Gujarath Election: ಗುಜರಾತ್ ವಿಧಾನಸಭೆಯ 89 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಮುಕ್ತಾಯ: ಶೇಕಡ 60.23 ನಷ್ಟು ಮತದಾನ

ಹೊಸದಿಲ್ಲಿ: (Gujarath Election) ಗುಜರಾತ್‌ ನಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ಮುಗಿದಿದ್ದು, 89 ಕ್ಷೇತ್ರಗಳಲ್ಲಿ ನಿನ್ನೆ ಮತದಾನ ನಡೆದಿದೆ. ಮತದಾನ ಮಾಡಿದ ಪ್ರಮುಖ ಕ್ಷೇತ್ರಗಳಲ್ಲಿ ಸೂರತ್ ಕೂಡ ಒಂದಾಗಿದೆ. ರಾಜ್ಯದಲ್ಲಿ ಸತತ ಏಳನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರಲು ಹವಣಿಸುತ್ತಿದ್ದರೆ, ಎಎಪಿ ಚುನಾವಣೆಯ ಭರ್ಜರಿ ಪ್ರಚಾರ ಆರಂಭಿಸಿದೆ.

ಸೌರಾಷ್ಟ್ರ-ಕಚ್‌ನ 19 ಜಿಲ್ಲೆಗಳು ಮತ್ತು ರಾಜ್ಯದ ದಕ್ಷಿಣದ ಪ್ರದೇಶಗಳನ್ನು ಒಳಗೊಂಡ ಮತದಾನ(Gujarath Election)ದಲ್ಲಿ 60.23 ರಷ್ಟು ಸಾಧಾರಣ ಮತದಾನವಾಗಿದ್ದು, ಶಾಂತಿಯುತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2017ರ ವಿಧಾನಸಭೆ ಚುನಾವಣೆಯಲ್ಲಿ ಮೊದಲ ಹಂತದ ಮತದಾನದಲ್ಲಿ ಶೇ.66.75 ಮತದಾನವಾಗಿತ್ತು. ಈ ಭಾರಿ ಅದಕ್ಕಿಂತ ಕಡಿಮೆ ಮತದಾನವಾಗಿದೆ.

ಕೆಲವು ಸ್ಥಳಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ (ಇವಿಎಂ) ತಾಂತ್ರಿಕ ದೋಷಗಳ ವರದಿಗಳನ್ನು ಹೊರತುಪಡಿಸಿ, ಬೆಳಿಗ್ಗೆ 8 ಗಂಟೆಗೆ ಪ್ರಾರಂಭವಾದ ಮತದಾನ ಪ್ರಕ್ರಿಯೆಯು ಬಹುತೇಕ ಶಾಂತಿಯುತವಾಗಿತ್ತು ಎಂದು ಗುಜರಾತ್ ಮುಖ್ಯ ಚುನಾವಣಾಧಿಕಾರಿ ಪಿ ಭಾರತಿ ತಿಳಿಸಿದ್ದಾರೆ.

ಮೊದಲ ಹಂತದ ಮತದಾನದ ಕೇಂದ್ರಬಿಂದು ಸೂರತ್ ಆಗಿದ್ದು, ಡೈಮಂಡ್ ಸಿಟಿ ಎಂದೂ ಕರೆಯಲ್ಪಡುವ ಪ್ರಮುಖ ಕೈಗಾರಿಕಾ ಕೇಂದ್ರವಾಗಿದೆ. ಸೂರತ್ ಬಿಜೆಪಿ ಪಕ್ಷದ ಭದ್ರಕೋಟೆಯಾಗಿದ್ದು, 2017 ರ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಅಧಿಕಾರಕ್ಕೆ ಮರಳಿ ಬರಲು ಸಹಾಯ ಮಾಡುವಲ್ಲಿ ಸೂರತ್‌ ಪ್ರಮುಖ ಪಾತ್ರ ವಹಿಸಿದೆ. ಆದರೂ ಕೂಡ ಈ ಬಾರಿ ಪಕ್ಷಕ್ಕೆ ಹೊಸ ಚಾಲೆಂಜ್‌ ಇದ್ದು, ಈ ಬಾರಿ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷದ (ಎಎಪಿ) ಕೂಡಾ ಕಣಕ್ಕಿಳಿದಿದ್ದು, ಜಿಲ್ಲೆಯಲ್ಲಿ ವ್ಯಾಪಕವಾಗಿ ಪ್ರಚಾರ ನಡೆಸಿದೆ. ಅಲ್ಲಿನ 16 ಕ್ಷೇತ್ರಗಳಲ್ಲಿ ಅರ್ಧದಷ್ಟಾದರೂ ಗೆಲ್ಲುವ ಭರವಸೆ ಇದೆ ಎಂದು ಆಮ್‌ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಮೊರ್ಬಿ ಕ್ಷೇತ್ರವನ್ನು ಸೂಕ್ಷ್ಮವಾಗಿ ಗಮನಿಸಲಾಗಿದ್ದು, ಅಲ್ಲಿ ಅಕ್ಟೋಬರ್ 30 ರಂದು ತೂಗು ಸೇತುವೆ ಕುಸಿದು 135 ಜನರು ಸಾವನ್ನಪ್ಪಿದ್ದರು. ಈ ದುರಂತದ ಬಗ್ಗೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಭಾರೀ ಟೀಕೆಗಳನ್ನು ಎದುರಿಸಿದೆ. ಘಟನೆಯ ತನಿಖೆಯಿಂದ ಸೇತುವೆಯ ನವೀಕರಣ ಮತ್ತು ನಿರ್ವಹಣೆಯಲ್ಲಿ ಭಾರಿ ಲೋಪಗಳು ಕಂಡುಬಂದಿದ್ದು, ಹೈಕೋರ್ಟ್ ಆಡಳಿತಕ್ಕೆ ಬಿಜೆಪಿ ಸರ್ಕಾರ ಕಠಿಣ ಪ್ರಶ್ನೆಗಳನ್ನು ಕೇಳಿದೆ.

ಪಕ್ಷದ ಅಭ್ಯರ್ಥಿಗಳ ಆರಂಭಿಕ ಪಟ್ಟಿಯಲ್ಲಿಲ್ಲದ ಮಾಜಿ ಶಾಸಕ ಕಾಂತಿಲಾಲ್ ಅಮೃತಿಯವರನ್ನು ಬಿಜೆಪಿ ಕಣಕ್ಕಿಳಿಸಿದಿದ್ದು, ಕೊನೆಯ ಕ್ಷಣದಲ್ಲಿ ಪಕ್ಷಕ್ಕೆ ಎಂಟ್ರಿ ನೀಡಿದ್ದಾರೆ. ಮೊದಲ ಹಂತದಲ್ಲಿ ಗಮನಾರ್ಹ ಅಭ್ಯರ್ಥಿಗಳ ಪೈಕಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಮುಖ ಇಸುದನ್ ಗಧ್ವಿ ಅವರು ದೇವಭೂಮಿ ದ್ವಾರಕಾ ಜಿಲ್ಲೆಯ ಖಂಭಾಲಿಯಾದಿಂದ ಸ್ಪರ್ಧಿಸುತ್ತಿದ್ದಾರೆ.

ಬಿಜೆಪಿ ಪಕ್ಷದ ಸ್ಕೋರ್ 2002 ರಿಂದ ಕುಗ್ಗುತ್ತಿದ್ದು, 2017 ರ ಚುನಾವಣೆಯಲ್ಲಿ 137 ರಿಂದ 99 ಕ್ಕೆ ಇಳಿದಿದೆ. 1995 ರಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಚುನಾವಣೆಯಲ್ಲಿ ಕುಸಿತ ಉಂಟಾಗಿರುವುದು ನಿಜವಾಗಿಯೂ ಪಕ್ಷಕ್ಕೆ ಒಂದು ಸವಾಲಾಗಿದೆ.

ಗುಜರಾತ್‌ನ ಮಾಜಿ ಸಚಿವ ಪರಶೋತ್ತಮ್ ಸೋಲಂಕಿ, ಆರು ಬಾರಿ ಶಾಸಕರಾಗಿರುವ ಕುನ್ವರ್ಜಿ ಬವಲಿಯಾ, ಮೊರ್ಬಿ ‘ಹೀರೋ’ ಕಾಂತಿಲಾಲ್ ಅಮೃತಿಯಾ, ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಮತ್ತು ಗುಜರಾತ್ ಎಎಪಿ ಅಧ್ಯಕ್ಷ ಗೋಪಾಲ್ ಇಟಾಲಿಯಾ ಕೂಡ ಕಣದಲ್ಲಿದ್ದಾರೆ.

ಇದನ್ನೂ ಓದಿ : Delhi Liquor Policy Scam: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ತೆಲಂಗಾಣ ಸಿಎಂ ಪುತ್ರಿಗೆ ಇಡಿ ಶಾಕ್; ತನಿಖೆಗೆ ಸಿದ್ಧ ಎಂದ ಕೆ.ಕವಿತಾ

ಇದನ್ನೂ ಓದಿ : GUJARAT ELECTION:  ಗುಜರಾತ್ ವಿಧಾನಸಭೆ ಚುನಾವಣೆ ಇಂದು.. 89 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯ ಗುಜರಾತ್, ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ. ವಿಧಾನಸಭೆಯ 182 ಸ್ಥಾನಗಳ ಪೈಕಿ 140 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಪಕ್ಷ ಹೊಂದಿದೆ.
ಪ್ರಧಾನಿಯವರು ಪ್ರಚಾರದ ಹಿನ್ನಲೆಯಲ್ಲಿ, ಇದುವರೆಗೆ ರಾಜ್ಯದಲ್ಲಿ 20 ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ಇತರ ಏಳು ರ್ಯಾಲಿಗಳು ಎರಡನೇ ಹಂತದ ಕಾರ್ಯಸೂಚಿಯಲ್ಲಿವೆ.

AAP ಗಾಗಿ, ಈ ವರ್ಷ ಪಂಜಾಬ್‌ನಲ್ಲಿ ಭರ್ಜರಿ ಗೆಲುವಿನ ನಂತರ ಪಕ್ಷವು ತನ್ನ ರಾಷ್ಟ್ರೀಯ ಹೆಜ್ಜೆಗುರುತನ್ನು ವಿಸ್ತರಿಸಲು ಮುಂದಾಗಿದ್ದು, ಅರವಿಂದ್ ಕೇಜ್ರಿವಾಲ್ ವ್ಯಾಪಕ ಪ್ರಚಾರವನ್ನು ನಡೆಸಿದ್ದಾರೆ. 2017ರ ಚುನಾವಣೆಯಲ್ಲಿ ಖಾತೆ ತೆರೆಯಲು ವಿಫಲವಾಗಿರುವ ಪಕ್ಷ ಈ ಬಾರಿ 92 ಸ್ಥಾನಗಳನ್ನು ಗೆಲ್ಲಲಿದೆ ಎಂದು ಕೇಜ್ರಿವಾಲ್ ಭವಿಷ್ಯ ನುಡಿದಿದ್ದಾರೆ.

(Gujarath Election) The first phase of assembly elections in Gujarat has ended and voting took place in 89 constituencies yesterday. Surat was also one of the major constituencies where voting took place. While the BJP is aiming to come to power for the seventh time in a row in the state, AAP has started a massive election campaign.

Comments are closed.