SSLC, PUC ಪರೀಕ್ಷೆ ರದ್ದಾಗುತ್ತಾ ..? ಇಂದೇ ನಿರ್ಧಾರವಾಗುತ್ತೆ ಪರೀಕ್ಷೆಯ ಭವಿಷ್ಯ

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಿದೆ. ಇದೀಗ ರಾಜ್ಯದಲ್ಲಿ ಎಸ್ಎಸ್ಎಲ್ ಸಿ, ಪಿಯುಸಿ ಪರೀಕ್ಷೆ ನಡೆಯುತ್ತಾ ಅಥವಾ ರದ್ದಾಗುತ್ತಾ ಅನ್ನೋದು ಗೊಂದಲ ಮೂಡಿಸಿದ್ದು ಇಂದೇ ಪರೀಕ್ಷೆಯ ಭವಿಷ್ಯ ನಿರ್ಧಾರವಾಗಲಿದೆ.

ಸಿಬಿಎಸ್ಇ‌ ಹಾಗೂ ಐಸಿಎಸ್ಇ ಬೋರ್ಡ್ ಗಳು ಪರೀಕ್ಷೆ ಇಲ್ಲದೇ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣ ಗೊಳಿಸುವು ದಾಗಿ ಘೋಷಿಸಿವೆ. ಇದರ ಬೆನ್ನಲ್ಲೇ ಹಲವು ರಾಜ್ಯಗಳಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಿವೆ. ಇದೀಗ ರಾಜ್ಯದಲ್ಲಿ ಎಸ್ಎಸ್ಎಲ್ ಸಿ‌ ಹಾಗೂ‌ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಬೇಕೆಂಬ ಒತ್ತಡ ಕೇಳಿಬಂದಿದೆ.

ರಾಜ್ಯದ ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಚಿವರು ಪರೀಕ್ಷೆ  ನಡೆಸುವ ಉತ್ಸಾಹದಲ್ಲಿದ್ದಾರೆ. ಆದರೆ ಪ್ರಸ್ತುತ ಸ್ಥಿತಿಯಲ್ಲಿ ಪರೀಕ್ಷೆ‌‌ ನಡೆಸುವುದು ಕಷ್ಟಸಾಧ್ಯ. ಕೊರೊನಾ ನಿಯಂತ್ರಣಕ್ಕೆ ಬಂದ ಮೇಲೆ ಪರೀಕ್ಷೆ ನಡೆಸಲು ಮುಂದಾದ್ರೆ ವಿದ್ಯಾರ್ಥಿಗಳು ಮತ್ತೆ ಗೊಂದಲಕ್ಕೆ ಸಿಲುಕುವ ಸಾಧ್ಯತೆಯಿದೆ.

ಸಚಿವ ಎಸ್.ಸುರೇಶ್ ಕುಮಾರ್ ಅವರು ದೇಶದ ಯಾವ ರಾಜ್ಯದಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಅಲ್ಲಿ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳ ಲಾಗುತ್ತಿದೆ ಅನ್ನೋ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಸೂಚಿಸಿದ್ದರು. ಆದರೆ ದೇಶದ ಯಾವುದೇ ರಾಜ್ಯವೂ ಕೊರೊನಾ ಸಂಕಷ್ಟದ ನಡುವೆ ಪರೀಕ್ಷೆ ನಡೆಸುವ ಉತ್ಸಾಹವನ್ನು ತೋರಿಸಿಲ್ಲ. ಹೀಗಾಗಿ ಕರ್ನಾಟಕದಲ್ಲಿಯೂ ಈ ಬಾರಿ ಪಿಯುಸಿ ಹಾಗೂ ಎಸ್ಎಸ್ಎಲ್ ಸಿ ಪರೀಕ್ಷೆಯನ್ನು ರದ್ದು ‌ಮಾಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Comments are closed.