕಲ್ಪಿಸಿದೆ.

SSLC Exams Key Answers ಹೀಗೆ ಪರಿಶೀಲಿಸಿ

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ಬಿಡುಗಡೆ ಮಾಡಿರುವ ಸರಿ ಉತ್ತರಗಳನ್ನು ಪರಿಶೀಲನೆ ಮಾಡಲು, ಅಭ್ಯರ್ಥಿಗಳು ತಮ್ಮ ರಿಜಿಸ್ಟರ್‌ ಸಂಖ್ಯೆಯ ಮೂಲಕ ಲಾಗಿನ್‌ ಆಗಬಹುದಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಸರಿ ಉತ್ತರಗಳನ್ನು ಈ ಕೆಳಗಿನ ವಿಧಾನ ಅನುಸರಿಸಿ ಚೆಕ್‌ ಮಾಡಿ.

  • ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಅಧಿಕೃತ ವೆಬ್‌ಸೈಟ್‌ https://sslc.karnataka.gov.in/ ಗೆ ಭೇಟಿ ನೀಡಿ.
  • ವೆಬ್‌ಸೈಟ್‌ ಓಪನ್‌ ಆಗುತ್ತಿದ್ದಂತೆಯೇ ಮುಖ್ಯಪುಟದ ಬಲಭಾಗದಲ್ಲಿ ‘ಮತ್ತಷ್ಟು ಓದಿ’ ಎಂಬಲ್ಲಿ ಕ್ಲಿಕ್ ಮಾಡಿ.ಇತ್ತೀಚಿನ ಪ್ರಕಟಣೆಗಳ ಲಿಂಕ್ ಪ್ರವೇಶಿಸಿ.
  • ಇಲ್ಲಿ ‘ಮಾರ್ಚ್/ಏಪ್ರಿಲ್ 2022ರ ಎಸ್.ಎಸ್.ಎಲ್.ಸಿ. ಮುಖ್ಯ ಪರೀಕ್ಷೆಯ ಉತ್ತರ ಕೀಲಿಗಾಗಿ ಇಲ್ಲಿ ಕ್ಲಿಕ್ ಮಾಡಿ’
  • ನಂತರ ಓಪನ್ ಆದ ಪೇಜ್‌ನಲ್ಲಿ ವಿಷಯವಾರು ಮತ್ತು ಪ್ರಶ್ನೆ ಪತ್ರಿಕೆ ಆವೃತ್ತಿವಾರು ಕೀ ಉತ್ತರಗಳನ್ನು ಚೆಕ್‌ ಮಾಡಬಹುದು.

ಪ್ರಥಮ ಭಾಷೆಗಳು, ದ್ವಿತೀಯ ಭಾಷೆಗಳು, ತೃತೀಯ ಭಾಷೆಗಳು, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಜೆ.ಟಿ.ಎಸ್ ವಿಷಯಗಳು, ಪರ್ಯಾಯ ವಿಷಯಗಳು, ಎನ್‌.ಎಸ್‌.ಕ್ಯೂ.ಎಫ್‌ ವಿಷಯಗಳ ಪ್ರಶ್ನೆ ಪತ್ರಿಕೆ ಆವೃತ್ತಿವಾರು ಕೀ ಉತ್ತರಗಳನ್ನು ಚೆಕ್‌ ಮಾಡಬಹುದು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಮುಕ್ತಾಯಗೊಂಡಿದೆ. ಈಗಾಗಲೇ ಕೀಲಿ ಉತ್ತರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಮೇ 2 ರಂದು ಫಲಿತಾಂಶ ಪ್ರಕಟಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೇ ಜೂನ್‌ ಕೊನೆಯ ವಾರದಲ್ಲಿ ಪೂರಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇನ್ನು ರಾಜ್ಯದಲ್ಲಿ ಒಂದು ಕಡೆಯಲ್ಲಿ ಮಾತ್ರವೇ ಪರೀಕ್ಷಾ ಅಕ್ರಮ ನಡೆದಿರುವುದು ವರದಿಯಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್‌ ತಿಳಿಸಿದ್ದಾರೆ.

ರಾಜ್ಯದಾದ್ಯಂತ ಎಪ್ರಿಲ್‌ 22 ರಿಂದ ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ಮೌಲ್ಯ ಮಾಪನ ಕಾರ್ಯ ಆರಂಭವಾಗಲಿದೆ. ಈ ಕುರಿತು ಈಗಾಗಲೇ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಮೌಲ್ಯಾಂಕನ ಅಧಿಕಾರಿಗಳಿಗೆ ಜವಾಬ್ದಾರಿಯನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ.

ಇದನ್ನೂ ಓದಿ :  ಸಿಬಿಎಸ್​​ಇ ಟರ್ಮ್​ 2 ಪ್ರವೇಶ ಪತ್ರಗಳ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ

ಇದನ್ನೂ ಓದಿ : CBSE Class 10 12 : ಕೊನೆಯ 15 ದಿನಗಳಲ್ಲಿ ಹೀಗಿರಲಿ ನಿಮ್ಮ ಪರೀಕ್ಷಾ ತಯಾರಿ

SSLC Exams Key Answers published in website

Comments are closed.