Summer Holiday : ರಾಜ್ಯದಲ್ಲಿ ಏರುತ್ತಲೇ ಇದೆ ತಾಪಮಾನ : ಶಾಲಾರಂಭ ಮುಂದೂಡಿಕೆ ಸಾಧ್ಯತೆ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಎರಡು ಮೂರು ಅಲೆಯ ಕಾರಣಕ್ಕೆ ಮಕ್ಕಳ ಶೈಕ್ಷಣಿಕ ವ್ಯವಸ್ಥೆ ಸಂಪೂರ್ಣ‌ ಹದಗೆಟ್ಟಿತ್ತು.‌ ಮಕ್ಕಳು ಶಾಲೆಯ ಮುಖ ನೋಡೋದೇ ಅಪರೂಪ ಅನ್ನೋ ಸ್ಥಿತಿ ಎದುರಾಗಿತ್ತು. ಹೀಗಾಗಿ ಈ ವರ್ಷ ಶೈಕ್ಷಣಿಕ ಚಟುವಟಿಕೆಯನ್ನು ಮೊದಲೇ ಆರಂಭಿಸಲು ನಿರ್ಧರಿಸಲಾಗಿತ್ತು. ಜೂನ್ ಗೆ ಬದಲಾಗಿ ಮೇ 16 ರಂದು ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿತ್ತು. ಆದರೆ ಈಗ ಶಾಲಾರಂಭದ ಮೇಲೆ ಬಿರುಬೇಸಿಗೆಯ ಕೆಂಗಣ್ಣು ಬಿದ್ದಂತಿದೆ. ಹೀಗಾಗಿ ಬೇಸಿಗೆ ರಜೆ (Summer Holiday) ವಿಸ್ತರಣೆ ಮಾಡಿ, ಶಾಲಾರಂಭವನ್ನು(School Start) ಮುಂದೂಡಿಕೆ ಮಾಡುವ ಕುರಿತು ಶಿಕ್ಷಣ ಇಲಾಖೆ ಗಂಭೀರ ಚಿಂತನೆ ನಡೆಸಿದೆ.

ಹೌದು, ಈ ವರ್ಷ ಶಾಲಾ ಶೈಕ್ಷಣಿಕ ವರ್ಷವನ್ನು ಮೇ 29 ರ ಬದಲಾಗಿ ಮೇ 16 ರಿಂದಲೇ ಆರಂಭಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿ ಆದೇಶ ಹೊರಡಿಸಿತ್ತು. ಕೊರೋನಾ ದಿಂದ ಕಳೆದ ಎರಡು ವರ್ಷ ಶೈಕ್ಷಣಿಕ ಚಟುವಟಿಕೆಯ ಅವಧಿ ಕಡಿತವಾಗಿರೋದರಿಂದ ಈ ವರ್ಷ ಶೈಕ್ಷಣಿಕ ಚಟುವಟಿಕೆಗೆ ಚುರುಕು ಮುಟ್ಟಿಸಲು ಶಿಕ್ಷಣ ಇಲಾಖೆ ಈ ಆದೇಶ ಹೊರಡಿಸಿತ್ತು. ಆದರೆ ಈಗ ರಾಜ್ಯದಾದ್ಯಂತ ಆಗಾಗ ಮಳೆಯಾಗುತ್ತಿದ್ದರೂ ಬಿಸಿಲಿನ ಪ್ರಮಾಣ ಮಿತಿ ಮೀರಿದೆ‌. ಮೇ ಮಧ್ಯ ಭಾಗದಲ್ಲಿ ದಾಖಲಾಗುತ್ತಿದ್ದ ಗರಿಷ್ಠ ಉಷ್ಣಾಂಶ ಈ ಭಾರಿ ಏಪ್ರಿಲ್ ಮಧ್ಯಭಾಗದ ವೇಳೆಯೇ ದಾಖಲಾಗಿದೆ. ಕಲ್ಬುರ್ಗಿ, ಬೀದರ್, ರಾಯಚೂರು,ಕೋಲಾರ ಸೇರಿದಂತೆ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ಗರಿಷ್ಠ ಮಟ್ಟ ವನ್ನು ತಲುಪಿದೆ. ಹೀಗಾಗಿ ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲಾರಂಭವನ್ನು ಮುಂದೂಡಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ಮಕ್ಕಳ ಆರೋಗ್ಯದ ಬಗ್ಗೆ ಯೋಚಿಸಲಾಗ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳು ಕಿಲೋಮೀಟರ್ ಗಟ್ಟಲೇ ನಡೆದುಕೊಂಡು ಬರುವ ಸ್ಥಿತಿ ಇದೆ. ಏರಿಕೆ ಕಂಡಿರೋ ಉಷ್ಣಾಂಶದಿಂದ ಮಕ್ಕಳು ನಿರ್ಜಲೀಕರಣ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗೆ ತುತ್ತಾಗೋ ಸಾಧ್ಯತೆ ಇರೋದರಿಂದ ಮಕ್ಕಳ ಆರೋಗ್ಯ ದೃಷ್ಟಿಯಿಂದ ರಜೆ ಮುಂದೂಡುವ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಯೋಚನೆ ಮಾಡುತ್ತಿದೆ ಎನ್ನಲಾಗುತ್ತಿದೆ.

ಮೇ ರಜೆಯನ್ನು ಜೂನ್ ವರೆಗೆ ವಿಸ್ತರಿಸಿ ವಾಡಿಕೆಯಂತೆ ಮೇ 29 ರಿಂದ ಶಾಲೆ ಆರಂಭಿಸಲು ಚಿಂತನೆ ನಡೆದಿದೆ. ಎಲ್ಲದೇ ಕೊರೋನಾ ನಾಲ್ಕನೇ ಅಲೆಯ ಭೀತಿಯೂ ಎದುರಾಗಿ ಇರುವುರಿಂದ ಮೇ16 ರಿಂದ ಶಾಲಾರಂಭವಾಗೋದು ಬಹುತೇಕ ಅನುಮಾನವಾಗಿದೆ. ಸದ್ಯ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ಅಕಾಲಿಕ ಮಳೆ ಸುರಿಯುತ್ತಿದ್ದು ಇದರಿಂದ ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಏರಿಕೆಯಾಗಲಿದೆ.

ಇದನ್ನೂ ಓದಿ : ಬಿಸಿಲ ಝಳ, ಕೊರೊನಾ ಭೀತಿ : ಮೇ ಅಲ್ಲಾ ಜೂನ್‌ ನಲ್ಲೇ ಶಾಲಾರಂಭ

ಇದನ್ನೂ ಓದಿ : ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ : ರಿಸಲ್ಟ್​ ವೀಕ್ಷಣೆಗೆ ಇಲ್ಲಿದೆ ಮಾರ್ಗ

Summer Holiday Extend School Start Postponed

Comments are closed.