ಸಿಂಗಾಪುರ್ ಓಪನ್ ಫೈನಲ್ ಪ್ರಶಸ್ತಿ ಗೆದ್ದ ಪಿವಿ ಸಿಂಧು

ಪಿವಿ ಸಿಂಧು(PV Sindhu) ಅವರು ಚೀನಾದ ವಾಂಗ್ ಝಿ ಯಿ ಅವರನ್ನು 21-9, 11-21, 21-15 ರಿಂದ ಮೂರು ಗೇಮ್‌ಗಳಲ್ಲಿ ಸೋಲಿಸುವ ಮೂಲಕ 2022 ಸಿಂಗಪೂರ್ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

ಭಾರತದ ಷಟ್ಲರ್ ಪಿವಿ ಸಿಂಧು ಅವರು ಸೆಮಿಫೈನಲ್‌ನಲ್ಲಿ ಜಪಾನ್‌ನ ಸೈನಾ ಕವಾಕಮಿ ಅವರನ್ನು ಸೋಲಿಸಿ ಸಿಂಗಾಪುರ ಓಪನ್ 2022 ರ ಮಹಿಳಾ ಸಿಂಗಲ್ಸ್ ಫೈನಲ್‌ಗೆ ಪ್ರವೇಶಿಸಿದ್ದರು.ವಿಶ್ವದ 7ನೇ ಶ್ರೇಯಾಂಕದ ಸಿಂಧು ಅವರು 31 ನಿಮಿಷಗಳ ಕಾಲ ನಡೆದ ತಮ್ಮ ಸೆಮಿಫೈನಲ್ಸ್ ನಲ್ಲಿ ವಿಶ್ವದ 38ನೇ ಶ್ರೇಯಾಂಕಿತ ಕವಾಕಮಿ ಅವರನ್ನು 21-15, 21-7 ಸೆಟ್‌ಗಳಿಂದ ಸೋಲಿಸಿದರು. ಮಾಜಿ ವಿಶ್ವ ಚಾಂಪಿಯನ್ ಆದ ಸಿಂಧು ಭಾನುವಾರದ ಫೈನಲ್‌ನಲ್ಲಿ, ಜಪಾನ್‌ನ ಅಯಾ ಒಹೊರಿ ಮತ್ತು ಚೀನಾದ ಶಟ್ಲರ್ ವಾಂಗ್ ಝಿ ಯಿ ನಡುವಿನ ಪಂದ್ಯದ ವಿಜೇತೆಯಾದ ವಾಂಗ್ ಝಿ ಯಿಯನ್ನು ಸೋಲಿಸಿ ಸಿಂಗಪೂರ್ ಟೈಟಲ್ಅನ್ನು ತಮ್ಮದಾಗಿಸಿಕೊಂಡಿದ್ದಾರೆ.

ಜನವರಿ ಮತ್ತು ಮಾರ್ಚ್‌ನಲ್ಲಿ ಕ್ರಮವಾಗಿ ಸೈಯದ್ ಮೋದಿ ಇಂಟರ್‌ನ್ಯಾಶನಲ್, ಸ್ವಿಸ್ ಓಪನ್ ಬಿಡಬ್ಲ್ಯೂಎಫ್ ಸೂಪರ್ 300 ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಸಿಂಧು ೨೦೨೦ ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಬ್ಯಾಡ್ಮಿಂಟನ್ ನಲ್ಲಿ ಕಂಚಿನ ಪದಕವನ್ನೂ ಮುಡಿಗೇರಿಸಿಕೊಂಡಿದ್ದರು. ಹಾಗೆಯೇ ಸಿಂಗಾಪುರದ ಓಪನ್ ಸಹಾ ಸೂಪರ್ 500 ಪಂದ್ಯಾವಳಿಯಾಗಿತ್ತು.

ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಸೆಮಿಫೈನಲ್ ಪಂದ್ಯಾಟದಲ್ಲಿ ಉತ್ತಮ ಸ್ಮ್ಯಾಷ್‌ಗಳು ಮತ್ತು ಚತುರ ಡ್ರಾಪ್ ಹೊಡೆತಗಳ ಮೂಲಕ ತಮ್ಮ ಜಪಾನಿನ ಎದುರಾಳಿಯನ್ನು ನೇರ ೨-೦ ಸೆಟ್ ನಲ್ಲಿ ಸೋಲಿಸಿ ಜಯಶಾಲಿ ಆಗಿ ಹೊರಹೊಮ್ಮಿದ್ದರು. ಫೈನಲ್ ನಲ್ಲಿ ಚೀನಾದ ಬ್ಯಾಡ್ಮಿಂಟನ್ ಆಟಗಾರ್ತಿಯಾದ ವಾಂಗ್ ಝಿ ಯಿ ೨-೧ ಸೆಟ್ ನ ಮೂಲಕ ವಿಜಯಶಾಲಿ ಆಗಿ ಭಾರತದ ಕೀರ್ತಿಪತಾಕೆಯನ್ನು ಹಾರಿಸಿದ್ದಾರೆ .
ವಿಶ್ವ ರಾಂಕಿಂಗ್ ನಲ್ಲಿ ಪಿ.ವಿ.ಸಿಂಧು ೭ನೇ ಸ್ಥಾನದಲ್ಲಿದ್ದರೆ ರನ್ನರ್ ಅಪ್ ಆದ ವಾಂಗ್ ಝಿ ಯಿ ವಿಶ್ವ ರಾಂಕಿಂಗ್ ನಲ್ಲಿ ೧೧ನೇ ಸ್ಥಾನದಲ್ಲಿದ್ದಾರೆ.
ತಮ್ಮ ಅಗ್ಗ್ರೆಸ್ಸಿವ್ ಆಟಕ್ಕೆ ಹೆಸರುವಾಸಿಯಾಗಿರುವ ಸಿಂಧು ೨೦೧೬ರ ರಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಬೆಳ್ಳಿ ಮತ್ತು ೨೦೨೦ರ್ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ಗೆಲ್ಲಿಸಿಕೊಟ್ಟಿದ್ದರು.

ಇದನ್ನೂ ಓದಿ : Assam Floods :ಅಸ್ಸಾಂನಲ್ಲಿ ಪತ್ತೆಯಾಯ್ತು ಜಪಾನೀಸ್ ಎನ್ಸೆಫಾಲಿಟಿಸ್ ಸೋಂಕು

ಇದನ್ನೂ ಓದಿ: Bundelkhand Expressway: ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

(PV Sindhu)

Comments are closed.