ಗ್ರಾಹಕರಿಗೆ ಕೆಎಂಎಫ್ ಶಾಕ್ : ಫೆ.1 ರಿಂದ ಏರಿಕೆಯಾಗುತ್ತೆ ಹಾಲು, ಮೊಸರು

0

ಬೆಂಗಳೂರು : ರಾಜ್ಯದ ಗ್ರಾಹಕರಿಗೆ ಕೆಎಂಎಫ್ ಶಾಕ್ ನೀಡಿದೆ. ನಂದಿನಿ ಹಾಲು ಹಾಗೂ ಮೊಸರು ಪ್ರತೀ ಲೀಟರ್ ಗೆ 2 ರೂಪಾಯಿ ಏರಿಕೆಯಾಗಲಿದೆ. ಪರಿಷ್ಕೃತ ದರಗಳು ಫೆಬ್ರವರಿ 1ರಿಂದಲೇ ಜಾರಿಗೆ ಬರಲಿದೆ.  14 ಹಾಲು ಒಕ್ಕೂಟಗಳು ಹಾಲಿನ ದರವನ್ನು ಪ್ರತೀ ಲೀಟರ್ ಗೆ 3 ರೂಪಾಯಿ ಏರಿಕೆ ಮಾಡುವಂತೆ ಕೆಎಂಎಫ್ ಗೆ ಪ್ರಸ್ತಾವನೆ ಸಲ್ಲಿಸಿದ್ದವು. ಆದರೆ ಸರಕಾರ ಪ್ರತೀ ಲೀಟರ್ ಗೆ 2 ರೂಪಾಯಿ ಏರಿಕೆ ಮಾಡಿದೆ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.
ಏರಿಕೆಯಾಗುವ ಹಣದಲ್ಲಿ ಒಂದು ರೂಪಾಯಿಯನ್ನು ರೈತರಿಗೆ ಹಾಗೂ 1 ರೂಪಾಯಿ ಹಣವನ್ನು ಜಿಲ್ಲಾ ಹಾಲು ಒಕ್ಕೂಟಗಳಿಗೆ ನೀಡಲು ನಿರ್ಧರಿಸಲಾಗಿದೆ. ರೈತರು ಹಾಗೂ ಜನಸಾಮಾನ್ಯರ ಅನುಕೂಲಕ್ಕಾಗಿ ಕೇವಲ 2 ರೂಪಾಯಿ ಏರಿಕೆ ಮಾಡಲಾಗಿದೆ. ಹೊರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿನ ಹಾಲಿನ ದರ ತೀರಾ ಕಡಿಮೆ ಎಂದು ಜಾರಕಿಹೊಳಿ ಸರಕಾರವನ್ನು ಸಮರ್ಥಿಸಿಕೊಂಡಿದ್ದಾರೆ.

Leave A Reply

Your email address will not be published.