ನಟ ಚೇತನ್ ವೀಸಾ ರದ್ದು ಮಾಡಿದ ಕೇಂದ್ರ ಸರಕಾರ

ನಟ ಚೇತನ್‌ ಕುಮಾರ್‌ ಎಂದರೆ ವಿವಾದತ್ಮಾಕ ಹೇಳಿಕೆ ಎನ್ನುವಂತೆ ಆಗಿದೆ. ಯಾಕೆಂದರೆ ನಟ ಚೇತನ್‌ ಒಂದಲ್ಲಾ ಒಂದು ಹಿಂದೂ ವಿರುದ್ದವಾಗಿ ಹೇಳಿಕೆಯನ್ನು ನೀಡುತ್ತಾ ಬಂದಿದ್ದಾರೆ. ಇದರಿಂದಾಗಿ ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಇದೀಗ ನಟ ಚೇತನ್‌ ಕುಮಾರ್‌ ಅವರ ಸಾಗರೋತ್ತರ ವೀಸಾವನ್ನು (Actor Chetan Kumar visa Cancel) ಕೇಂದ್ರ ಸರಕಾರ ರದ್ದುಗೊಳಿಸಿ, ಕೇಂದ್ರ ಗೃಹ ಇಲಾಖೆ ನೋಟಿಸ್‌ ಜಾರಿ ಮಾಡಿದೆ.

ನಟ ಚೇತನ್‌ ಸಾಗರೋತ್ತರ ಭಾರತೀಯ ನಾಗರೀಕ (ಓಸಿಐ) ವೀಸಾವನ್ನು ಹೊಂದಿದ್ದಾರೆ. ಈ ಕಾರಣದಿಂದಲೇ ಅವರು ಹೋರಾಟಕ್ಕೆ ಇಲ್ಲಿ ಹೆಚ್ಚು ಸುದ್ದಿಯಾಗಿದ್ದರು. ನಟ ಚೇತನ್‌ ಮಾರ್ಚ್‌ 28 ರಂದು ವಿದೇಶಿಯರ ಪ್ರಾದೇಶಿಕ ನೊಂದಣಿ ಕಚೇರಿಯಿಂದ ಪತ್ರವನ್ನು ಪಡೆದಿದ್ದಾರೆ. ಪತ್ರವನ್ನು ಪಡೆದ 15 ದಿನಗಳಲ್ಲಿ ಚೇತನ್‌ ಓಸಿಐ ಕಾರ್ಡ್‌ನ್ನು ಹಿಂದಿರುಗಿಸುವಂತೆ ಸೂಚಿಸಲಾಗಿದೆ. ಅದರಲ್ಲೂ ರಾಜಕೀಯ ಪಕ್ಷವನ್ನು ಟೀಕಿಸುತ್ತಾ ಬಂದಿದ್ದು, ಹಿಂದುತ್ವವನ್ನು ಪ್ರಶ್ನಿಸಿ ಟ್ವೀಟ್‌ ಮಾಡಿದ್ದಕ್ಕಾಗಿ ಬೆಂಗಳೂರು ಪೊಲೀಸರು ಇತ್ತೀಚೆಗೆಷ್ಟೇ (ಮಾರ್ಚ್ 21) ನಟ ಚೇತನ್‌ನ್ನು ಬಂಧಿಸಿದ್ದಾರೆ.

ಓಸಿಐ ವೀಸಾ ರದ್ದುಗೊಳಿಸಿದ ಬೆನ್ನಲ್ಲೇ ಮಾಧ್ಯವುದವರೊಂದಿಗೆ ಮಾತನಾಡಿದ ನಟ ಚೇತನ್‌, “23 ವರ್ಷಗಳ ಕಾಲ ನಾನು ಇದ್ದಿದ್ದು, ಓದಿದ್ದು ಅಮೆರಿಕಾದಲ್ಲಿ. ಆ ನಂತರ, ಸೇವೆ ಸಲ್ಲಿಸಲು ಭಾರತಕ್ಕೆ ಬಂದಿರುವೆ. ಆದಾದ ನಂತರ ಸಿನಿಮಾ ಸೇರಿದಂತೆ ಸಾಕಷ್ಟು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಹೋರಾಟ ಮಾಡಿ ಆದಿವಾಸಿಗಳಿಗಾಗಿ 528 ಮನೆಗಳನ್ನು ಕಟ್ಟಿಸಿದ್ದೇನೆ. ನಮ್ಮ ಸಿದ್ದಾಂತ, ಅಂಬೇಡ್ಕರ್ ವಾದ, ಪೆರಿಯರ್ ವಾದ ಸರಕಾರಕ್ಕೆ ಇಷ್ಟವಾಗಿಲ್ಲ. ಬ್ರಾಹ್ಮಣ್ಯ ಲಾಬಿ ಎನ್ನುವ ಮಾತು ಹೇಳಿದ್ದಕ್ಕೆ ನನ್ನ ಮೇಲೆ 295A ಕೇಸ್ ಹಾಕಿದರು. ಗನ್ ಮ್ಯಾನ್ ನನ್ನು ಒಂದೂವರೆ ವರ್ಷದ ಹಿಂದೆಯೇ ತೆಗೆದಿದ್ದಾರೆ. ಒಂದು ಸತ್ಯದ ಟ್ವೀಟ್ ಮಾಡಿದ್ದಕ್ಕೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಲಾಗಿದೆ ಎಂದು ಮೂರು ದಿನ ಜೈಲಿಗೆ ಕಳುಹಿಸಿದ್ದರು.

ಓಸಿಐ (ಒವರ್ ಸೀಸ್ ಸಿಟಿಜನ್ ಆಫ್ ಇಂಡಿಯಾ ಅಥವಾ ಸಾಗರೋತ್ತರ ಭಾರತೀಯ ನಾಗರೀಕ ) ವೀಸಾ ನನಗೆ ನೀಡಿದ್ದಾರೆ. ಇದರಲ್ಲಿ ಮತ ಹಾಕೋದು, ಚುನಾವಣೆಗೆ ನಿಲ್ಲುವುದು, ಸರಕಾರಿ ನೌಕರನಾಗಿ ಕೆಲಸ ಮಾಡೋದು ಬಿಟ್ಟರೆ ಎಲ್ಲ ಹಕ್ಕು ಸಿಗುತ್ತದೆ. ನೀವು ತುಂಬ ಕ್ರಿಮಿನಲ್ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದೀರಾ. ಹೀಗಾಗಿ ನಿಮ್ಮ ವೀಸಾ ಯಾಕೆ ರದ್ದು ಮಾಡಬಾರದು ಅಂತ 10 ತಿಂಗಳ ಹಿಂದೆ (2022ರ ಜೂನ್ 8) ಶೋಕಾಸ್ ನೋಟೀಸ್ ನೀಡಿದದ್ದರು. ಆಗ ಗೃಹ ಇಲಾಖೆಗೆ ಹೋಗಿ ಎಲ್ಲ ದಾಖಲೆ ಸಲ್ಲಿಸಿ ಬಂದ್ದಿದೆ. ಶುಕ್ರವಾರ ಮತ್ತೆ ದೇಶ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೀರಾ ಅಂತ ವೀಸಾ ರದ್ದು ನೋಟೀಸ್ ನೀಡಿದ್ದಾರೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ : ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ಗೆ ಮಾತೃವಿಯೋಗ

ಇದನ್ನೂ ಓದಿ : ಕೆಜಿಎಫ್ 2 ಸೆಟ್‌ನಲ್ಲಿ ಯಶ್ ಭೇಟಿಯಾದ ರಾಧಿಕಾ ಪಂಡಿತ್‌ : ವಿಡಿಯೋ ಸಖತ್‌ ವೈರಲ್

ದೇಶವಿರೋಧಿ ಚುಟುವಟಿಕೆಯಲ್ಲಿ ನಾನು ಎಲ್ಲಿ ಭಾಗಿಯಾಗಿದ್ದೇನೆ? ಉದ್ದೇಶಪೂರ್ವಕವಾಗಿ ನನ್ನ ಮೇಲೆ ಈ ರೀತಿ ಪಿತೂರಿ ಮಾಡುತ್ತಿದ್ದಾರೆ. ನಾನು ಈ ದೇಶದಲ್ಲಿ ಇರಬಾರದು ಅಂತ ವೀಸಾ ರದ್ದುಗೊಳಿಸಿದ್ದಾರೆ. ಮಾತನಾಡುವ ಸ್ವಾತಂತ್ರವನ್ನು ಕಿತ್ತು ಹಾಕುವುದಲ್ಲದೇ, ಜೈಲಿಗೆ ಹಾಕಿ ಹಿಂಸೆ ಮಾಡೋದಲ್ಲದೆ, ನಾನು ದೇಶದಲ್ಲಿ ಇರಲೇ ಬಾರದು ಅಂತಾ ವೀಸಾ ರದ್ದು ಮಾಡಿದ್ದಾರೆ. ನಾನು ಈ ದೇಶದಲ್ಲಿ ಇರಬಾರದು ಅಂತ ವೀಸಾ ರದ್ದುಗೊಳಿಸಿದ್ದಾರೆ. ನಾನು ವಕೀಲರ ಬಳಿ ಮಾತನಾಡಿದ್ದೇನೆ. ಇದಕ್ಕೆ ವಿರುದ್ದವಾಗಿ ತಡೆಯಾಜ್ಞೆ ತರಲಿದ್ದೇನೆ. ನಾನು ಕಾನೂನಿನ ಹೋರಾಟ ಮಾಡುತ್ತೇನೆ. ನನಗೆ 15 ದಿನದವರೆಗೆ ಸಮಯ ಕೊಟ್ಟಿದ್ದಾರೆ. 15 ದಿನದೊಳಗೆ ನಾನು ತಡೆಯಾಜ್ಞೆ ತರುತ್ತೇನೆ ಎಂದು ಚೇತನ್ ಹೇಳಿದ್ದಾರೆ.

Actor Chetan Kumar visa Cancel : Actor Chetan’s OCI visa has been canceled by the central government

Comments are closed.