SSLC PUC EXAMS : ನಿಗದಿಯಂತೆ ನಡೆಯಲಿದೆ ಎಸ್ಎಸ್ಎಲ್‌ಸಿ, ಪಿಯುಸಿ ಪರೀಕ್ಷೆ: ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಮೂರನೇ ಅಲೆಯ ಪ್ರಭಾವ ನಿಧಾನಕ್ಕೆ ಕಡಿಮೆಯಾಗುತ್ತಿದ್ದರೇ ಇನ್ನೊಂದೆಡೆ ನಿಧಾನಕ್ಕೆ ಪರೀಕ್ಷಾ ಜ್ವರ ಕಾವೇರ ತೊಡಗಿದೆ. ಕೊರೋನಾ ಅಲೆಯ ಹಿನ್ನೆಲೆಯಲ್ಲಿ ಕೆಲವೆಡೆ ಶಾಲಾ ಕಾಲೇಜುಗಳು ಬಾಗಿಲು ಮುಚ್ಚಿದ್ದರಿಂದ ಕೆಲವೆಡೆ ಪಠ್ಯಕ್ರಮ ಮುಗಿದಿಲ್ಲ ಎಂಬ ಆತಂಕ ಪೋಷಕರಲ್ಲಿದೆ. ಹೀಗಾಗಿ ಎಸ್‌ಎಸ್‌ಎಲ್‌ ಹಾಗೂ ಪಿಯುಸಿ (SSLC PUC EXAMS ) ಪರೀಕ್ಷೆಗಳು ಕತೆಯೇನು? ಮುಂದೂಡಿಕೆಯಾಗುತ್ತಾ ಎಂಬ ಪ್ರಶ್ನೆಗಳು ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಕಾಡುತ್ತಿದ್ದವು. ಆದರೆ ಈ ಪ್ರಶ್ನೆಗಳಿಗೆ ಸಚಿವರು ಸ್ಪಷ್ಟ ಉತ್ತರ ನೀಡಿದ್ದಾರೆ.

ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆ ಮುಂದೂಡಿಕೆಯಾಗೋದಿಲ್ಲ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ಒಂದೇ ಒಂದು ದಿನವೂ ಹೆಚ್ಚು ಕಡಿಮೆ ಆಗದಂತೆ ನಿಗದಿತ ದಿನಾಂಕದಂದೂ ಪರೀಕ್ಷೆಗಳು ನಡೆಯಲಿದೆ. ಪೋಷಕರಿಗೆ, ಮಕ್ಕಳಿಗೆ ಯಾವುದೇ ಆತಂಕ ಬೇಡ ಎಂದು ಸಚಿವರು ಸ್ಪಷ್ಟ ಪಡಿಸಿದ್ದಾರೆ.

ಚಾಮರಾಜನಗರದಲ್ಲಿ ಮಾತನಾಡಿದ ಸಚಿವರು, ಕೊರೋನಾ ಮೂರನೇ ಅಲೆಯಲ್ಲಿ ಹಲವು ರಾಜ್ಯದಲ್ಲಿ ಶಾಲೆಗಳನ್ನು ಮುಚ್ಚಲಾಗಿತ್ತು. ದೇವರ ಆಶೀರ್ವಾದದಿಂದ ರಾಜ್ಯದಲ್ಲಿ ಅಂತಹ ಪರಿಸ್ಥಿತಿ ಬರಲಿಲ್ಲ. ಶೇಕಡಾ ೯೯ ರಷ್ಟು ಸ್ಕೂಲ್ ಗಳು ತೆರೆದಿದ್ದವು. ಮಕ್ಕಳ ಹಾಜರಾತಿಯೂ ಚೆನ್ನಾಗಿದೆ. ಹೀಗಾಗಿ ನಿಗದಿತ ಸಮಯದಲ್ಲಿ ಪರೀಕ್ಷೆ ನಡೆಸಲು ಯಾವುದೇ ತೊಂದರೆ ಇಲ್ಲ ಎಂದು ನಾಗೇಶ್ ಅವರು ಹೇಳಿದ್ದಾರೆ.

ಇನ್ನೂ ರಾಜ್ಯದಾದ್ಯಂತ ಚರ್ಚೆಗೆ ಗ್ರಾಸವಾಗಿರುವ ಹಿಜಾಬ್ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರಿಗೆ ಯಾವುದೇ ಕಾರಣಕ್ಕೂ ತರಗತಿ ಪ್ರವೇಶಕ್ಕೆ ಅವಕಾಶವಿಲ್ಲ. ಸಮವಸ್ತ್ರ ನಿಯಮ ಪಾಲಿಸುವಂತೆ ಶಾಲೆಗಳಿಗೆ ಸ್ಪಷ್ಟವಾಗಿ ಸೂಚಿಸಿದ್ದೇನೆ. ಪಾಲನೆ‌ಮಾಡದಿದ್ದರೇ ನಿಯಮದಂತೆ ಕ್ರಮವಾಗಲಿದೆ ಎಂದು ಬಿ.ಸಿ.ನಾಗೇಶ್ ಎಚ್ಚರಿಸಿದ್ದಾರೆ.

ಯಾವುದೇ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರಾಗಿಸುವ ಉದ್ದೇಶ ನಮ್ಮ ಮುಂದಿಲ್ಲ. ಆದರೆ ಏಜ್ಯುಕೇಶನ್ ಆಕ್ಟ್ಯ್ ರೂಲ್ಸ್ ೧೧ ರ ಪ್ರಕಾರ ನಿಯಮ ಜಾರಿ ಮಾಡಿದ್ದೇವೆ. ಎಜುಕೇಶನ್ ಪಾಲಿಸಿ ಸರ್ಕಾರ ಮಾಡಿರೋದಲ್ಲ. ಇದರಲ್ಲಿ ಅನಾವಶ್ಯಕ ರಾಜಕಾರಣ ಬೇಡ. ರಾಜಕೀಯ ಲಾಭಕ್ಕೆ ಮಕ್ಕಳನ್ನು ಬಳಸಿಕೊಳ್ಳಬಾರದು. ಮಕ್ಕಳನ್ನು ಅಸ್ತ್ರ ಮಾಡಿಕೊಂಡು ರಾಜಕೀಯ ಮಾಡಬೇಡಿ ಎಂದು ಬಿ.ಸಿ.ನಾಗೇಶ್ ಕಿವಿಮಾತು ಹೇಳಿದ್ದಾರೆ. ಈಗಾಗಲೇ ರಾಜ್ಯದಲ್ಲಿ ಪರೀಕ್ಷಾ ಸಿದ್ಧತೆಗಳು ಆರಂಭಗೊಳ್ಳುತ್ತಿದ್ದು, ಇದೇ ವೇಳೆಯಲ್ಲಿ ಶಿಕ್ಷಣ ಸಚಿವರು ಪರೀಕ್ಷೆಯ ಬಗ್ಗೆ ಸ್ಪಷ್ಟತೆ ನೀಡಿರೋದು ಪೋಷಕರ ಆತಂಕ ಕಡಿಮೆ ಮಾಡಿದೆ.

ಇದನ್ನೂ ಓದಿ : ಮಾರ್ಚ್‌ನಲ್ಲೇ ಬೇಸಿಗೆ ರಜೆ, ಜೂನ್‌ 1 ರಿಂದ ಶಾಲಾರಂಭ : ಹೊಸ ಚಿಂತನೆ ನಡೆಸಿದ ಶಿಕ್ಷಣ ಇಲಾಖೆ

ಇದನ್ನೂ ಓದಿ : ಶಿಕ್ಷಣ ಮತ್ತು ನೀರಾವರಿಗೆ ಭರ್ಜರಿ ಅನುದಾನ ನೀಡಿದ ನಿರ್ಮಲಾ ಸೀತಾರಾಮನ್‌

(SSLC, PUC Exams, Education Minister BC Nagesh clarified)

Comments are closed.