Almond Cream: ಚಳಿಗಾಲಕ್ಕೆ ತ್ವಚೆ ಒಡೆಯದಿರಲು ಬಾದಾಮಿ ಕ್ರೀಮ್‌ ತಯಾರಿಸಿಕೊಳ್ಳಿ

(Almond Cream)ಬಾದಾಮಿಯಲ್ಲಿ ಜಡ್ಡಿನ ಅಂಶ ಇರುವುದರಿಂದ ತ್ವಚೆಯಲ್ಲಿ ತೆವಾಂಶ ಇರುವಂತೆ ನೋಡಿಕೊಂಡು ಬಿರುಕು ಬಿಡುವುದರಿಂದ ತಪ್ಪಿಸುತ್ತದೆ. ಹಾಗಾಗಿ ಇದರಿಂದ ತಯಾರಿಸಿದ ಕ್ರೀಮ್‌ ಹಚ್ಚಿದರೆ ನಿಮ್ಮ ತ್ವಚೆ ಒಡೆಯದಂತೆ ಕಾಪಾಡಿಕೊಳ್ಳಬಹುದು. ಈ ಕ್ರೀಮ್‌ ಹೇಗೆ ತಯಾರಿಸಬೇಕು ಎಂಬ ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

(Almond Cream)ಬೇಕಾಗುವ ಸಾಮಾಗ್ರಿಗಳು:

  • ಬಾದಾಮಿ
  • ರೋಸ್‌ ವಾಟರ್‌
  • ಬಾದಾಮಿ ಎಣ್ಣೆ
  • ವಿಟಮಿನ್‌ ಇ ಕ್ಯಾಪ್ಸೂಲ್‌
  • ಆಲವೇರಾ ಜೆಲ್

ಮಾಡುವ ವಿಧಾನ:
ಮೊದಲಿಗೆ ಬಾದಾಮಿಯನ್ನು ನೆನಸಿಕೊಂಡು ಅದರ ಸಿಪ್ಪೆಯನ್ನು ತೆಗೆದಿಟ್ಟುಕೊಳ್ಳಬೇಕು. ನಂತರ ಅದಕ್ಕೆ ರೋಸ್‌ ವಾಟರ್‌ ಹಾಕಿಕೊಂಡು ಮಿಕ್ಸಿ ಜಾರಿಯಲ್ಲಿ ರುಬ್ಬಿಕೊಳ್ಳಬೇಕು. ಅನಂತರ ಒಂದು ಬೌಲ್ ನಲ್ಲಿ ಬಾದಾಮಿಯನ್ನು ಸೊಸಿಕೊಳ್ಳಬೇಕು. ಅದಕ್ಕೆ ಒಂದು ಚಮಚ ಬಾದಾಮಿ ಎಣ್ಣೆ, ಎರಡು ವಿಟಮಿನ್‌ ಇ ಕ್ಯಾಪ್ಸೂಲ್‌ , ಎರಡು ಚಮಚ ಆಲವೇರಾ ಜೆಲ್‌ ಹಾಕಿ ಚೆನ್ನಾಗಿ ಕಲಸಿಕೊಂಡು ಸಣ್ಣ ಡಬ್ಬಿಯಲ್ಲಿ ಶೇಖರಿಸಿ ಇಡಬೇಕು. ಇದನ್ನು ಪ್ರತಿದಿನ ಹಚ್ಚಿಕೊಳ್ಳುವುದರಿಂದ ಬಿರುಕು ಚರ್ಮದಿಂದ ತಪ್ಪಿಸಿಕೊಳ್ಳಬಹುದು.

ಕ್ಯಾರೆಟ್‌ ಕ್ರೀಮ್‌

ಬೇಕಾಗುವ ಸಾಮಾಗ್ರಿಗಳು:

  • ಕ್ಯಾರೆಟ್‌
  • ಜೋಳದ ಹಿಟ್ಟು
  • ಆಲವೇರಾ
  • ವಿಟಮಿನ್‌ ಇ ಕ್ಯಾಪ್ಸೂಲ್‌

ಮಾಡುವ ವಿಧಾನ
ಮೊದಲಿಗೆ ತುರಿದ ಕ್ಯಾರೆಟ್‌ ಅನ್ನು ಗ್ರೈಂಡ್‌ ಮಾಡಿಕೊಂಡು ರಸವನ್ನು ಸೊಸಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಬೀಸಿ ನೀರು ಕಾಯಿಸಿಕೊಳ್ಳಬೇಕು. ಆ ಬಿಸಿ ನೀರಿನ ಪಾತ್ರೆಯಲ್ಲಿ ಒಂದು ಸಣ್ಣ ಬೌಲ್ ಇಟ್ಟು ಅದರಲ್ಲಿ ಐದು ಚಮಚ ಕ್ಯಾರೆಟ್‌ ರಸ, ಒಂದು ಚಮಚ ಜೋಳದ ಹಿಟ್ಟು ಹಾಕಿ ಕಾಯಿಸಬೇಕು ದಪ್ಪ ಹದ ಬರುತ್ತಿದ್ದ ಹಾಗೆ ತೆಗೆದಿಟ್ಟುಕೊಳ್ಳಬೇಕು ತಣ್ಣಗಾದ ನಂತರ ಒಂದು ಡಬ್ಬಿಯಲ್ಲಿ ಹಾಕಿಟ್ಟುಕೊಳ್ಳಬೇಕು.ನಂತರ ಅದಕ್ಕೆ ಒಂದು ಚಮಚ ವಿಟಮಿನ್‌ ಇ ಕ್ಯಾಪ್ಸೂಲ್‌ ,ಒಂದು ಚಮಚ ಆಲವೇರಾ ಜೆಲ್‌ ಹಾಕಿ ಮಿಕ್ಸ್‌ ಮಾಡಿಕೊಂಡರೆ ಕ್ಯಾರೆಟ್‌ ಕ್ರೀಮ್‌ ರೆಡಿ.

ಇದನ್ನೂ ಓದಿ:Natural Powder :ಕೂದಲು ತೊಳೆಯಲು ಶಾಂಪೂ ಬದಲು ನೈಸರ್ಗಿಕ ಪುಡಿಯನ್ನು ಬಳಸಿ

ಇದನ್ನೂ ಓದಿ:Long Hair Beauty Tips: ನೀಳ ಕೇಶರಾಶಿ ನಿಮ್ಮದಾಗಬೇಕಾ ? ಹಾಗಾದ್ರೆ ಈ ಟಿಫ್ಸ್ ಫಾಲೋ ಮಾಡಿ

ಇದನ್ನೂ ಓದಿ:Coffee Powder Face Mask :ಬಿಸಿಲಿಗೆ ಟ್ಯಾನ್‌ ಆಗುವ ಚಿಂತೆಯೇ ? ಕಾಫಿ ಪೌಡರ್‌ ಫೇಸ್‌ ಮಾಸ್ಕ್‌ ಮುಖಕ್ಕೆ ಹಚ್ಚಿ

ಕ್ಯಾರೆಟ್‌
ಕ್ಯಾರೆಟ್‌ ನಲ್ಲಿ ಬೀಟಾ ಕೆರೋಟಿನ್‌ ಅಂಶ ಇರುವುದರಿಂದ ದೆಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಮಕ್ಕಳ ಬೆಳವಣಿಗೆಯಲ್ಲೂ ಕೂಡ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಕಣ್ಣಿನ ದೃಷ್ಟಿಯನ್ನು ಕಾಪಾಡುತ್ತದೆ ಮತ್ತು ಹಲವು ಸಮಸ್ಯೆಗಳಿಂದ ದೂರವಿರಿಸುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್‌ ಗಳು ಸೂರ್ಯನ ಕಿರಣಗಳಿಂದಾಗುವ ಅಪಾಯವನ್ನು ತಪ್ಪಿಸುತ್ತದೆ. ನೆನಪಿನ ಶಕ್ತಿಯನ್ನೂ ಕೂಡ ವೃದ್ಧಿಸುತ್ತದೆ.

ಇದನ್ನೂ ಓದಿ:Protein Dosa:ತೂಕ ಇಳಿಸಲು ಆರೋಗ್ಯಕರ ಟೇಸ್ಟಿ ಪ್ರೋಟಿನ್‌ ದೋಸೆ

Prepare almond cream for winter to prevent skin breakouts

Comments are closed.