ಐಪಿಎಲ್ ಟೂರ್ನಿಯನ್ನು “ಶ್ರೀಮಂತ ಸಿಂಹಾಸನ”ದಿಂದ ಕೆಳಗಿಳಿಸಲು ಸೌದಿ ಅರೇಬಿಯಾ ಮಾಸ್ಟರ್ ಪ್ಲಾನ್

ಬೆಂಗಳೂರು : ಐಪಿಎಲ್ ಟೂರ್ನಿ (Indian Premier League – IPL) ಜಗತ್ತಿನ ಅತ್ಯಂತ ಶ್ರೀಮಂತ ಟಿ20 ಲೀಗ್ ಕ್ರಿಕೆಟ್ ಟೂರ್ನಿ. ಶ್ರೀಮಂತಿಕೆಯಲ್ಲಿ ಐಪಿಎಲ್ ಟೂರ್ನಿಯನ್ನು ಮೀರಿಸುವ ಮತ್ತೊಂದು ಕ್ರಿಕೆಟ್ ಲೀಗ್ ಭೂಮಂಡಲದಲ್ಲೇ ಇಲ್ಲ. ಕ್ಯಾಶ್ ರಿಚ್ ಐಪಿಎಲ್ ಟೂರ್ನಿಯನ್ನು “ಚಿನ್ನದ ಮೊಟ್ಟೆ ಇಡುವ ಕೋಳಿ” ಎಂದೇ ಕರೆಯುತ್ತಾರೆ. ಐಪಿಎಲ್’ನಲ್ಲಿ ಆಟಗಾರಿಗೆ ಸಿಗುವ ಸಂಭಾವನೆ ಜಗತ್ತಿನ ಬೇರಾವ (Saudi Arabia Cricket) ಟಿ20 ಲೀಗ್’ನಲ್ಲೂ ಸಿಗುವುದಿಲ್ಲ.

ಆದರೆ ಮುಂದಿನ ದಿನಗಳಲ್ಲಿ “ಶ್ರೀಮಂತ ಸಿಂಹಾಸನ” ಐಪಿಎಲ್ ಟೂರ್ನಿಯ ಕೈ ತಪ್ಪುವ ಸಾಧ್ಯತೆಯಿದೆ. ಐಪಿಎಲ್’ನಿಂದ ಶ್ರೀಮಂತ ಸಿಂಹಾಸನವನ್ನು ಕಸಿದುಕೊಳ್ಳಲು ಸೌದಿ ಅರೇಬಿಯಾ ಕ್ರಿಕೆಟ್ ಸಂಸ್ಥೆ ಮಾಸ್ಟರ್ ಪ್ಲಾನ್ ಮಾಡ್ತಿದೆ. ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಐಪಿಎಲ್ ಫ್ರಾಂಚೈಸಿ ಮಾಲೀಕರನ್ನೇ ಬಳಸಿಕೊಂಡು ಜಗತ್ತಿನ ಅತ್ಯಂತ ದೊಡ್ಡ ಹಾಗೂ ಶ್ರೀಮಂತ ಟಿ20 ಲೀಗ್ ಆಯೋಜಿಸಲು ಸೌದಿ ಅರೇಬಿಯಾ ಕ್ರಿಕೆಟ್ ಮಂಡಳಿ (Saudi Arabia Cricket) ಮುಂದಾಗಿದೆ.

ಹಿರಿಯ ಕ್ರಿಕೆಟಿಗರು, ಕೋಚ್’ಗಳು ಮತ್ತು ಆಟಗಾರರೇ ಈ ಬಗ್ಗೆ ಮಾಹಿತಿ ನೀಡಿದ್ದು, ಸೌದಿ ಅರೇಬಿಯಾ ಕ್ರಿಕೆಟ್ ಮಂಡಳಿ ಆಯೋಜಿಸಲಿರುವ ಜಗತ್ತಿನ ಅತೀ ದೊಡ್ಡ ಟಿ20 ಲೀಗ್ ಬಗ್ಗೆ ಗುಟ್ಟು ಬಿಚ್ಚಿಟ್ಟಿದ್ದಾರೆ. ಭಾರತದ ಕೆಲ ಆಟಗಾರರೂ ಈ ಟೂರ್ನಿಯಲ್ಲಿಭಾಗವಹಿಸುವ ಸಾಧ್ಯತೆಗಳಿವೆ. ಬಿಸಿಸಿಐ ಅನುಮತಿ ನೀಡಿದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ ಕೂಡ ಸೌದಿ ಅರೇಬಿಯಾ ಟಿ20 ಲೀಗ್’ನಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ. ಸೌದಿ ಅರೇಬಿಯಾ ಸರ್ಕಾರ ಈಗಾಗಲೇ ಐಪಿಎಲ್ ಟೂರ್ನಿಗೆ ಪ್ರಾಯೋಜಕತ್ವ ಹೊಂದಿದೆ. ವಿಸಿಟ್ ಸೌದಿ ಎಂಬ ಹೆಸರಲ್ಲಿ ಐಪಿಎಲ್’ಗೆ ಪ್ರಾಯೋಜಕತ್ವ ನೀಡಿರುವ ಸೌದಿ ಸರ್ಕಾರ ಬಿಸಿಸಿಐನೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ.

ಇದನ್ನೂ ಓದಿ : ಧೋನಿ ಬ್ಯಾಟಿಂಗ್ ವೇಳೆ 2.2 ಕೋಟಿ ವೀವ್ಸ್ : ದಾಖಲೆ ಬರೆದ ಕ್ಯಾಪ್ಟನ್ ಕೂಲ್

ಇದನ್ನೂ ಓದಿ : Suryakumar Yadav: 26 ದಿನಗಳಲ್ಲಿ 4 ಗೋಲ್ಡನ್ ಡಕ್, ವೈಟ್ ಬಾಲ್ ಕ್ರಿಕೆಟ್’ನಲ್ಲಿ ಶಾಕ್ ಮೇಲೆ ಶಾಕ್; ಏನಾಗಿದೆ ಸೂರ್ಯನಿಗೆ..?

ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ಸಂಸ್ಥೆ ಇತ್ತೀಚೆಗಷ್ಟೇ ಇಂಟರ್’ನ್ಯಾಷನಲ್ ಲೀಗ್ ಟಿ20 ಟೂರ್ನಿಯನ್ನು (International League T20- ILT20) ಯಶಸ್ವಿಯಾಗಿ ಆಯೋಜಿಸಿತ್ತು. ಐಪಿಎಲ್ ಫ್ರಾಂಚೈಸಿಗಳಾದ ಕೋಲ್ಕತಾ ನೈಟ್ ರೈಡರ್ಸ್ (ಅಬುಧಾಬಿ ನೈಟ್ ರೈಡರ್ಸ್), ಡೆಲ್ಲಿ ಕ್ಯಾಪಿಟಲ್ಸ್ (ದುಬೈ ಕ್ಯಾಪಿಟಲ್ಸ್), ಮುಂಬೈ ಇಂಡಿಯನ್ಸ್ (ಎಂಐ ಎಮಿರೇಟ್ಸ್) ತಂಡಗಳು ILt20 ಟೂರ್ನಿಯಲ್ಲಿ ಮಾಲೀಕತ್ವ ಹೊಂದಿವೆ. ಅಂತರಾಷ್ಟ್ರೀಯ ಕ್ರಿಕೆಟ್ ಹಾಗೂ ಐಪಿಎಲ್’ನಿಂದ ನಿವೃತ್ತಿಯಾಗಿರುವ ಭಾರತೀಯ ಆಟಗಾರರು ಈ ಟೂರ್ನಿಯಲ್ಲಿ ಆಡಿದ್ದರು.

Saudi Arabia Cricket: Saudi Arabia’s Master Plan to Dethrone IPL Tournament

Comments are closed.