ಬೇಸಿಗೆಯಲ್ಲಿ ಮನೆಯಲ್ಲೇ ತಯಾರಿಸಿ ಮಾವಿನ ಹಣ್ಣಿನ ಕುಲ್ಫಿ

ಬೇಸಿಗೆ ಕಾಲ ಬಂತು ಅಂದರೆ ಎಲ್ಲಿ ನೋಡಿದರೂ ಮಾವಿನಹಣ್ಣ, ಹಲಸಿನ ಹಣ್ಣು ಸೇರಿದಂತೆ ವಿವಿಧ ರೀತಿಯ ಹಣ್ಣುಗಳನ್ನು ಕಾಣಬಹುದು. ಅದು ಅಲ್ಲದೇ ಕಾಲೋಚಿತವಾಗಿ ಸಿಗುವಂತಹ ಹಣ್ಣುಗಳನ್ನು ಆಗಾಗ್ಗ ಸೇವಿಸುವುದರಿಂದ ತಮ್ಮ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಆಗಿರುತ್ತದೆ. ಮಾವಿನಹಣ್ಣಿನಿಂದ ವಿವಿಧ ರೀತಿಯ ರೆಸಿಪಿ, ಪಾನೀಯಗಳನ್ನು ತಯಾರಿಸಬಹುದು. ಮಾವಿನಹಣ್ಣಗಳನ್ನು ಬಳಸಿಕೊಂಡು ಐಸ್ ಕ್ರೀಮ್, ಕುಲ್ಫಿಗಳನ್ನು (homemade kulfis recipe in summer) ಮಾಡಿದರೆ ಎಲ್ಲರಿಗೂ ಇಷ್ಟವಾಗುತ್ತದೆ.

ಈ ಬೇಸಿಗೆ ಕಾಲದಲ್ಲಿ ವಿಶೇಷವಾಗಿ ಮಕ್ಕಳಲ್ಲಿ ಅತ್ಯಂತ ಜನಪ್ರಿಯವಾಗಿರುವುದೆಂದರೆ ಬಾಯಲ್ಲಿ ನೀರೂರಿಸುವ ಕುಲ್ಫಿ ಆಗಿದೆ. ಕೇಸರ್ ಕುಲ್ಫಿಯಾಗಿರಲಿ, ಮಲೈ ಕುಲ್ಫಿಯಾಗಿರಲಿ, ಮಟಕ್ ಕುಲ್ಫಿಯಾಗಿರಲಿ, ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಹಾಗಾದರೆ ಮನೆಯಲ್ಲೇ ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣಿನ ಕುಲ್ಫಿ ಮಾಡುವುದು ಹೇಗೆ ಎನ್ನುವುದನ್ನು ತಿಳಿಯೋಣ.

ಮಾವು ಕುಲ್ಫಿಗೆ ಬೇಕಾಗುವ ಸಾಮಾಗ್ರಿ :

  • ಮಾವಿನ ಹಣ್ಣಿನ ತಿರುಳು 2 ಕಪ್
  • ಹಾಲಿನ ಪುಡಿ 1 ಕಪ್
  • ಮಿಲ್ಕ್‌ಮೇಡ್ 1 ಕಪ್ (400 ಗ್ರಾಂ)
  • ಅಲಂಕರಿಸಲು ಕತ್ತರಿಸಿದ ಪಿಸ್ತಾ
  • ಅಲಂಕರಿಸಲು ಕತ್ತರಿಸಿದ ಬಾದಾಮಿ

ಮಾಡುವ ವಿಧಾನ :
ಮೊದಲಿಗೆ ಒಂದು ನಾನ್-ಸ್ಟಿಕ್ ಪ್ಯಾನ್‌ನಲ್ಲಿ ½ ಕಪ್ ನೀರನ್ನು ಬಿಸಿ ಮಾಡಿಕೊಳ್ಳಬೇಕು. ನಂತರ ಅದಕ್ಕೆ ಹಾಲಿನ ಪುಡಿ ಅಥವಾ ಹಾಲನ್ನು ಮಿಕ್ಸ್‌ ಮಾಡಿಕೊಂಡು ಬಿಸಿ ಮಾಡಿಕೊಳ್ಳಬೇಕು. ನಂತರ ಅದಕ್ಕೆ ಮಿಲ್ಕ್‌ಮೇಡ್ ಸೇರಿಸಿಕೊಳ್ಳಬೇಕು. ಈಗ ಮಾವಿನ ಹಣ್ಣಿನ ತಿರುಳನ್ನು ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಂಡು 1 ನಿಮಿಷದವರೆಗೂ ಬಿಸಿ ಮಾಡಿಕೊಳ್ಳಬೇಕು. ಆಮೇಲೆ ಗ್ಯಾಸ್‌ ಮೇಲೆ ಕೆಳಗೆ ಇಳಿಸಬೇಕು. ಹೀಗೆ ಮಿಶ್ರಣವನ್ನು ತಣ್ಣಗಾಗಿಸಿಕೊಂಡು, ಕುಲ್ಫಿ ಅಚ್ಚುಗಳಲ್ಲಿ ಹಾಕಬೇಕು. ನಂತರ ಅದನ್ನು ಮುಚ್ಚಿ ರಾತ್ರಿಯಿಡೀ ಫ್ರೀಜ್ ನಲ್ಲಿ ಇಡಬೇಕು. ಕುಲ್ಫಿಯನ್ನು ಡೆಮಾಲ್ಡ್ ಮಾಡಿ ಮತ್ತು ಅರ್ಧ ಭಾಗಗಳಾಗಿ ಕತ್ತರಿಸಿಕೊಳ್ಳಬೇಕು. ನಂತರ ಅಲಂಕರಕ್ಕಾಗಿ ಕತ್ತರಿಸಿದ ಪಿಸ್ತಾ, ಬಾದಾಮಿಗಳಿಂದ ಹಾಕಿ, ತಕ್ಷಣವೇ ಸರ್ವ್ ಮಾಡಬೇಕು.

ಮಲೈ ಕುಲ್ಫಿಗೆ ಬೇಕಾಗುವ ಸಾಮಾಗ್ರಿ :

  1. 2 ಕಪ್ ಹಾಲು
  2. 1/2 ಕಪ್ ಮಂದಗೊಳಿಸಿದ ಹಾಲು
  3. 1/4 ಕಪ್ ಹಾಲಿನ ಪುಡಿ
  4. 1/2 ಟೀಸ್ಪೂನ್ ಏಲಕ್ಕಿ
  5. ಪಿಸ್ತಾ ಮತ್ತು ಬಾದಾಮಿ ತುಂಡುಗಳು
  6. 3 ಚಮಚ ಸಕ್ಕರೆ (ಐಚ್ಛಿಕ)

ಇದನ್ನೂ ಓದಿ : Orange-Papaya Smoothie : ಬೇಸಿಗೆಯಲ್ಲಿ ಅದ್ಭುತ ಆರೋಗ್ಯಕ್ಕೆ ವರದಾನ ಆರೆಂಜ್‌–ಪಪ್ಪಾಯಿ ಸ್ಮೂಥಿ

ಟೇಸ್ಟಿ ಮಲೈ ಕುಲ್ಫಿ ಮಾಡುವುದು ಹೇಗೆ ?
ಮೊದಲು ಒಂದು ಬೌಲ್ ತೆಗೆದುಕೊಳ್ಳಿ. ಎಲ್ಲಾ ಪದಾರ್ಥಗಳನ್ನು ಅದರಲ್ಲಿ ಹಾಕಬೇಕು. ಇದರ ನಂತರ, ಗ್ಯಾಸ್‌ ಹಚ್ಚಿ 20 ರಿಂದ 25 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಅದು ದಪ್ಪವಾಗುವವರೆಗೂ ಬೇಯಿಸಿಕೊಳ್ಳಬೇಕು. ಇದರ ನಂತರ, ಅದನ್ನು ಗ್ಯಾಸ್‌ ಆಫ್‌ ಮಾಡಿ ತಣ್ಣಗಾಗಲು ಇಡಬೇಕು. ಇದರ ನಂತರ ಅವುಗಳನ್ನು 4 ವಿವಿಧ ಕುಲ್ಫಿ ಅಚ್ಚುಗಳಲ್ಲಿ ಹಾಕಿ, 7 ರಿಂದ 8 ಗಂಟೆಗಳ ಕಾಲ ಫ್ರೀಜರ್‌ನಲ್ಲಿ ಇಡಬೇಕು. ಇದರ ನಂತರ, ಫ್ರೀಜ್ನಿಂದ ಅಚ್ಚನ್ನು ತೆಗೆದುಕೊಂಡು ಸ್ವಲ್ಪ ಸಮಯದವರೆಗೆ ಹಾಗೆ ಇಡಬೇಕು. ಇದರ ನಂತರ, ಕುಲ್ಫಿಯನ್ನು ಅಚ್ಚಿನಿಂದ ಹೊರತೆಗೆದು ಅದನ್ನು ಕತ್ತರಿಸಿ ತಿನ್ನಬಹುದು.

Homemade kulfis recipe in summer: Homemade mango kulfi in summer

Comments are closed.