BCCI Revenue Share : 10 ಸಾವಿರ ಕೋಟಿಯ ಮೆಗಾ ಡೀಲ್’ಗೆ ಬಿಸಿಸಿಐ ಮೆಗಾ ಪ್ಲಾನ್, ಹೇಗಿದೆ ಗೊತ್ತಾ ದೊಡ್ಡಣ್ಣನ ಮಾಸ್ಟರ್ ಪ್ಲಾನ್?

ಬೆಂಗಳೂರು : ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಅಂದ್ರೆ ಬಿಸಿಸಿಐ (BCCI) ಕ್ರಿಕೆಟ್ ಜಗತ್ತಿನ ಹಿರಿಯಣ್ಣ, ದೊಡ್ಡಣ್ಣ. ಇಡೀ ಕ್ರಿಕೆಟ್ ಜಗತ್ತನ್ನು ನಿಯಂತ್ರಣ ಮಾಡುವ ಶಕ್ತಿ ಬಿಸಿಸಿಐಗೆ ಇದೆ. ಕ್ರಿಕೆಟ್ ಜಗತ್ತಿಗೆ ಬಾಸ್ ಆಗಿರುವ ಬಿಸಿಸಿಐ ಇದೀಗ 10 ಸಾವಿರ ಕೋಟಿಗಳ ಮೆಗಾ ಡೀಲ್’ಗೆ ಮೆಗಾ ಪ್ಲಾನ್ (BCCI Revenue Share) ಮಾಡಿದೆ.

ಎಲ್ಲವೂ ಬಿಸಿಸಿಐ ಬಾಸ್’ಗಳು ಅಂದುಕೊಂಡಂತೆಯೇ ಅದ್ರೆ ಬರೋಬ್ಬರಿ 10 ಸಾವಿರ ಕೋಟಿಗಳು ಬಿಸಿಸಿಐ ಬೊಕ್ಕಸ ಸೇರಲಿವೆ. ಅಷ್ಟಕ್ಕೂ ವಿಷ್ಯ ಏನಂದ್ರೆ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್- ಐಸಿಸಿಯ ಆದಾಯ ಹಂಚಿಕೆಯಲ್ಲಿ ಬಿಸಿಸಿಐ ಶೇ.37ರಷ್ಟು ಶೇರ್ ಪಡೆಯಲು ಪ್ಲಾನ್ ಮಾಡಿದೆ.ಐಸಿಸಿಯ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ (Finance & Commercial Affairs Committee) ಮುಖ್ಯಸ್ಥರೂ ಆಗಿರುವ ಬಿಸಿಸಿಐ ಅಧ್ಯಕ್ಷ ಜಯ್ ಶಾ (BCCI president Jay Shah) ಈ ಪ್ರಸ್ತಾಪವನ್ನು ಐಸಿಸಿ ಮುಂದಿಟ್ಟಿದ್ದಾರೆ.

ಐಸಿಸಿ ಆದಾಯದಲ್ಲಿ ಬಿಸಿಸಿಐ ಕೊಡುಗೆ ತುಂಬಾ ದೊಡ್ಡದು. ಐಸಿಸಿಯ ಒಟ್ಟಾರೆ ಆದಾಯದ 85% ಭಾರತದ ಕ್ರಿಕೆಟ್ ಮಾರುಕಟ್ಟೆಯಿಂದಲೇ ಬರುತ್ತದೆ. ಹೀಗಾಗಿ ಐಸಿಸಿಯಿಂದ ಬರುವ ಆದಾಯದ ಹಂಚಿಕೆಯನ್ನು ಹೆಚ್ಚಿಸಿಕೊಳ್ಳಲು ಬಿಸಿಸಿಐ ಮುಂದಾಗಿದೆ.

ಐಸಿಸಿ ಆದಾಯ ಹಂಚಿಕೆ : ಬಿಸಿಸಿಐ ಬಾಸ್ :

  • ಐಸಿಸಿಯ ಒಟ್ಟು ಆದಾಯದಲ್ಲಿ ಭಾರತದ ಮಾರುಕಟ್ಟೆಯಕೊಡುಗೆ 88ರಿಂದ ಶೇ. 90ರಷ್ಟು
  • ಜಗತ್ತಿನ ಉಳಿದ ಮಾರುಕಟ್ಟೆಯಿಂದ ಐಸಿಸಿಗೆ ಬರುತ್ತಿರುವ ಆಧಾಯ 4 ಸಾವಿರ ಕೋಟಿ.
  • ಸದ್ಯ ಐಸಿಸಿಯಿಂದ ಬಿಸಿಸಿಐ 22.8% ಆದಾಯ ಹಂಚಿಕೆ (Revenue Share) ಪಡೆಯುತ್ತದೆ.
  • ಅಂದ್ರೆ ಬಿಸಿಸಿಐಗೆ ಐಸಿಸಿಯಿಂದ ಬರುತ್ತಿರುವ ಆದಾಯದ ಹಂಚಿಕೆ 3,300 ಕೋಟಿ ರೂ.
  • 2016-23ರ ಅವಧಿಯಲ್ಲಿ ಐಸಿಸಿ ಬಿಸಿಸಿಐಗೆ ಆದಾಯ ಹಂಚಿಕೆ ರೂಪದಲ್ಲಿ 3,314 ರೂ.ಗಳನ್ನು ನೀಡಿತ್ತು.
  • ಮುಂದಿನ ಸಾಲಿನಲ್ಲಿ ತನಗೆ ಬರುವ ಆದಾಯ ಹಂಚಿಕೆಯನ್ನು ಶೇ.37ಕ್ಕೆ ಹೆಚ್ಚಿಸಿಕೊಳ್ಳಲು ಬಿಸಿಸಿಐ ಮುಂದಾಗಿದೆ.
  • ಬಿಸಿಸಿಐನ ಈ ಪ್ಲಾನ್ ವರ್ಕೌಟ್ ಆದ್ರೆ ಐಸಿಸಿ 10 ಸಾವಿರ ಕೋಟಿ ರೂಪಾಯಿಗಳನ್ನು ಬಿಸಿಸಿಐಗೆ ನೀಡಬೇಕಿದೆ.‌

ಇದನ್ನೂ ಓದಿ : Chris Gayle Appu Boss : ಜಗತ್ತಿಗೆ ಇಬ್ಬರೇ ಬಾಸ್, ಒಬ್ಬ ಯೂನಿವರ್ಸ್ ಬಾಸ್, ಮತ್ತೊಬ್ಬ “ಅಪ್ಪು” ಬಾಸ್ ಅಂದ ಕ್ರಿಸ್ ಗೇಲ್

ಇದನ್ನೂ ಓದಿ : IPL 2023 : ಆರ್‌ಸಿಬಿಗೆ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋಗೆ ಪಂಜಾಬ್‌‌ ಕಿಂಗ್ಸ್ ಸವಾಲು

ಇದನ್ನೂ ಓದಿ : Jr. Ponting meets Virat Kohli : ಜ್ಯೂನಿಯರ್ ಪಾಂಟಿಂಗ್‌ನನ್ನು ಭೇಟಿ ಮಾಡಿದ ಕಿಂಗ್ ಕೊಹ್ಲಿ, ಇಲ್ಲಿದೆ ಕ್ಯೂಟ್ ವೀಡಿಯೊ

BCCI Revenue Share: BCCI mega plan for 10 thousand crores mega deal, do you know what is the master plan of Doddanna?

Comments are closed.