ಬಿಜೆಪಿ ಕೈಕೊಟ್ಟ ಲಕ್ಷ್ಮಣ್ ಸವದಿಗೆ ಅಥಣಿಯಿಂದಲೇ ಕಾಂಗ್ರೆಸ್ ಟಿಕೆಟ್

ಬೆಂಗಳೂರು : (Congress ticket for Savadi) ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನು ಒಂದು ತಿಂಗಳು ಮಾತ್ರವೇ ಬಾಕಿ ಇದೇ. ಈ ನಡುವೆ ಅಧಿಕಾರದ ಗದ್ದುಗೆ ಏರಲು ಪಕ್ಷಗಳು ಪಣತೊಟ್ಟಿದ್ದು, ಈಗಾಗಲೇ ಭಾಗಶಃ ಪ್ರಚಾರ ಕಾರ್ಯವನ್ನು ಮೂರು ಪಕ್ಷಗಳು ಮುಗಿಸಿವೆ. ಇನ್ನೂ ಟಿಕೆಟ್‌ ಹೆಣಗಾಟದಲ್ಲಿ ಪಕ್ಷಗಳು ತಲೆ ಕೆಡಿಸಿಕೊಂಡಿದ್ದು, ಕಾಂಗ್ರೆಸ್‌ ತನ್ನ ಮೂರು ಹಂತದ ಪಟ್ಟಿಯನ್ನು ಬಿಡುಗಡೆ ಗೊಳಿಸಿದೆ. ಜೆಡಿಎಸ್‌ ಎರಡು ಹಂತದ ಪಟ್ಟಿ ಬಿಡುಗಡೆಗೊಳಿಸಿದೆ. ಈ ನಡುವೆ ಬಿಜೆಪಿ ಲೇಟೆಸ್ಟ್‌ ಆಗಿ ಒಂದರ ಮೇಲೊಂದರಂತೆ ಅಭ್ಯರ್ಥಿಗಳ ಎರಡು ಹಂತದ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಹಲವು ಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್‌ ಕೈ ತಪ್ಪಿದ್ದು, ಈ ನಡುವೆಯೇ ಅಥಣಿ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಲಕ್ಷ್ಮಣ ಸವದಿಗೂ ಕೂಡ ಟಿಕೆಟ್‌ ಕೈ ತಪ್ಪಿದೆ. ಈ ಹಿನ್ನಲೆಯಲ್ಲಿ ಬಿಜೆಪಿಗೆ ರಾಜಿನಾಮೆ ನೀಡಿದ ಲಕ್ಷ್ಮಣ್‌ ಸವದಿ, ಕಾಂಗ್ರೆಸ್‌ ಸೇರ್ಪಡೆಯಾಗಿದ್ದರು. ಸವದಿ ಕಾಂಗ್ರೆಸ್‌ ಸೇರ್ಪಡೆಯಾದ ಬೆನ್ನಲ್ಲೇ ಕೈಪಾಳಯ ತನ್ನ ಮೂರನೇ ಹಂತದ ಟಿಕೆಟ್‌ ಘೋಷಣೆ ಮಾಡಿದ್ದು, ಅಥಣಿ ಕ್ಷೇತ್ರಕ್ಕೆ ಲಕ್ಷ್ಮಣ್‌ ಸವದಿಗೆ ಟಿಕೆಟ್‌ ನೀಡಿ ಕಣ್ಣಕ್ಕಿಳಿಸಿದೆ.

ಲಕ್ಷ್ಮಣ ಸವದಿ ಬಿಜೆಪಿಯಲ್ಲಿ ಪ್ರಭಾವಿ ನಾಯಕರ ಪೈಕಿ ಒಬ್ಬರಾಗಿದ್ದರು. ಬೆಳಗಾವಿ ರಾಜಕೀಯದಲ್ಲೂ ಸವದಿ ಪಾತ್ರ ಪ್ರಮುಖವಾಗಿತ್ತು. ಅಥಣಿ ಟಿಕೆಟ್ ಗೆ ಕಣ್ಣಿಟ್ಟಿದ್ದ ಸವದಿಗೆ ಕೊನೆಗೂ ಟಿಕೆಟ್ ಸಿಕ್ಕಿರಲಿಲ್ಲ. ಬದಲಾಗಿ ಮಹೇಶ್ ಕುಮಟಳ್ಳಿಗೆ ಟಿಕೆಟ್ ನೀಡಲಾಗಿತ್ತು. ಇದರಿಂದ ಅಸಮಾಧಾನಗೊಂಡ ಸವದಿ ಇದೀಗ ಬಿಜೆಪಿ ತೊರೆದು ಕಾಂಗ್ರೆಸ್ ಗೆ ಅಧಿಕೃತವಾಗಿ ಸೇರ್ಪಡೆ ಆಗಿದ್ದಾರೆ. ಜೊತೆಗೆ ಸವದಿ ಅವರು ಯಾವ ಕ್ಷೇತ್ರದಲ್ಲಿ ಟಿಕೆಟ್‌ ವಂಚಿತರಾಗಿದ್ದರೋ ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

ಇದನ್ನೂ ಓದಿ : Congress 3rd list : ಕಾಂಗ್ರೆಸ್‌ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ

ಸಿದ್ದುಗೆ ಕೈ ತಪ್ಪಿದ ಕೋಲಾರ ಟಿಕೆಟ್‌ ;

ಇನ್ನೂ ಸಿದ್ದರಾಮಯ್ಯನವರಿಗೆ ಮೈಸೂರಿನ ವರುಣಾ ಕ್ಷೇತ್ರದಲ್ಲಿ ಟಿಕೆಟ್‌ ಫೈನಲ್‌ ಆಗಿದ್ದು, ಕೋಲಾರದಲ್ಲೂ ಸ್ಪರ್ಧೆ ಮಾಡುವುದಾಗಿ ಸಿದ್ದರಾಮಯ್ಯನವರು ಹೇಳಿದ್ದರು. ಎರಡನೇ ಪಟ್ಟಿಯಲ್ಲೂ ಕೋಲಾರ ಕ್ಷೇತ್ರದ ಅಭ್ಯರ್ಥಿಯನ್ನು ಪ್ರಕಟಿಸದ ಹೈಕಮಾಂಡ್‌ ಮೂರನೇ ಹಂತದಲ್ಲಿ ಪಟ್ಟಿ ಬಿಡುಗಡೆಗೊಳಿಸಿದ್ದು, ಕೊತ್ತೂರು ಮಂಜುನಾಥ್‌ ಗೆ ಟಿಕೆಟ್‌ ನೀಡಿದೆ. ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವ ಕನಸು ಸಿದ್ದರಾಮಯ್ಯನವರ ಕೈ ತಪ್ಪಿದೆ.

Congress ticket for Savadi : Congress ticket for Laxman Savadi from Athani itself

Comments are closed.