ಬಿಜೆಪಿಯಲ್ಲಿ ಹಾರಿದ ಬಂಡಾಯದ ಬಾವುಟ : ಹೆಚ್ಚುತ್ತಿದೆ ಕರ್ನಾಟಕ ಕುರುಕ್ಷೇತ್ರದ ಕೌತುಕತೆ

ಬೆಂಗಳೂರು : (Karnataka Kurukshetra) ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ರಣರಂಗ ರಂಗೇರಿದೆ. ಹೆಚ್ಚುಕಮ್ಮಿ ಎಲ್ಲಾ ಕ್ಷೇತ್ರಗಳಿಗೆ ಟಿಕೆಟ್‌ ಹಂಚಿಕೆಯಾಗಿದೆ. ಇನ್ನೇನು ಕೆಲವೇ ಕ್ಷೇತ್ರಗಳು ಕೂಡ ಬಾಕಿ ಇವೆ. ಪಕ್ಷ ಎಂದಲ್ಲಿ ಒಂದು ಕ್ಷೇತ್ರದಲ್ಲಿ ಹಲವು ಅಕಾಂಕ್ಷಿಗಳು, ಚುನಾವಣೆ ಎಂದಲ್ಲಿ ಒಂದು ಅಭ್ಯರ್ಥಿ ಇವೆಲ್ಲಾ ಚುನಾವಣಾ ಅಖಾಡದಲ್ಲಿ ಸಾಮಾನ್ಯವಾದ ಸಂಗತಿಗಳಾಗಿವೆ. ಆದರೆ ಬಿಜೆಪಿಯಲ್ಲಿ ಟಿಕೆಟ್‌ ಹಂಚಿಕೆ ನಂತರದಲ್ಲಿ ಬಂಡಾಯದ ಬಿರುಗಾಳಿ ಎದ್ದಿದೆ. ಈ ಮಧ್ಯೆ ಕರ್ನಾಟಕ ಕುರುಕ್ಷೇತ್ರದ ಕೌತುಕತೆ ಕೂಡ ಹೆಚ್ಚಾಗಿದೆ.

ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸಲ್ಲಿ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಬಿಜೆಪಿಗೆ ಬಂಡಾಯದ ಬಿರುಗಾಳಿ ದೊಡ್ಡ ತಲೆನೋವಾಗಿದೆ. ಹೊಸಮುಖಗಳಿಗೆ ಮಣೆ ಹಾಕಿ ಅಚ್ಚರಿಯ ನಿರ್ಣಯದೊಂದಿಗೆ ಬಿಜೆಪಿ ಟಿಕೆಟ್‌ ಪಟ್ಟಿ ಪ್ರಕಟಿಸಲಾಗಿದೆ. ಈ ಹೊಸ ಪ್ರಯೋಗದಲ್ಲಿ ಜನರ ಅಭಿಪ್ರಾಯದ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ ಎಂಬ ಅಪವಾದಗಳು ವರಿಷ್ಠರ ಮೇಲೆ ಬಂದಿವೆ. ಟಿಕೆಟ್‌ ಆಕಾಂಕ್ಷಿಗಳು ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದು ಕಮಲ ಪಕ್ಷದ ವರಿಷ್ಠರನ್ನು ಮುಜುಗರಕ್ಕೆ ದೂಡಿದೆ.

ಚುನಾವಣಾ ಕಣದಲ್ಲಿ ಜಿದ್ದಾಜಿದ್ದಿನ ರಾಜಕೀಯ ರಣತಂತ್ರಗಳು ನಡೆಯುತ್ತಿದ್ದು, ಬಿಜೆಪಿಯ ಗುಜರಾತ್‌ ಮಾದರಿಯಿಂದ ಹಾಲಿ ಶಾಸಕರು ಕನಸುಗಳು ಭಗ್ನವಾಗಿದೆ. ಈ ಹಿನ್ನಲೆಯಲ್ಲಿ ಹಲವರು ಅಸಮಾಧಾನ ತೋರ್ಪಡಿಸಿದ್ದು, ಪಕ್ಷ ತೊರೆಯುತ್ತಿದ್ದಾರೆ. ಮೂಡಿಗೆರೆಯ ಶಾಸಕ ಎಂಪಿ ಕುಮಾರಸ್ವಾಮಿ, ಕೆ.ಎಸ್‌. ಈಶ್ವರಪ್ಪ, ಲಕ್ಷ್ಮಣ್‌ ಸವದಿ, ಬಾಬುರಾವ್‌ ಚಿಂಚನಚೂರು, ವಿ. ಸೋಮಣ್ಣ, ತುಮಕೂರು ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಬಿಜೆಪಿಯ ಹಿರಿಯ ನಾಯಕ ಸೊಗಡು ಶಿವಣ್ಣ, ಅರಸೀಕೆರೆ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಎನ್.‌ ಆರ್.‌ ಸಂತೋಷ್‌, ಉಡುಪಿ ಕ್ಷೇತ್ರದಲ್ಲಿ ರಘುಪತಿ ಭಟ್‌, ಬೈಂದೂರು ಕ್ಷೇತ್ರದ ಸುಕುಮಾರ್‌ ಶೆಟ್ಟಿ, ಹೀಗೆ ಒಟ್ಟಾರೆಯಾಗಿ ಹಲವಾರು ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ಟಿಕೆಟ್‌ ಕೈ ತಪ್ಪಿದ್ದಕ್ಕೆ ಬಂಡಾಯವೆದ್ದಿದ್ದಾರೆ. ಇದರ ಜೊತೆಗೆ ಪಕ್ಷ ತೊರೆಯುವ ನಿರ್ಧಾರ ಮಾಡಿದ್ದಾರೆ.

ಇದನ್ನೂ ಓದಿ : Ambedkar Jayanti 2023 : ನನ್ನ ರಾಜಕೀಯ ಬದುಕು ಬಾಬಾ ಸಾಹೇಬರ ಋಣ: ಸಿದ್ದರಾಮಯ್ಯ

ಇದನ್ನೂ ಓದಿ : ಹಾಲಾಡಿ ಶ್ರೀನಿವಾಸ್‌ ಶೆಟ್ಟಿ + ಕಿರಣ್‌ ಕೊಡ್ಗಿ : ಗೆಲುವು ಕಾಣುವರೇ ಮೊಳಹಳ್ಳಿ

Karnataka Kurukshetra: Flag of Rebellion Raised in BJP: The Wonder of Karnataka Kurukshetra is Growing

Comments are closed.