Application for pratibha puraskara: ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾವು ಪ್ರಸಕ್ತ ಸಾಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ  ಪ್ರೋತ್ಸಾಹಿಸುವ ನೀಡುವ ನಿಟ್ಟಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ (SSLC And Puc )ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಂದ “ಪ್ರತಿಭಾ ಪುರಸ್ಕಾರ”( Application for pratibha puraskara)ಕ್ಕೆ ಅರ್ಜಿ ಆಹ್ವಾನಿಸಿದೆ.

ಪ್ರತಿವರ್ಷ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾವು ಪ್ರತಿಭಾವಂತ ಮಕ್ಕಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹಿಸುತ್ತಲೇ ಬಂದಿದೆ. ಎಸ್‌.ಎಸ್‌.ಎಲ್‌.ಸಿ (SSLC), ಪಿ.ಯು.ಸಿ (PUC) ಅಥವಾ 10+2 ಪರೀಕ್ಷೆಗಳಲ್ಲಿ ಶೇಕಡಾ 98 ಕ್ಕಿಂತ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಮಕ್ಕಳಿಗೆ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ನೆರವು ನೀಡಿ ಪ್ರೋತ್ಸಾಹಿಸುತ್ತಿದೆ.

ಪ್ರತಿ ವರ್ಷದಂತೆ ಈ ಬಾರಿಯೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾವು ಮಕ್ಕಳ ಶೈಕ್ಷಣಿಕ ಏಳ್ಗೆಗಾಗಿ ಪ್ರತಿಭಾ ಪುರಾಸ್ಕಾರ ನೀಡಲು ಮುಂದಾಗಿದೆ. 2022 ನೇ ಸಾಲಿನಲ್ಲಿ ಎಸ್‌.ಎಸ್‌.ಎಲ್‌.ಸಿ (SSLC), ಪಿ.ಯು.ಸಿ (PUC) ಅಥವಾ 10+2 ಪರೀಕ್ಷೆಗಳಲ್ಲಿ ಶೇಕಡಾ 98 ಕ್ಕಿಂತ ಹೆಚ್ಚು ಅಂಕ ಗಳಿಸಿ ಉತ್ತೀರ್ಣರಾದ ಮಕ್ಕಳಿಗೆ ‘ಪ್ರತಿಭಾ ಪುರಸ್ಕಾರ’ ನೀಡಲು ಅರ್ಜಿ ಆಹ್ವಾನಿಸಿದೆ. ಆಸಕ್ತ ಮಕ್ಕಳು ದೃಢೀಕೃತ ಅಂಕಪಟ್ಟಿ ಮತ್ತು ಅರ್ಜಿ ನಮೂನೆಯಲ್ಲಿರುವ ವಿವರಗಳನ್ನು ಭರ್ತಿ ಮಾಡಿ ದಿನಾಂಕ 20–8–2022 ರೊಳಗಾಗಿ ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಇವರಿಗೆ ಅರ್ಜಿ ಸಲ್ಲಿಸಲು ಕೋರಿದೆ.

ಪ್ರತಿಭಾ ಪುರಸ್ಕಾರ ಅರ್ಜಿಗಾಗಿ ಈ ಕೆಳಗಿನ ಪಿಡಿಎಫ್‌ ಡೌನ್‌ಲೋಡ್‌ ಮಾಡಿಕೊಳ್ಳಿ :

ವಿದ್ಯಾರ್ಥಿಗಳು ಸ್ವ ವಿವರ, ಅಂಕ ಪಟ್ಟಿ, ಜಾತಿ ಪ್ರಮಾಣ ಪತ್ರ ಹಾಗೂ ಇತ್ತೀಚಿನ ಒಂದು ಭಾವಚಿತ್ರದೊಂದಿಗೆ  ಬೆಂಗಳೂರು ಗಾಯತ್ರಿ ಭವನ, ನಂಬರ್ 3070 ,14ನೇ ಕ್ರಾಸ್, 9ನೇ ಮೇನ್, BSK 2ನೇ ಸ್ಟೇಜ್ ನಲ್ಲಿ ಇರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಕಚೇರಿಗೆ ಆಗಸ್ಟ್‌ 20 ರ ಒಳಗೆ ಅರ್ಜಿ ಸಲ್ಲಿಸಬಹುದು.ಇನ್ನೂ ಹೆಚ್ಚಿನ ಮಾಹಿತಿಗೆ  ದೂರವಾಣಿ ಸಂಖ್ಯೆ 9945840620ಗೆ ಸಂಪರ್ಕಿಸಬಹುದು ಅಥವಾ ಕಚೇರಿಗೆ ಭೇಟಿ ನೀಡಬಹುದು ಎಂದು  ಮಹಾಸಭಾ ಅಧ್ಯಕ್ಷರು ತಿಳಿಸಿದ್ದಾರೆ.

The Application for pratibha puraskara in 2022

ಇದನ್ನು ಓದಿ: NEET UG: ನೀಟ್ ಯುಜಿ ಪರೀಕ್ಷೆ ನಾಳೆ; ಪ್ರಮುಖ ಸೂಚನೆಗಳು: ವರದಿ ಮಾಡುವ ಸಮಯ, ಇತರ ವಿವರಗಳನ್ನು ಇಲ್ಲಿ ಪರಿಶೀಲಿಸಿ

ಇದನ್ನು ಓದಿ:sslc students : 2022-23ನೇ ಸಾಲಿನ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಸ್ವರೂಪ ಬದಲು

ಇದನ್ನು ಓದಿ:CBSE ತರಗತಿ 10, ತರಗತಿ 12 ಫಲಿತಾಂಶ ದಿನಾಂಕ ಮತ್ತು ಅಧಿಕೃತ ವೆಬ್‌ಸೈಟ್ ಲಿಂಕ್

Comments are closed.