ಆಟೋ ರಿಕ್ಷಾಗಳ ಹಿಂದೆ ಪಕ್ಷಗಳ ಚುನಾವಣಾ ಪ್ರಚಾರ : ಆಟೋ ರಿಕ್ಷಾಗಳು ಪೊಲೀಸ್‌ ವಶಕ್ಕೆ

ಬೆಂಗಳೂರು : (Election campaign by Autorikshaw) ರಾಜ್ಯದಲ್ಲಿ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದೆ. ಚುನಾವಣಾ ದಿನಾಂಕ ನಿಗಧಿಯಾದ ಕ್ಷಣದಿಂದಲೇ ನೀತಿ ಸಂಹಿತೆ ಕೂಡ ಜಾರಿಯಾಗಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಕಡೆಗಳಲ್ಲೂ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದು, ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಕ್ರಮ ಕೈಗೊಳ್ಳುವುದಾಗಿ ಚುನಾವಣಾ ಪ್ರಾಧಿಕಾರ ಈ ಹಿಂದೆಯೇ ಎಚ್ಚರಿಕೆಯನ್ನು ನೀಡಿದೆ. ಆದರೂ, ವಾಹನ ಹಾಗೂ ಆಟೋಗಳ ಮೇಲೆ ರಾಜಕೀಯ ನಾಯಕರ ಭಾವಚಿತ್ರ ಮತ್ತು ಪಕ್ಷಗಳ ಚಿಹ್ನೆ ಇರುವ ವಾಹನಗಳ ಓಡಾಟ ಕಂಡುಬಂದಿದ್ದು, ಜಾಹಿರಾತಿಗಾಗಿ ಆಟೋ ರಿಕ್ಷಾಗಳ ಹಿಂದೆ ಬ್ಯಾನರ್‌ ಗಳನ್ನು ಹಾಕಿಸಿಕೊಂಡಿದ್ದ ಆಟೋಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಯಾವುದೇ ಪರವಾನಗಿ ಇಲ್ಲದೇ ವಾಹನಗಳ ಮೇಲೆ ಅಭ್ಯರ್ತಿಗಳ ಫೋಟೋ ಹಾಕಿದ್ದರೆ, ಅದು ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಅಪಾರಾಧವಾಗುತ್ತದೆ. ಈ ವಿಚಾರ ತಿಳಿದಿದ್ದರೂ ಕೂಡ ಪಕ್ಷದ ಚಿಹ್ನೆ, ಧ್ವಜ ಹಾಗೂ ಅಭ್ಯರ್ಥಿಗಳ ಭಾವಚಿತ್ರ, ಹೆಸರನ್ನು ವಾಹನದ ಮೇಲೆ ಹಾಕಿಕೊಂಡು ನೀತಿ ಸಂಹಿತೆಯನ್ನು ಉಲ್ಲಂಘಿಸಲಾಗಿದೆ. ಸಂಚಾರ ಪೂರ್ವ ವಿಭಾಗದ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ರಾಜಕಾರಣಿಗಳ ಹೆಸರು, ಭಾವಚಿತ್ರ ಮತ್ತು ಪಕ್ಷಗಳ ಗುರುತುಗಳನ್ನು ಜಾಹಿರಾತಿಗಾಗಿ ಆಟೋರಿಕ್ಷಾಗಳ ಹಿಂದೆ ಬ್ಯಾನರ್ ಗಳನ್ನು ಹಾಕಿಸಿಕೊಂಡು ಆಟೋಗಳು ಓಡಾಡುತ್ತಿರುವುದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ಬ್ಯಾನರ್‌ಗಳನ್ನು ಹಾಕಿಸಿಕೊಂಡಿದ್ದ ಆಟೋ ರಿಕ್ಷಾಗಳನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ಅಭ್ಯರ್ಥಿಗಳು ಯಾವುದೇ ವ್ಯಕ್ತಿಯ ಜಮೀನು, ಕಟ್ಟಡದಲ್ಲಿ ಅನುಮತಿಯಿಲ್ಲದೆ ಪಕ್ಷದ ಧ್ವಜಗಳು, ಬ್ಯಾನರ್‌ಗಳು, ಸೂಚನೆಗಳು ಮತ್ತು ಘೋಷಣೆಗಳನ್ನು ಬರೆಯಲು ಅನುಮತಿ ಇರುವುದಿಲ್ಲ. ಪಕ್ಷದ ಚಿಹ್ನೆ, ಧ್ವಜ ಹಾಗೂ ಅಭ್ಯರ್ಥಿಗಳ ಭಾವಚಿತ್ರ, ಹೆಸರನ್ನು ವಾಹನದ ಮೇಲೆ ಹಾಕುವಂತಿಲ್ಲ. ಒಂದು ವೇಳೆ ವಾಹನದ ಮೇಲೆ ಹೆಸರನ್ನು ಹಾಕಬೇಕಾದರೆ, ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳಿಂದ ವಾಹನಗಳ ಸಂಖ್ಯೆ ನೀಡಿ ಪರವಾನಿಗೆ ಪಡೆದುಕೊಳ್ಳುವುದು ಕಡ್ಡಾಯವಾಗಿದೆ.

ಇದನ್ನೂ ಓದಿ : ಸುದೀಪ್‌ ಬಿಜೆಪಿಯ ಸ್ಟಾರ್‌ ಪ್ರಚಾರಕ; ನಾನು ಬೊಮ್ಮಾಯಿ ಮಾಮ ಅವರಿಗೆ ಬೆಂಬಲ ಕೊಡ್ತೇನೆ : ನಟ ಕಿಚ್ಚ ಸುದೀಪ್‌

ಯಾವುದೇ ಪರವಾನಿಗೆ ಇಲ್ಲದೇ ವಾಹನಗಳ ಮೇಲೆ ಅಭ್ಯರ್ಥಿಗಳ ಫೋಟೋ ಹಾಕಿದ್ದರೆ, ಅದು ನೀತಿ ಸಂಹಿತೆ ಉಲ್ಲಂಘನೆ ಅಡಿಯಲ್ಲಿ ಅಪರಾಧವಾಗುತ್ತದೆ. ಆ ವಾಹನವನ್ನು ಪೊಲೀಸರು ಅಥವಾ ಚುನಾವಣಾಧಿಕಾರಿಗಳು ಸೀಜ್ ಮಾಡುವ ಅಧಿಕಾರ ಹೊಂದಿರುತ್ತಾರೆ. ಇದರ ಜೊತೆಗೆ ವಾಹನ ಮಾಲೀಕರಿಗೆ ದಂಡವನ್ನು ವಿಧಿಸಬಹುದು ಎಂದು ಮೊದಲೇ ಎಚ್ಚರಿಕೆಯನ್ನು ನೀಡಿದ್ದು, ವಾಹನ ಹಾಗೂ ಆಟೋಗಳ ಮೇಲೆ ರಾಜಕೀಯ ನಾಯಕರ ಭಾವಚಿತ್ರ ಮತ್ತು ಪಕ್ಷಗಳ ಚಿಹ್ನೆ ಇರುವ ವಾಹನಗಳ ಮೇಲೆ ಆರ್‌ಟಿಐ ಅಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದು, ರಾಜಕೀಯ ಪ್ರೇರಿತ ಭಾವಚಿತ್ರ ಅಥವಾ ಚಿಹ್ನೆ ಇದ್ದರೆ 5 ಸಾವಿರ ರೂ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದರೂ ಕೂಡ ಇದೀಗ ನೀತಿ ಸಂಹಿತೆಯನ್ನು ಉಲ್ಲಂಘಿಸಿ, ಯಾವುದೇ ಪರವಾನಗಿಯನ್ನು ಪಡೆಯದೇ ಆಟೋ ರಿಕ್ಷಾಗಳ ಹಿಂದೆ ಚುನಾವಣಾ ಜಾಹೀರಾತುಗಳನ್ನು ಅಳವಡಿಸಿಕೊಂಡು ಆಟೋರಿಕ್ಷಾಗಳು ಓಡಾಡುತ್ತಿರುವುದು ಕಂಡಬಂದಿದ್ದು, ಪ್ರಾಧಿಕಾರ ಕ್ರಮ ಕೈಗೊಂಡಿದೆ.

Election campaign by Autorikshaw : Election campaign of parties behind auto rickshaws: Auto rickshaws seized by police

Comments are closed.