Chandrasheskar death case : ಚಂದ್ರು ಸಾವಿನ ಮರುಸೃಷ್ಟಿ, ಸಮಗ್ರ ತನಿಖೆ ಸಿಎಂ ಬೊಮ್ಮಾಯಿ ಸೂಚನೆ

ಹೊನ್ನಾಳಿ : ಚಂದ್ರು ಸಾವಿನ (Chandrasheskar death case) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ. ಈ ಘಟನೆಯಲ್ಲಿ ಎರಡು ರೀತಿಯ ಸಾಧ್ಯಾ ಸಾಧ್ಯತೆಗಳಿವೆ. ಒಂದು ಕೊಲೆಯಾಗಿರುವ ಸಂಭವವೂ ಇದೆ. ಇನ್ನೊಂದೆಡೆಯಲ್ಲಿ ಕಾರು ನೀರಲ್ಲಿ ಮುಳುಗಿರುವುದರಿಂದ ಅಪಘಾತವಾಗಿರುವ ಸಾಧ್ಯತೆಯಿದೆ. ಹೀಗಾಗಿ ಎರಡೂ ಹಿನ್ನೆಲೆಯಲ್ಲಿ ತನಿಖೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಹೊನ್ನಾಳಿಯಲ್ಲಿರುವ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಮನೆಗೆ ಭೇಟಿ ನೀಡಿರುವ ಸಿಎಂ ಬಸವರಾಜ್ ಬೊಮ್ಮಾಯಿ ಅವರು ರೇಣುಕಾಚಾರ್ಯ ಹಾಗೂ ಚಂದ್ರು ಪೋಷಕರಿಗೆ ಸಾಂತ್ವಾನ ಹೇಳಿದ್ದಾರೆ. ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ನು ಎರಡು ದಿನಗಳಲ್ಲಿ ಮರಣೋತ್ತರ ಪರೀಕ್ಷೆಯ ವರದಿ ಎರಡು ದಿನಗಳಲ್ಲಿ ಬರಲಿದೆ. ಅಲ್ಲದೇ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯಲಾಗುತ್ತಿದೆ ಎಂದಿದ್ದಾರೆ.

Chandrasheskar death case : ಘಟನೆ ಮರುಸೃಷ್ಟಿಸಿ ತನಿಖೆ

ಚಂದ್ರು ಸಾವಿನ ಪ್ರಕರಣದಲ್ಲಿ ಘಟನೆಯ ಹಿನ್ನೆಲೆಯನ್ನು ನೋಡಿದ್ರೆ ಕೊಲೆಯಾಗಿರುವ ಸಾಧ್ಯತೆಯೂ ಇದೆ. ಆದರೆ ಕಾಲುವೆಯಲ್ಲಿ ಕಾರು ಮುಳುಗಿ ಸಾವನ್ನಪ್ಪಿರುವುದರಿಂದ ಇದೊಂದು ಅಪಘಾತವೋ ಅನ್ನೋ ಅನುಮಾನವೂ ಇದೆ. ಆದರೆ ಕಾರಿನ ಹಿಂಬದಿ ಸೀಟ್ ಗೆ ಚಂದ್ರು ಹೇಗೆ ಬಂದಿದ್ದಾನೆ ಅನ್ನೋ ಅನುಮಾನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಕೊಲೆ ಹಾಗೂ ಅಪಘಾತ ಎರಡೂ ಹಿನ್ನೆಲೆಯಲ್ಲಿಯೂ ತನಿಖೆಯನ್ನು ನಡೆಸುವಂತೆ ಪೊಲೀಸರಿಗೆ ಸೂಚನೆಯನ್ನು ನೀಡಿದ್ದೇನೆ. ಸದ್ಯ ಘಟನೆಯನ್ನು ಮರುಸೃಷ್ಟಿಸಿ ತನಿಖೆಯನ್ನು ನಡೆಸಲಾಗುತ್ತಿದೆ. ಗೌರಿಗದ್ದೆಯಿಂದ ಘಟನಾ ಸ್ಥಳದ ವರೆಗಿನ ಘಟನೆಯನ್ನು ಮರು ಸೃಷ್ಟಿ ಮಾಡಿದಾಗ ಸತ್ಯಾಸತ್ಯತೆ ಹೊರಬರುವ ಸಾಧ್ಯತೆಯಿದೆ. ತನಿಖೆ ಅಂತಿಮ ಹಂತಕ್ಕೆ ಬರುವವರೆಗೆ ಯಾವುದೇ ನಿರ್ಧಾರಕ್ಕೆ ಬರಬೇಡಿ ಎಂದು ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ.

ಮರಣೋತ್ತರ ವರದಿ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯಲಾಗುತ್ತಿದೆ. ಪ್ರಕರಣದ ತನಿಖೆಯನ್ನು ನಡೆಸಲು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ. ಇನ್ನು ಪ್ರಕರಣದ ತನಿಖೆಯನ್ನು ಇತರ ತನಿಖಾ ಸಂಸ್ಥೆಗಳಿಗೆ ವಹಿಸುವ ಸಾಧ್ಯತೆಯನ್ನು ಸಿಎಂ ತಳ್ಳಿ ಹಾಕಿದ್ದಾರೆ. ರಾಜ್ಯ ಪೊಲೀಸರೇ ಈ ಪ್ರಕರಣದ ತನಿಖೆಯನ್ನು ನಡೆಸುತ್ತಾರೆ ಎಂದು ಸಿಎಂ ಹೇಳಿದ್ದಾರೆ. ರೇಣುಕಾಚಾರ್ಯ ನನ್ನ ಸಹೋದರ ಇದ್ದಂತೆಯೆ. ಮೊನ್ನೆಯೇ ದೂರವಾಣಿ ಕರೆ ಮಾಡಿ ಸಾಂತ್ವಾನ ಹೇಳಿದ್ದೇನೆ. ಆದರೆ ಮನಸು ತಡೆಯಲಿಲ್ಲ ಹೀಗಾಗಿ ಇಂದು ಹೊನ್ನಾಳಿಗೆ ಭೇಟಿ ನೀಡಿದ್ದೇನೆ.

ಇದನ್ನೂ ಓದಿ : The secret of Chandrasekhar’s death : ಪೊಲೀಸರ ಕೈ ಸೇರಿದ ಡಯಾಟಮ್ ವರದಿ : ಬಯಲಾಗುತ್ತಾ ಹೊನ್ನಾಳಿ ಚಂದ್ರಶೇಖರ್ ಸಾವಿನ ರಹಸ್ಯ ?

ಇದನ್ನೂ ಓದಿ : Tirupati Couple Suicide : ತಿರುಪತಿಯ ವಸತಿಗೃಹದಲ್ಲಿ ಪ್ರೇಮಿಗಳ ಆತ್ಮಹತ್ಯೆ

Chandrasheskar death case re-enactment comprehensive investigation Karnataka CM Basavaraj Bommai notice

Comments are closed.