ಕಿಲ್ಲರ್ ಕೊರೊನಾಗೆ ‘ರಸಂ ರಾಮಬಾಣ’ !

0

ಕೊರೊನಾ ವೈರಸ್ ಚೀನಿಯರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಚೀನಾ ಮಾತ್ರವಲ್ಲ ವಿಶ್ವದ ಜನರೇ ಕೊರೊನಾ ವೈರಸ್ ಗೆ ತತ್ತರಿಸಿ ಹೋಗಿದ್ದಾರೆ. ಜೀವಕ್ಕೆ ಕುತ್ತುತರುವ ಕೊರೊನಾ ವೈರಸ್ ಗೆ ರಸಂ ರಾಮಬಾಣ ಅನ್ನೋದು ಅಂಶ ಇದೀಗ ಬಯಲಾಗಿದೆ.

ಇದೇನಪ್ಪಾ, ಭಯಾನಕ ಕೊರೊನಾ ವೈರಸ್ ನ್ನು ರಸಂ ತಡೆಯೋದಕ್ಕೆ ಸಾಧ್ಯಾನಾ ಅಂತಾ ಹುಬ್ಬೇರಿಸಬೇಡಿ. ನಂಬೋದಕ್ಕೆ ಕೊಂಚ ಕಷ್ಟವಾದ್ರೂ ನೀವು ನಂಬಲೇ ಬೇಕು. ಕೊರೋನಾ ವೈರಸ್ (ಎನ್‍ಸಿಒವಿ) ಸೋಂಕುಗಳನ್ನು ತಡೆಗಟ್ಟಲು ಆಯುರ್ವೇದ, ಗಿಡಮೂಲಿಕೆ ಮತ್ತು ಮಸಾಲೆ ಪದಾರ್ಥಗಳು ಸಾಕಷ್ಟು ಪರಿಣಾಮಕಾರಿ ಎಂದು ಶಿಫಾರಸು ಮಾಡಲಾಗಿದೆ. ದಿನನಿತ್ಯದ ಆಹಾರ ಪದ್ದತಿಯ ಭಾಗವಾಗಿರುವ ರಸಂ ಅಥವಾ ಮಸಾಲೆ ಪದಾರ್ಥಗಳ ಕಷಾಯ ಸೇವನೆಯಿಂದಲೂ ಮಾರಕ ಪೀಡೆ ಹತ್ತಿರ ಸುಳಿಯದಂತೆ ನಿಯಂತ್ರಿಸಬಹುದು ಎನ್ನುತ್ತಿದೆ ಆಯುರ್ವೇದ.

ಭಾರತೀಯ ಆಹಾರ ಪದ್ಧತಿಯ ಪ್ರಮುಖ ಪದಾರ್ಥಗಳಾದ ಬೆಳ್ಳುಳ್ಳಿ, ಈರುಳ್ಳಿ, ಜೀರಿಗೆ, ಮೆಣಸು, ಶುಂಠಿ, ಅರಿಶಿಣ, ನಿಂಬೆ, ವೀಳ್ಯದೆಲೆ, ತುಳಸಿ, ಅಮೃತಬಳ್ಳಿ ಕೊರೊನಾ ವೈರಸ್ ತಡೆಯುವ ಸಾಮರ್ಥ್ಯವಿದೆ. ನಮ್ಮ ಆಹಾರದಲ್ಲಿ ಪ್ರಮುಖವಾಗಿ ಬಳಕೆಯಾಗುವ ರಸಂ ಅನ್ನು ನಿತ್ಯವೂ ಸೇವಿಸುವುದರಿಂದ ವೈರಾಣು ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ ಅಲ್ಲದೇ ಕೊರೋನಾ ವೈರಸ್ ಹತೋಟಿಗೂ ಅತ್ಯಂತ ಪರಿಣಾಮಕಾರಿಯಾಗಿದೆ ಅನ್ನೋ ಸಂಶೋಧನೆಯಿಂದ ಬಯಲಾಗಿದೆ. ದೇಹದ ಉಷ್ಣಾಂಶ ಸಮತೋಲನವಾಗಿರದಿದ್ದರೆ ಕೊರೊನಾ ವೈರಸ್ ಸುಲಭವಾಗಿ ದಾಳಿ ಮಾಡುತ್ತದೆ. ರಸಂನಲ್ಲಿ ಸಾಂಬಾರ ಮತ್ತು ಮಸಾಲೆ ಪದಾರ್ಥಗಳು ಸಮೃದ್ದವಾಗಿರುವುದರಿಂದ ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುವುದರ ಜೊತೆಗೆ ಶರೀರದಲ್ಲಿ ರೋಗ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಬಿಸಿ ಬಿಸಿ ಅನ್ನ ಜೊತೆಯಲ್ಲಿ ರಸಂ ಸೇವನೆ ಮಾಡುವುದು ಹೆಚ್ಚು ಸೂಕ್ತ.

ಕೇವಲ ರಸಂ ಕೊರೊನಾ ವೈರಸ್ ನಿಯಂತ್ರಣಕ್ಕೆ ಮಾತ್ರವಲ್ಲ, ಈ ಹಿಂದೆ ಮಲೇಷ್ಯಾ ದೇಶದಲ್ಲಿ ಆತಂಕ ಸೃಷ್ಟಿಸಿದ್ದ ನಿಫಾ ವೈರಸ್ ನಿಯಂತ್ರಿಸುವಲ್ಲಿಯೂ ಆಯುರ್ವೇದ ಹಾಗೂ ಗಿಡಮೂಲಿಕೆಗಳ ರಸಂ ಹೆಚ್ಚು ಪರಿಣಾಮಕಾರಿಯಾಗಿತ್ತು. ಚೀನಾದಲ್ಲಿ ಸಾವು ನೋವುಗಳಿಗೆ ಕಾರಣವಾಗಿದ್ದ ಸಾರ್ಸ್ ಸೋಕಿನ ಹತೋಟಿಯಲ್ಲಿಯೂ ಚೀನಿಯರು ಆಯುರ್ವೇದವನ್ನು ಬಳಕೆ ಮಾಡಿ ಗಿಡಮೂಲಿಕೆಗಳ ಕಷಾಯವನ್ನು ಸೇವಿಸಿದ್ದರು. ನಿಫಾ, ಸಾರ್ಸ್ ವಿರುದ್ದ ಪರಿಣಾಮಕಾರಿ ಫಲಿತಾಂಶವನ್ನು ನೀಡಿದ್ದ ರಸಂ ಹಾಗೂ ಮಸಾಲೆ ಪದಾರ್ಥಗಳ ಕಷಾಯ ಇದೀಗ ಕೊರೊನಾ ವೈರಸ್ ಮೇಲೆಯೂ ಪ್ರಯೋಗ ನಡೆಯುತ್ತಿದೆ.

ವಿಶ್ವದಾದ್ಯಂತ ಭಾರೀ ಆತಂಕ ಸೃಷ್ಟಿಸಿ ಸಾವು-ನೋವಿಗೆ ಕಾರಣವಾಗುತ್ತಿರುವ ಮಾರಕ ಕೊರೋನಾ ವೈರಾಣು ಸೋಂಕು ಹಾವಳಿ ನಿಗ್ರಹಕ್ಕೆ ಹರಸಾಹಸಗಳು ಮುಂದುವರಿದಿರುವಾಗಲೇ, ಈ ಡೆಡ್ಲಿ ವೈರಸ್‍ಗೆ ಭಾರತೀಯ ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದ ಮೂಲಕ ನಿಯಂತ್ರಣ ಸಾಧ್ಯ ಎಂಬುದು ದೃಢಪಟ್ಟಿದ್ದು, ಕೇಂದ್ರ ಸರಕಾರದ ಆಯುಷ್ ಸಚಿವಾಲಯ ಆಯುರ್ವೇದದ ಜೊತೆಗೆ ಯುನಾನಿ ಹಾಗೂ ಹೋಮಿಯೋಪತಿ ಚಿಕಿತ್ಸಾ ಪದ್ದತಿಯಿಂದಲೂ ಕೊರೊನಾ ತಡೆಯಬಹುದು ಅಂತಾ ಶಿಫಾರಸ್ಸು ಮಾಡಿದೆ.

Leave A Reply

Your email address will not be published.