Congress 3rd list : ಕಾಂಗ್ರೆಸ್‌ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ

ಬೆಂಗಳೂರು : (Congress 3rd list ) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನಿರಾಯಾಸವಾಗಿ ಬಿಡುಗಡೆ ಮಾಡಿ ಗೆದ್ದಿದ್ದ ಕಾಂಗ್ರೆಸ್‌ಗೆ (Congress) ಉಳಿದಿರುವ 100 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿತ್ತು.ಕಾಂಗ್ರೆಸ್‌ ಪಕ್ಷ ಮೊದಲ ಹಂತದಲ್ಲಿ 124 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ನಂತರದಲ್ಲಿ ಅಳೆದು ತೂಗಿ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸಿದ್ದು, ಎರಡನೇ ಹಂತದಲ್ಲಿ ಒಟ್ಟು 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಫೈನಲ್‌ ಮಾಡಲಾಗಿದೆ.ಇದೀಗ ಮೂರನೇ ಹಂತದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 43 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೂರನೇ ಪಟ್ಟಿ ಹೀಗಿದೆ.

ಅರಭಾವಿ ಕ್ಷೇತ್ರ-ಅರವಿಂದ ದಳವಾಯಿ
ಕೋಲಾರ ಕ್ಷೇತ್ರ-ಕೊತ್ತೂರು ಮಂಜುನಾಥ
ಚಿಕ್ಕಪೇಟೆ ಕ್ಷೇತ್ರ-ಆರ್.ವಿ.ದೇವರಾಜ್​
ಅರಸೀಕೆರೆ ಕ್ಷೇತ್ರ-ಕೆ.ಎಂ.ಶಿವಲಿಂಗೇಗೌಡ
ಬೊಮ್ಮನಹಳ್ಳಿ ಕ್ಷೇತ್ರ-ಉಮಾಪತಿ ಶ್ರೀನಿವಾಸಗೌಡ
ಕುಂದಗೋಳ ಕ್ಷೇತ್ರ-ಕುಸುಮಾ ಶಿವಳ್ಳಿ
ರಾಯಬಾಗ ಕ್ಷೇತ್ರ-ಮಹಾವೀರ ಮೋಹಿತ್​
ಬೆಳಗಾವಿ ಉತ್ತರ ಕ್ಷೇತ್ರ-ಆಸೀಫ್ ಸೇಠ್​
ಬೆಳಗಾವಿ ದಕ್ಷಿಣ ಕ್ಷೇತ್ರ-ಪ್ರಭಾವತಿ ಮಾಸ್ತಿ ಮರಡಿ
ತೇರದಾಳ ಕ್ಷೇತ್ರ-ಸಿದ್ದಪ್ಪ ರಾಮಪ್ಪ ಕೊಣ್ಣೂರು
ದೇವರಹಿಪ್ಪರಗಿ-ಶರಣಪ್ಪ ಟಿ.ಸುಣಗಾರ
ಮೂಡಿಗೆರೆ ಕ್ಷೇತ್ರ-ನಯನಾ ಜ್ಯೋತಿ ಜವಾರ್(ಮೋಟಮ್ಮ ಪುತ್ರಿ)
ಸಿಂದಗಿ ಕ್ಷೇತ್ರ-ಅಶೋಕ ಎಂ.ಮನಗೂಳಿ
ಕಲಬುರಗಿ ಗ್ರಾಮಾಂತರ ಕ್ಷೇತ್ರ-ರೇವೂನಾಯ್ಕ್​ ಬೆಳಮಗಿ
ಔರಾದ್ ಕ್ಷೇತ್ರ-ಡಾ.ಶಿಂಧೆ ಭೀಮಸೇನ್​ ರಾವ್​
ಮಾನ್ವಿ ಕ್ಷೇತ್ರ-ಜಿ.ಹಂಪಯ್ಯ ನಾಯಕ
ದೇವದುರ್ಗ ಕ್ಷೇತ್ರ-ಶ್ರೀದೇವಿ ಆರ್.ನಾಯಕ
ಸಿಂಧನೂರು ಕ್ಷೇತ್ರ-ಹಂಪನಗೌಡ ಬಾದರ್ಲಿ
ಶಿರಹಟ್ಟಿ ಕ್ಷೇತ್ರ-ಸುಜಾತಾ ಎನ್.ದೊಡ್ಮನಿ
ನವಲಗುಂದ ಕ್ಷೇತ್ರ-ಎನ್.ಹೆಚ್.ಕೋನರೆಡ್ಡಿ
ಕುಮಟಾ ಕ್ಷೇತ್ರ-ನಿವೇದಿತ್ ಆಳ್ವಾ
ಸಿರುಗುಪ್ಪ ಕ್ಷೇತ್ರ-ಬಿ.ಎಂ.ನಾಗರಾಜ್​
ಬಳ್ಳಾರಿ ನಗರ ಕ್ಷೇತ್ರ-ಭರತ್​ ರೆಡ್ಡಿ
ಜಗಳೂರು ಕ್ಷೇತ್ರ-ಬಿ.ದೇವೇಂದ್ರಪ್ಪ
ಹರಪನಹಳ್ಳಿ ಕ್ಷೇತ್ರ-ಎನ್.ಕೊಟ್ರೇಶ್​
ಹೊನ್ನಾಳಿ ಕ್ಷೇತ್ರ-ಡಿ.ಜಿ.ಶಾಂತನಗೌಡ
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ-ಡಾ.ಶ್ರೀನಿವಾಸ ಕರಿಯಣ್ಣ
ಶಿವಮೊಗ್ಗ ನಗರ ಕ್ಷೇತ್ರ-ಹೆಚ್.ಸಿ.ಯೋಗೇಶ್​
ಶಿಕಾರಿಪುರ ಕ್ಷೇತ್ರ-ಜಿ.ಬಿ.ಮಾಲ್ತೇಶ್​
ಕಾರ್ಕಳ ಕ್ಷೇತ್ರ-ಉದಯ್ ಶೆಟ್ಟಿ
ತರೀಕೆರೆ ಕ್ಷೇತ್ರ-ಜಿ.ಹೆಚ್.ಶ್ರೀನಿವಾಸ
ತುಮಕೂರು ಗ್ರಾಮಾಂತರ ಕ್ಷೇತ್ರ-ಜಿ.ಹೆಚ್.ಷಣ್ಮುಖಪ್ಪ ಯಾದವ್​
ಚಿಕ್ಕಬಳ್ಳಾಪುರ ಕ್ಷೇತ್ರ-ಪ್ರದೀಪ್ ಈಶ್ವರ್ ಅಯ್ಯರ್​
ದಾಸರಹಳ್ಳಿ ಕ್ಷೇತ್ರ-ಧನಂಜಯ ಗಂಗಾಧರಯ್ಯ
ಬೆಂಗಳೂರು ದಕ್ಷಿಣ ಕ್ಷೇತ್ರ-ಆರ್.ಕೆ.ರಮೇಶ್​
ಚನ್ನಪಟ್ಟಣ ಕ್ಷೇತ್ರ-ಎಸ್.ಗಂಗಾಧರ್​
ಮದ್ದೂರು ಕ್ಷೇತ್ರ-ಕೆ.ಎಂ.ಉದಯ್​
ಹಾಸನ ಕ್ಷೇತ್ರ-ಬನವಾಸಿ ರಂಗಸ್ವಾಮಿ
ಮಂಗಳೂರು ನಗರ ದಕ್ಷಿಣ ಕ್ಷೇತ್ರ-ಜಾನ್​ ರಿಚರ್ಡ್ ಲೋಬೋ
ಪುತ್ತೂರು ಕ್ಷೇತ್ರ-ಅಶೋಕ್ ಕುಮಾರ್ ರೈ
ಮೈಸೂರಿನ ಕೃಷ್ಣರಾಜ ಕ್ಷೇತ್ರ-ಎಂ.ಕೆ.ಸೋಮಶೇಖರ್​
ಮೈಸೂರಿನ ಚಾಮರಾಜ ಕ್ಷೇತ್ರ-ಕೆ.ಹರೀಶ್ ಗೌಡ

Congress 3rd list: Congress published the third list of candidates for 43 constituencies

ಇನ್ನೂ ಕೋಲಾರದಲ್ಲೂ ಸಿದ್ದರಾಮಯ್ಯ ಸ್ಪರ್ದಿಸಲು ಇಚ್ಚಿಸಿದ್ದು, ಹೈಕಮಾಂಡ್‌ ಟಿಕೆಟ್‌ ನೀಡುತ್ತಾ ಎನ್ನುವ ಕುತೂಹಲವಿತ್ತು. ಆದರೆ ಸಿದ್ದರಾಮಯ್ಯ ಅವರಿಗೆ ಕೋಲಾರ ಟಿಕೆಟ್​ ನೀಡಿಲ್ಲ. ಬದಲಿಗೆ ಕೋಲಾರ ಟಿಕೆಟ್​ ಕೊತ್ತೂರು ಮಂಜುನಾಥ್ ಅವರಿಗೆ ನೀಡಲಾಗಿದೆ. ಇದರಿಂದ ಸಿದ್ದರಾಮಯ್ಯ ವರುಣಾದಿಂದ ಮಾತ್ರ ಸ್ಪರ್ಧೆ ಫಿಕ್ಸ್ ಆಗಿದೆ.

ಇದನ್ನೂ ಓದಿ : Rahul Gandhi to Kolar : ನಾಳೆ ಕೋಲಾರಕ್ಕೆ ರಾಹುಲ್‌ ಗಾಂಧಿ ಆಗಮನ: ʻಜೈ ಭಾರತ್ʼ ರ್ಯಾಲಿಯಲ್ಲಿ ಭಾಗಿ

ಇದನ್ನೂ ಓದಿ : ಬಿಜೆಪಿಗೆ ಬಹುಮತ ಬಂದ್ರೆ ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ : ಏನಿದು ಬಿಜೆಪಿ ಲೆಕ್ಕಾಚಾರ ?

Congress 3rd list: Congress published the third list of candidates for 43 constituencies

Comments are closed.