Facebook : ಗ್ರಾಹಕರಿಗೆ ಶುಲ್ಕ ವಿಧಿಸಲು ಮುಂದಾಯ್ತು ಫೇಸ್‌ಬುಕ್‌

ನ್ಯೂಯಾರ್ಕ್ : ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್‌ (Facebook) ಇತ್ತೀಚಿಗಷ್ಟೇ ತನ್ನ ಮಾತೃಸಂಸ್ಥೆಯ ಹೆಸರನ್ನು ಬದಲಾಯಿಸಿಕೊಂಡಿತ್ತು. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿನ ಜನರು ಫೇಸ್‌ಬುಕ್‌ ಬಳಕೆ ಮಾಡುತ್ತಿದ್ದಾರೆ. ಉಚಿತವಾಗಿ ವ್ಯಾಪಾರ, ವ್ಯವಹಾರವನ್ನೂ ನಡೆಸುತ್ತಿದ್ದ ಗ್ರಾಹಕರು ಇನ್ಮುಂದೆ ಹಣ ಕೊಟ್ಟು ಸೇವೆ ಪಡೆಯಬೇಕಾಗಿದೆ. ಯುಕೆಯಲ್ಲಿ ಈಗಾಗಲೇ ಫೇಸ್‌ಬುಕ್‌ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡುವವರಿಂದ ಸುಲ್ಕ ಪಡೆಯಲು ಮುಂದಾಗಿದೆ. ಶೇ. 2% ಶುಲ್ಕ ಪಡೆಯಲು ಫೇಸ್‌ಬುಕ್‌ ಮುಂದಾಗಿದ್ದು, ಮುಂದಿನ ವರ್ಷದ ಆರಂಭದಿಂದಲೇ ನೂತನ ನಿಯಮ ಜಾರಿಯಾಗುವ ಸಾಧ್ಯತೆಯಿದೆ.

ಭಾರತದ ಅನೇಕ ಚಿಲ್ಲರೆ ವ್ಯಾಪಾರಿಗಳು, ದೊಡ್ಡ ಮತ್ತು ಸಣ್ಣ ಎರಡೂ, ತಮ್ಮ ಮಾರ್ಕೆಟಿಂಗ್‌ಗಾಗಿ ಫೇಸ್‌ಬುಕ್ ಪ್ಲಾಟ್‌ಫಾರ್ಮ್ ಅನ್ನು ಬಳಸುತ್ತಾರೆ. ಆರಂಭದಲ್ಲಿ ಫೇಸ್‌ಬುಕ್‌ ಯುಕೆಯಲ್ಲಿ ಹಣ ಪಡೆದು ಸೇವೆ ನೀಡುವ ಸೌಲಭ್ಯವನ್ನು ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಭಾರತದಲ್ಲಿಯೂ ಇಂತಹ ನಿಯಮ ಜಾರಿಗೆ ಬರುತ್ತಾ ಅನ್ನೋದು ಇನ್ನೂ ಖಚಿತವಾಗಿಲ್ಲ. ಸದ್ಯಕ್ಕೆ ಉಚಿತ ಸೇವೆಯು ಜನವರಿ 2022 ರವರೆಗೆ ಮಾತ್ರ ಲಭ್ಯವಿರುತ್ತದೆ ಎನ್ನಲಾಗುತ್ತಿದ್ದು, ಅಲ್ಲಿಯವರೆಗೆ ವ್ಯಾಪಾರಿ ಫೇಸ್‌ಬುಕ್‌ ಮೂಲಕವೇ ತಮ್ಮ ವ್ಯವಹಾರವನ್ನು ನಡೆಸಬಹುದಾಗಿದೆ.

ಯುಕೆಯಲ್ಲಿ, ಫೇಸ್‌ಬುಕ್ ಇತ್ತೀಚೆಗೆ ಇ-ಕಾಮರ್ಸ್ (e-commerce) ಪ್ಲಾಟ್‌ಫಾರ್ಮ್ ಹರ್ಮ್ಸ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಪ್ರಕಾರ ಮಾರಾಟಗಾರರಿಂದ ಕಮಿಷನ್‌ ಪಡೆಯಲಾಗುತ್ತದೆ. ಡೆಲಿವರಿ ಚಾರ್ಜ್ ಸೇರಿದಂತೆ ಉತ್ಪನ್ನದ ಬೆಲೆಯ ಮೇಲೆ ಕಮಿಷನ್ ವಿಧಿಸಲಾಗುವುದು ಎಂದು ಫೇಸ್‌ಬುಕ್ ಹೇಳಿಕೊಂಡಿದೆ. ಆದರೆ ಫೇಸ್‌ಬುಕ್‌ನ ಹೊಸ ನಿಯಮ ವ್ಯಾಪಾರಿಗಳ ಮೇಲೆ ಅದ್ಯಾವ ಪರಿಣಾಮ ಬೀರುತ್ತೆ ಅನ್ನೋದನ್ನು ಕಾದು ನೋಡಬೇಕಾಗಿದೆ.

ವಿಶ್ವದಾದ್ಯಂತ ಬಹು ಪ್ರಖ್ಯಾತಿಯನ್ನು ಪಡೆದುಕೊಂಡಿರುವ ಫೇಸ್‌ಬುಕ್‌ ಇತ್ತೀಚಿಗಷ್ಟೇ ತನ್ನ ಮಾತ್ರ ಸಂಸ್ಥೆಯ ಹೆಸರನ್ನು ಬದಲಾವಣೆ ಮಾಡಿಕೊಂಡಿದೆ. ಸಾಮಾಜಿಕ ಜಾಲತಾಣ ವನ್ನು ಪರ್ಯಾಯ ವ್ಯವಹಾರದ ಮಾರ್ಗವಾಗಿ ಬದಲಾಯಿಸುವುದು ತನ್ನ ಉದ್ದೇಶ ಎಂದು ಮೆಟಾ ಕಂಪೆನಿಯ ಸಿಇಓ ಮಾರ್ಕ್‌ ಜೂಕರ್‌ ಬರ್ಗ್‌ ಹೇಳಿಕೊಂಡಿದ್ದರು. ಇದೀಗ ಮೆಟಾ (Meta) ಕಂಪನಿ ಗ್ರಾಹಕರ ಸೇವೆ ಶುಲ್ಕ ವಿಧಿಸಲು ಮುಂದಾಗಿದೆ. ಯುಕೆಯಲ್ಲಿ ಹೊಸ ಒಪ್ಪಂದ ಸಕ್ಸಸ್‌ ಆದ್ರೆ ವಿಶ್ವದಾದ್ಯಂತ ಈ ನಿಯಮ ಜಾರಿಯಾಗೋ ಸಾಧ್ಯತೆಯಿದೆ.

ಇದನ್ನೂ ಓದಿ : Meta ಎಂದು ಬದಲಾಯ್ತು Facebook : ಹೊಸ ಹೆಸರು ಘೋಷಿಸಿದ ಮಾರ್ಕ್‌ ಜೂಕರ್‌ಬರ್ಗ್‌

ಇದನ್ನೂ ಓದಿ : Google ಎಚ್ಚರಿಕೆ ! ನಿಮ್ಮ ಫೋನ್‌ಗಳಲ್ಲಿ ಈ 151 ಆಪ್‌ಗಳಿದ್ರೆ ಕೂಡಲೇ ತೆಗೆಯಿರಿ

( Facebook is ready to charge fee from customers )

Comments are closed.