CBSE Result 2021 : ಇಂದು ಸಿಬಿಎಸ್ಇ ಫಲಿತಾಂಶ ಪ್ರಕಟ : ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್‌ ಮಾಡಿ

ನವದೆಹಲಿ : ಸಿಇಎಸ್‌ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) ಇಂದು 12 ನೇ ತರಗತಿ ಫಲಿತಾಂಶಗಳನ್ನು ಘೋಷಿಸಣೆ ಮಾಡಲಿದೆ. ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಪರೀಕ್ಷೆ ನಡೆದಿರಲಿಲ್ಲ. ಹೀಗಾಗಿ ಹೊಸ ಸೂತ್ರದ ಅಡಿಯಲ್ಲಿ ಫಲಿತಾಂಶ ಪ್ರಕಟಿಸಲು ಸಿಬಿಎಸ್‌ಇ ಬೋರ್ಡ್‌ ಮುಂದಾಗಿದೆ.

ಕೊರೊನಾ ವೈರಸ್‌ ಸೋಂಕಿನ ಬೆನ್ನಲ್ಲೇ ಪರೀಕ್ಷೆ ನಡೆಸದಂತೆ ಕೇಂದ್ರ ಸರಕಾರ ಸೂಚನೆಯನ್ನು ನೀಡಿತ್ತು. ಈ ಹಿನ್ನೆಲೆಯಲ್ಲಿ ಸಿಬಿಎಸ್‌ಇ 12ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ನಡೆಸಿರಲಿಲಿಲ್ಲ. ಹೀಗಾಗಿ ಈ ಬಾರಿ ಮಂಡಳಿಯು 30:40:30 ರ ಹೊಸ ಸೂತ್ರದಡಿಯಲ್ಲಿ ಫಲಿತಾಂಶವನ್ನು ಪ್ರಕಟಿಸಲಿದೆ.

ವಿದ್ಯಾರ್ಥಿಗಳು ಸಿಬಿಎಸ್‌ಇ ಬೋರ್ಡ್‌ನ ಅಧಿಕೃತ ವೆಬ್‌ಸೈಟ್‌ ಮೂಲಕ ಫಲಿತಾಂಶವನ್ನು ವೀಕ್ಷಣೆ ಮಾಡಬಹುದಾಗಿದೆ. ಫಲಿತಾಂಶಕ್ಕಾಗಿ cbse.nic.in ಫಲಿತಾಂಶವನ್ನು ವೀಕ್ಷಣೆ ಮಾಡಬಹುದಾಗಿದೆ. ಅಲ್ಲದೇ cbseresults.nic.in ವಿದ್ಯಾರ್ಥಿಗಳು ಡಿಜಿಲಾಕರ್ ನಲ್ಲಿ ಫಲಿತಾಂಶಗಳನ್ನು ವೀಕ್ಷಿಸಬಹುದಾಗಿದೆ.

Comments are closed.