ಆಮ್ಆದ್ಮಿ 3ನೇ ಪಟ್ಟಿ ಬಿಡುಗಡೆ : 28 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಫೈನಲ್‌

ಬೆಂಗಳೂರು : (AAP 3rd list) ರಾಜ್ಯ ರಾಜಕೀಯ ದಿನೆ ದಿನೇ ರಂಗೇರುತ್ತಿದ್ದು ಚುನಾವಣೆ ಸಮೀಪಿಸುತ್ತಿದೆ. ಈ ಮಧ್ಯೆ ಪಕ್ಷಗಳು ಅಭ್ಯರ್ಥಿಗಳ ಟಿಕೆಟ್‌ ಫೈನಲ್‌ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. 224 ಸದಸ್ಯ ಬಲ ಹೊಂದಿರುವ ವಿಧಾನಸಭೆ ಚುನಾವಣೆ ಮೇ 10 ರಂದು ನಡೆಯಲಿದ್ದು, ಕಾಂಗ್ರೆಸ್‌ ಎರಡು ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜೆಡಿಎಸ್‌ ಒಂದು ಹಂತದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆದರೆ ಆಮ್‌ ಆದ್ಮಿ ಪಕ್ಷ ಈ ವರೆಗೆ ಎರಡು ಹಂತದಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಇಂದು 28 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಎಎಪಿ ಪಕ್ಷದಿಂದ ಈಗಾಗಲೇ ರಾಜ್ಯ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಎರಡು ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಇಂದು 28 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 168 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದಿದೆ. ಎಎಪಿ ಈವರೆಗೆ ಬಿಡುಗಡೆ ಮಾಡಿರುವಂತ ಪಟ್ಟಿಯಲ್ಲಿ 16 ರೈತರು, 13 ಮಹಿಳೆಯರು, 18 ವಕೀಲರು, 10 ವೈದ್ಯರು, 10 ಇಂಜಿನಿಯರ್ ಗಳು, ಡಾಕ್ಟರೇಟ್ ಹೊಂದಿರುವ ಅಭ್ಯರ್ಥಿಗಳು-5, ಮಾಸ್ಟರ್ ಡಿಗ್ರಿ ಹೊಂದಿರುವ 41 ಅಭ್ಯರ್ಥಿಗಳು, ಪದವಿ ಹೊಂದಿರುವ 82 ಅಭ್ಯರ್ಥಿಗಳು ಹಾಗೂ 28 ಅಭ್ಯರ್ಥಿಗಳು ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆ ಎದುರಿಸುತ್ತಿದ್ದಾರೆ.

ಹಾಗಿದ್ದರೆ ಯಾವ ಎಎಪಿಯಿಂದ ಯಾವ ಕ್ಷೇತ್ರಕ್ಕೆ ಯಾರು ಅಭ್ಯರ್ಥಿಗಳು ಎನ್ನುವ ಮಾಹಿತಿ ಇಲ್ಲಿದೆ
ನಿಪ್ಪಾಣಿ – ರಾಜೆಶ್‌ ಅಣ್ಣಾಸಾಹೇಬ ಬಸವಣ್ಣ
ಬೆಳಗಾವಿ ಉತ್ತರ – ರಾಜಕುಮಾರ ಟೋಪಣ್ಣವರ
ಸೌದತ್ತಿ ಯಲ್ಲಮ್ಮ- ಬಾಪುಗೌಡ ಪಾಟೀಲ
ದೇವರ ಹಿಪ್ಪರಗಿ – ಬಸವರಾಜ ಹಿಂಗಳಗಿ
ಸಿಂದಗಿ – ಮುರುಗೆಪ್ಪಗೌಡ
ಸೇಡಂ – ಶಂಕರ ಬಂಡಿ
ಆಳಂದ – ಶಿವಕುಮಾರ್‌ ಖೇಡ್‌
ಬೀದರ್‌ – ಗುಲಾಂ ಅಲಿ
ಕುಷ್ಟಗಿ – ಕನಕಪ್ಪ ಮಳಗಾವಿ
ಕೊಪ್ಪಳ – ಎಂ.ಕೆ. ಸಾಹೇಬ್‌ ನಾಗೇಶನಹಳ್ಳಿ
ಹುಬ್ಬಳ್ಳಿ-ದಾರವಾಢ ಪಶ್ಚಿಮ – ಅರವಿಂದ ಎಮ್‌
ಹಿರೇಕೆರೂರು – ರಾಜಶೇಖರ್‌ ದೂಡಿಹಳ್ಳಿ
ಹೊಳಲ್ಕೆರೆ – ಮಹಾಂತೇಶ
ತೀರ್ಥಹಳ್ಳಿ – ಶಿವಕುಮಾರ್‌
ಶಿಕಾರಿಪುರ – ಚಂದ್ರಕಾಂತ ರೇವಣಕರ
ಚಿಕ್ಕಮಗಳೂರು – ಈರೇಗೌಡ
ಕಡೂರು – ರಾಜೇಶ್ವರಿ ಬಿ.ಎಚ್‌
ಚಿಕ್ಕನಾಯಕನಹಳ್ಳಿ – ನಿಂಗರಾಜು ಸಿ
ತುಮಕೂರು ನಗರ – ಮೊಹಮ್ಮದ್‌ ಗೌಸ್‌
ಚಿಕ್ಕ ಬಳ್ಳಾಪುರ – ನಂದಿ ಬಾಷಾ
ಯಲಹಂಕ – ಪುಟ್ಟಣ್ಣ ಮಂಜುನಾಥ್‌
ಸರ್ವಜ್ಞನಗರ – ಮೊಹಮ್ಮದ್‌ ಇಬ್ರಾಹಿಂ
ಗಾಂಧಿನಗರ – ಗೋಪಿನಾಥ್‌
ಜಯನಗರ – ಮಹಾಲಕ್ಷ್ಮಿ
ಶ್ರೀ ರಂಗಪಟ್ಟಣ – ಸಿ.ಎಸ್.‌ ವೆಂಕಟೇಶ್‌
ಹೊಳೆನರಸೀಪುರ – ಶಿವಸ್ವಾಮಿ
ಅರಕಲಗೂಡು – ಜವರೇಗೌಡ
ಹನೂರು – ಹರೀಶ್‌

ಇದನ್ನೂ ಓದಿ : ಅಧಿಕಾರಕ್ಕೆ ಬಂದರೆ ಕೆಎಂಎಫ್‌ ಉನ್ನತೀಕರಣಕ್ಕೆ ಆದ್ಯತೆ : ಕಾಂಗ್ರೆಸ್‌ ಹೊಸ ಭರವಸೆ

ಇದನ್ನೂ ಓದಿ : ಸಿಆರ್‌ಪಿಎಫ್‌ ನೇಮಕಾತಿ ಪರೀಕ್ಷೆ 2023 : ಹಿಂದಿ, ಇಂಗ್ಲಿಷ್‌ ಕಡ್ಡಾಯ ತಕ್ಷಣವೇ ಸಡಿಲಿಸಿ ; ಸಿದ್ದು ಆಗ್ರಹ

AAP 3rd list: AAP 3rd list released: Candidates for 28 constituencies final

Comments are closed.