Dry Cough : ಅತಿಯಾಗಿ ಕಾಡುವ ಒಣ ಕೆಮ್ಮು : ಕಾಳು ಮೆಣಸು ಲಿಂಬೆಯ ಅಕ್ರೂಟ್‌ ರಾಮಬಾಣ

(Dry Cough)ವಾತಾವರಣದ ಏರುಪೇರಿನಿಂದ ಶೀತ, ಕೆಮ್ಮು ಹಾಗೂ ಜ್ವರದ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಕೆಲವರಿಗೆ ಶೀತ ಮತ್ತು ಜ್ವರ ಗುಣವಾದರೂ ಕೆಮ್ಮು ಬೇಗನೇ ಗುಣವಾಗುವುದಿಲ್ಲ. ರೋಗಾಣುಗಳು, ಹಾನಿಕಾರವಾದ ಕೊಳೆ, ಕೆಟ್ಟವಾಯು, ದೂಳು ಇತ್ಯಾದಿ ಬಾಹ್ಯ ಸೂಕ್ಷ್ಮ ವಸ್ತುಗಳು ಗಂಟಲಿಗೆ ಸೇರಿಕೊಂಡಾಗ ಕೆರೆತ ಉಂಟಾಗುತ್ತದೆ. ಕಿರುನಾಲಗೆ ಮತ್ತು ಆಡಿನಾಯ್ಡ್‌ ಗ್ರಂಥಿಗಳ ಊತದಿಂದಲೂ ತೀವ್ರವಾದ ಶೀತದಿಂದಲೂ ಕೆಮ್ಮು ಕೆರಳುತ್ತದೆ. ಒಟ್ಟಾರೆ ಒಂದರ ಹಿಂದೆ ಮತ್ತೊಂದು ಅನ್ನುವಂತೆ ಬರುವ ಕೆಮ್ಮುವಿನಿಂದ ರಾತ್ರಿ ವೇಳೆಯಲ್ಲಿ ಮಲಗಲು ಕಷ್ಟವಾಗುತ್ತದೆ. ಹೀಗೆ ಕೆರಳಿದ ಕೆಮ್ಮುಗೆ ಮನೆಯಲ್ಲಿಯೇ ಔಷಧಿಯನ್ನು ಹೇಗೆ ತಯಾರಿಸುವುದು ಎಂದು ತಿಳಿಯೋಣ.

ಬೇಕಾಗುವ ಸಾಮಾಗ್ರಿ :

  • ಕಲ್ಲುಸಕ್ಕರೆ
  • ಕಾಳುಮೆಣಸು
  • ಲಿಂಬೆಹಣ್ಣು

ಮಾಡುವ ವಿಧಾನ :
(Dry Cough)ಒಂದು ಟೇಬಲ್‌ ಸ್ಪೂನ್‌ ಕಾಳುಮೆಣಸನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು. ಆಮೇಲೆ ಅದಕ್ಕೆ 15 ಗ್ರಾಂ ಕಲ್ಲುಸಕ್ಕರೆಯನ್ನು ಸೇರಿಸಿ ಪುಡಿ ಮಾಡಿಕೊಳ್ಳಬೇಕು. ನಂತರ ಇದನ್ನು ಸಣ್ಣ ಉರಿಯಲ್ಲಿ ಒಂದು ಕಡಾಯಿಗೆ ಹಾಕಿ ಎರಡು ದೊಡ್ಡ ಲಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಬೇಕು. ಮೂರು ಚೆನ್ನಾಗಿ ಮಿಶ್ರಣವಾದಾಗ ಒಂದು ರೀತಿ ಅಂಟಿನ ರೂಪದ ಅಕ್ರೋಟವಾಗುತ್ತದೆ. ಬಿಸಿ ಆರಿದ ಮೇಲೆ ತಿಂದರೆ ಒಂದರ ಬೆನ್ನಲ್ಲೇ ಇನ್ನೊಂದು ಅನ್ನುವಂತೆ ಬರುವ ಕೆಮ್ಮು ಕೂಡಲೇ ಗುಣವಾಗುತ್ತದೆ.

ಕಲ್ಲುಸಕ್ಕರೆ
ಕಲ್ಲುಸಕ್ಕರೆ ಕೇವಲ ಸಿಹಿ ಪದಾರ್ಥ ಮಾತ್ರವಲ್ಲದೇ ಔಷಧೀಯ ಗುಣಗಳನ್ನು ಹೊಂದಿದೆ. ಕಲ್ಲುಸಕ್ಕರೆಯನ್ನು ಕಬ್ಬಿನ ಹಾಲನ್ನು ಘನೀಕೃತಗೊಳಿಸಿ ಯಾವುದೇ ತರಹದ ರಾಸಾಯನಿಕ ವಸ್ತುವನ್ನು ಬಳಸದೇ ಹರಳುಗಳ ರೂಪದಲ್ಲಿ ತಯಾರಿಸಲಾಗುತ್ತದೆ. ಕಲ್ಲುಸಕ್ಕರೆ ಸೇವನೆಯು ದೇಹಕ್ಕೆ ತಂಪು ನೀಡುತ್ತದೆ. ಬೆಳೆಯುವ ಮಕ್ಕಳಿಗೆ ಕಲ್ಲುಸಕ್ಕರೆ ಜೊತೆ ಒಣ ಕೊಬ್ಬರಿ, ಬಾದಮಿ, ಗೋಡಂಬಿ ಹಾಗೂ ಒಣ ಖರ್ಜೂರವನ್ನು ನೀಡುವುದ್ದರಿಂದ ಪುಷ್ಠಿದಾಯಕವಾಗಿರುತ್ತದೆ.

ಇದನ್ನೂ ಓದಿ : ಮಕ್ಕಳ ಜ್ಞಾಪಕಶಕ್ತಿ ಹೆಚ್ಚಿಸುತ್ತೆ ಮೊಳಕೆ ಕಾಳು

ಇದನ್ನೂ ಓದಿ : ಕಸವೆಂದು ಎಸೆಯುವ ತೆಂಗಿನಕಾಯಿ ಜುಟ್ಟಿನಿಂದ ಗ್ಯಾಸ್ಟ್ರಿಕ್‌ಗೆ ಪರಿಹಾರ

ಇದನ್ನೂ ಓದಿ : ಸಂಧಿವಾತದ ನೋವಿಗೆ ಪರಿಹಾರ ಸಂದುಬಳ್ಳಿ

ಕಾಳು ಮೆಣಸಿನ ಪುಡಿ ಹಾಗೂ ಕಲ್ಲುಸಕ್ಕರೆಯನ್ನು ತಿನ್ನುವುದರಿಂದಲೂ ಕೆಮ್ಮು ಗುಣವಾಗುತ್ತದೆ. ಮೂಗಿನಿಂದ ರಕ್ತ ಸೋರುತ್ತಿದ್ದರೆ ಕಲ್ಲುಸಕ್ಕರೆಯನ್ನು ಮೂಗಿನ ಬಳಿ ಹಿಡಿದು ವಾಸನೆ ತೆಗೆದುಕೊಂಡಾಗ ಕಡಿಮೆಯಾಗುತ್ತದೆ. ಬಾಯಿಹುಣ್ಣಿಗೆ ಕಲ್ಲುಸಕ್ಕರೆ ಹಾಗೂ ಜೀರಿಗೆಯನ್ನು ಸೇವಿಸುವುದರಿಂದ ಗುಣವಾಗುತ್ತದೆ. ಬೆಳೆಯುವ ಮಕ್ಕಳಿಗೆ ಇದನ್ನು ಕೊಡುವುದರಿಂದ ದೇಹಕ್ಕೆ ಬಲ ಹಾಗೂ ಮೆದುಳಿಗೂ ಒಳ್ಳೆಯದು. ಹೀಗೆ ಅನೇಕ ಆರೋಗ್ಯಕರ ಗುಣವನ್ನು ಒಳಗೊಂಡಿದೆ.

A very irritating dry cough Peppermint Lemon Acret Remedy

Comments are closed.