CBSE Term 2 2022 ರ 10 ನೇ ತರಗತಿ ಪರಿಕ್ಷೆಯ ಹಾಲ್‌ ಟಿಕೇಟ್‌ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ ಗೊತ್ತೇ?

ಸೆಂಟ್ರಲ್‌ ಬೋರ್ಡ್‌ ಆಪ್‌ ಸೆಕೆಂಡರಿ ಎಜ್ಯುಕೇಶನ್‌ (CBSC) 10 ನೇ ತರಗತಿ ಮತ್ತು 12 ನೇ ತರಗತಿಗಳಿಗೆ ಟರ್ಮ್‌ 2 ಪರೀಕ್ಷೆ (CBSC Term 2 2022) ಗಳನ್ನು ಏಪ್ರಿಲ್‌ ನಿಂದ ಜೂನ್‌ ತಿಂಗಳುಗಳಲ್ಲಿ ನಡೆಸುತ್ತಿದೆ ಮತ್ತು ಪ್ರವೇಶ ಪತ್ರ(Admit Card)ವನ್ನು ಬಿಡುಗಡೆ ಮಾಡಿದೆ. 10 ನೇ ತರಗತಿ ಮತ್ತು 12 ನೇ ತರಗತಿ ಎರಡೂ ಪರೀಕ್ಷೆಗಳು ಇದೇ ಏಪ್ರಿಲ್‌ 26 ಕ್ಕೆ ಪ್ರಾರಂಭಗೊಳ್ಳಲಿದೆ. 10 ನೇ ತರಗತಿಯ ಪರೀಕ್ಷೆಯು ಮೇ 24 ಕ್ಕೆ ಕೊನೆಗೊಂಡರೆ, 12 ನೇ ತರಗತಿಯ ಪರೀಕ್ಷೆಯು ಜೂನ್‌ 15 ರವರೆಗೆ ಮುಂದುವರಿಯಲಿದೆ.

CBSE Term 2 10ನೇ ತರಗತಿ ಪ್ರವೇಶ ಪತ್ರವು(Amit Card) cbse.nic.in ಅಥವಾ cbse.gov.in ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ. ಇದೇ ಮೊದಲ ಬಾರಿಗೆ CBSE ಎರಡು ಟರ್ಮ್‌ಗಳಲ್ಲಿ ಬೋರ್ಡ್‌ ಪರೀಕ್ಷೆಗಳನ್ನು ನಡೆಸುತ್ತಿದೆ. 2021 ರಲ್ಲಿ ಕೋವಿಡ್‌ ಸಾಂಕ್ರಾಮಿಕದ ಕಾರಣ ಮಂಡಳಿಯು ಅಂತಿಮ ಪರೀಕ್ಷೆಯನ್ನು ನಡೆಸಿರಲಿಲ್ಲ. ಪರಿಕ್ಷಾ ಮಂಡಳಿಯು ಈಗಾಗಲೇ ನವೆಂಬರ್‌–ಡಿಸೆಂಬರ್‌ 2021 ರಲ್ಲಿ ನಡೆಸಲಾದ ಮೊದಲ ಟರ್ಮ್‌ ನ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ.

CBSE Term–2 2022 ರ 10ನೇ ತರಗತಿ ಪ್ರವೇಶ ಪತ್ರ(Amit Card) ಅಥವಾ ಹಾಲ್‌ ಟಿಕೆಟ್‌ ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ ?

  • cbse.nic.in ಅಥವಾ cbse.gov.in ವೆಬ್‌ಸೈಟ್‌ಗೆ ಹೋಗಿ.
  • Class 10 ಆಯ್ದುಕೊಂಡು ಎಡ್ಮಿಟ್‌ ಕಾರ್ಡ್‌ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ.
  • ಲಾಗ್‌ಇನ್‌ ಆಗಲು ನೀಡಬೇಕಾದ ಅಗತ್ಯ ಮಾಹಿತಿಗಳನ್ನು ಒದಗಿಸಿ.
  • ಲಾಗಿನ್‌ ಪ್ರಕ್ರಿಯೆ ಪೂರ್ಣಗೊಂಡ ನಂತರ ಎಡ್ಮಿಟ್‌ ಕಾರ್ಡ್‌ ಡೌನ್‌ಲೋಡ್‌ ಮಾಡಿಕೊಳ್ಳಿ.
  • ನಂತರ ಪ್ರಿಂಟ್‌ಔಟ್‌ ತೆಗೆದುಕೊಳ್ಳಿ.

ಇತ್ತಿಚೆಗೆ CBSE ತನ್ನ ವಿದ್ಯಾರ್ಥಿಗಳಿಗೆ ಬೋರ್ಡ್‌ ಎಕ್ಸಾಮ್‌ 2022 ರ ಸುಳ್ಳ ನೋಟಿಫಿಕೇಶನ್‌ಗಳ ಬಗ್ಗೆ ಎಚ್ಚರಿಕೆ ನೀಡಿತ್ತು. ಅಂತಿಮ ಫಲಿತಾಂಶವು 30% ವೇಟೇಜ್‌ ಟರ್ಮ್‌–1 ಪರೀಕ್ಷೆಗಳಿಂದ ಮತ್ತು ಉಳಿದ 70% ಟರ್ಮ್‌–2 ಪರೀಕ್ಷೆಗಳಿಂದ ಎಂದು ಅಧಿಸೂಚನೆಯು ಹೇಳುತ್ತದೆ. ಇಂಟರ್ನಲ್‌ ಅಸ್ಸೆಸ್‌ಮೆಂಟ್‌ನ ವೇಟೇಜ್‌ನಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ ಎಂದು ಹೇಳಿತ್ತು. ಆದರೆ ಕೋವಿಡ್‌–19 ಕಾರಣದಿಂದ ಅಥವಾ ಓಲಂಪಿಯಾಡ್‌/ಕ್ರೀಡಾ ಚಟುವಟಿಕೆಗಳಿಂದ ಮೊದಲ ಟರ್ಮ್‌ನ ಪರೀಕ್ಷೆಗೆ ಹಾಜಾರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಕೇವಲ ಟರ್ಮ್‌ 2 ಪರೀಕ್ಷೆಯಲ್ಲಿ ತೋರಿದ ಕಾರ್ಯಕ್ಷಮತೆಯ ಆಧಾರದ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ ಎಂದು ನಕಲಿ ನೋಟಿಫಿಕೇಶನ್‌ ಹೇಳುತ್ತಿತ್ತು. ಆದರೆ, ಮಂಡಳಿಯು ಅದನ್ನು ನಿರಾಕರಿಸಿದೆ.

CBSE ಅಕಾಡೆಮಿಕ್‌ ವೆಬ್‌ಸೈಟ್‌ ಆದ cbseacademic.nic.in ಗೆ ವಿದ್ಯಾರ್ಥಿಗಳು ಭೇಟಿಕೊಡುವುದರ ಮೂಲಕ ಸ್ಯಾಂಪಲ್‌ ಪ್ರಶ್ನೆ ಪತ್ರಿಕೆಗಳನ್ನು ಮತ್ತು ಟರ್ಮ್‌–2 ರ ಸಿಲೇಬಸ್‌ ಗಳನ್ನು ಪಡೆದುಕೊಳ್ಳಬಹುದಾಗಿದೆ.

ಇದನ್ನೂ ಓದಿ : CBSE Term 2 Exams 2022 : ಸಿಬಿಎಸ್​ಇ ಟರ್ಮ್​ 2 ಪರೀಕ್ಷೆಯ ಮಾರ್ಗಸೂಚಿಗಳು ಇಲ್ಲಿವೆ ನೋಡಿ

ಇದನ್ನೂ ಓದಿ : Degree Exams Postpone : ಪದವಿ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್ : ಪರೀಕ್ಷೆ ಒಂದು ತಿಂಗಳು ಮುಂದೂಡಿಕೆ

(CBSE Term 2 2022 Exam How to download class 10 exam hall ticket)

Comments are closed.