7th Pay Commission Latest Update : ಸರಕಾರಿ ನೌಕರರಿಗೆ ಗುಡ್ ನ್ಯೂಸ್ : ಮಾರ್ಚ್ ನಲ್ಲೇ ಡಿಎ ಹೆಚ್ಚಳ : ಎಷ್ಟು ಹೆಚ್ಚಳವಾಗಲಿದೆ ವೇತನ

ನವದೆಹಲಿ : ಲಕ್ಷಗಟ್ಟಲೆ ಕೇಂದ್ರ ಸರಕಾರಿ ನೌಕರರು ಫಿಟ್‌ಮೆಂಟ್ ಅಂಶ ಹೆಚ್ಚಳ ಮತ್ತು 18 ತಿಂಗಳ ಡಿಎ ಬಾಕಿಯ ಬಗ್ಗೆ ಕೇಳಲು ಕಾಯುತ್ತಿರುವಾಗ, (7th Pay Commission Latest Update) ಇದೀಗ ನೌಕರರು ಶೀಘ್ರದಲ್ಲೇ ಮತ್ತೊಂದು ಸಿಹಿ ಸುದ್ದಿಯನ್ನು ಕೇಳುವ ಸಾಧ್ಯತೆಯಿದೆ. ಹಲವಾರು ಸರಕಾರಿ ನೌಕರರು ಮುಂದಿನ ತುಟ್ಟಿಭತ್ಯೆ ಹೆಚ್ಚಳವನ್ನು ಯಾವಾಗ ಪಡೆಯುತ್ತಾರೆ ಎಂದು ಕೇಳುತ್ತಿದ್ದರು. ಅಷ್ಟೇ ಅಲ್ಲದೇ ನೌಕರರು ಸಂಬಳದಲ್ಲಿ ಎಷ್ಟು ಹೆಚ್ಚಳವನ್ನು ಪಡೆಯುತ್ತಾರೆ ಎಂಬ ಪ್ರಶ್ನೆಯೂ ಇದೆ.

ದೀಪಾವಳಿಗೆ ಮುಂಚಿತವಾಗಿ, ಕೇಂದ್ರವು ಕೇಂದ್ರ ಸರಕಾರಿ ನೌಕರರ ಡಿಎಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದೆ. ಹೀಗಾಗಿ ಸರಕಾರಿ ನೌಕರರ ಡಿಎಯನ್ನು ಶೇಕಡಾ 34 ರಿಂದ 38 ಕ್ಕೆ ಹೆಚ್ಚಿಸಿದೆ. ಇದಕ್ಕೂ ಮೊದಲು ಮಾರ್ಚ್ 2022 ರಲ್ಲಿ ಡಿಎಯನ್ನು ಶೇಕಡಾ 3 ರಷ್ಟು ಹೆಚ್ಚಿಸಲಾಗಿತ್ತು. ಕೇಂದ್ರದ ಈ ಪ್ರವೃತ್ತಿಯನ್ನು ಗಮನಿಸಿದರೆ, ಕೇಂದ್ರ ಸರಕಾರಿ ನೌಕರರು ತಮ್ಮ ಮುಂದಿನ ಡಿಎ ಹೆಚ್ಚಳವನ್ನು ಮಾರ್ಚ್ 2023 ರಲ್ಲಿ ಪಡೆಯುವ ಸಾಧ್ಯತೆಯಿದೆ ಎಂದು ಹೇಳಬಹುದು.

ಇದರ ಮಧ್ಯೆದಲ್ಲಿ ಹಣದುಬ್ಬರ ದರವನ್ನು ಪರಿಗಣಿಸಿ ಮತ್ತು 7 ನೇ ವೇತನ ಆಯೋಗದ ಶಿಫಾರಸುಗಳನ್ನು ಪರಿಗಣಿಸಿ ಕೇಂದ್ರವು ಡಿಎಯನ್ನು ಶೇಕಡಾ 3 ರಿಂದ 5 ರಷ್ಟು ಹೆಚ್ಚಿಸಬಹುದು ಎಂದು ಮೂಲಗಳು ತಿಳಿಸಿದೆ. ಡಿಎ ಹೆಚ್ಚಳವು ಶೇಕಡಾ 50 ರ ಸಮೀಪಕ್ಕೆ ತಲುಪಿದರೆ, ಅದನ್ನು ಶೂನ್ಯಕ್ಕೆ ಇಳಿಸಲಾಗುವುದು ಎಂದು ಇತರ ಮೂಲಗಳು ತಿಳಿಸಿದೆ. 2016ರಲ್ಲಿ ಕೇಂದ್ರ ಸರಕಾರ 7ನೇ ವೇತನ ಆಯೋಗವನ್ನು ಜಾರಿಗೊಳಿಸಿದಾಗ ಡಿಎಯನ್ನು ಶೂನ್ಯಕ್ಕೆ ಇಳಿಸಲಾಗಿತ್ತು. ಆದ್ದರಿಂದ ಕೇಂದ್ರ ಸರಕಾರಿ ಉದ್ಯೋಗಿಯ ಮೂಲ ವೇತನವು 18000 ರೂ ಆಗಿದ್ದರೆ, ಪ್ರತಿ ಉದ್ಯೋಗಿಯು ರೂ 9000ರಷ್ಟು ಅಂದರೆ 50 ಪ್ರತಿಶತದಷ್ಟು ಡಿಎ ಪಡೆಯುತ್ತಾರೆ.

ಇದನ್ನೂ ಓದಿ : 7th Pay Commission : 7 ನೇ ವೇತನ ಆಯೋಗ ರಚನೆಗೆ ಸಿಎಂ ಅನುಮೋದನೆ: ಮೂವರು ಸದಸ್ಯರ ನೇಮಕ

ಇದನ್ನೂ ಓದಿ : 7th Pay Commission : ದೀಪಾವಳಿ ಭರ್ಜರಿ ಗಿಫ್ಟ್ : ಸರಕಾರಿ ನೌಕರರ ಡಿಎ ಹೆಚ್ಚಳ

ಇದನ್ನೂ ಓದಿ : 7th Pay Commission : ನವರಾತ್ರಿಗೂ ಮುನ್ನ ಕೇಂದ್ರ ನೌಕರರಿಗೆ ಭರ್ಜರಿ ಉಡುಗೊರೆ‌

ಪ್ರಸ್ತುತ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಪಡೆಯುತ್ತಿರುವ ಸರಕಾರಿ ನೌಕರರು ಕೂಡ ಹೊಸ ವೇತನ ಆಯೋಗವನ್ನು ಪಡೆಯಲಿದ್ದಾರೆ ಎನ್ನಲಾಗಿದ್ದು, ನೌಕರರ ವೇತನ ಹೆಚ್ಚಳ ಅಥವಾ 8ನೇ ಸಿಪಿಸಿ ಜಾರಿಗೆ ತರುವಂತೆ ನೌಕರರ ಸಂಘ ಮನವಿ ಪತ್ರ ಸಿದ್ಧಪಡಿಸುತ್ತಿದೆ. ಆದರೆ 8ನೇ ವೇತನ ಆಯೋಗದ ಅನುಷ್ಠಾನದ ಬಗ್ಗೆ ಸರಕಾರದಿಂದ ಯಾವುದೇ ದೃಢೀಕರಣ ಅಥವಾ ಯಾವುದೇ ಪ್ರಕಟಣೆಯನ್ನು ಹೊರಡಿಸಿಲ್ಲ. ಈ ನಡುವೆ ಸರಕಾರಿ ನೌಕರರಿಗೆ 18 ತಿಂಗಳಿಂದ ಬಾಕಿ ಇರುವ ಡಿಎ ಬಾಕಿಯನ್ನು ಶೀಘ್ರವೇ ನೀಡಲಾಗುವುದು ಎಂದು ವರದಿಯಾಗಿದೆ.

7th Pay Commission Latest Update: Good News for Government Employees: DA Increase in March: How Much Will the Salary Increase?

Comments are closed.