dark lips : ಕಪ್ಪು ಬಣ್ಣದ ತುಟಿಯಿಂದ ಮುಜುಗರಕ್ಕೆ ಒಳಗಾಗಿದ್ದೀರೇ..? ಹಾಗಾದಲ್ಲಿ ಟ್ರೈ ಮಾಡಿ ಈ ಮನೆಮದ್ದು..!

dark lips :ಹವಾಮಾನ ವೈಪರಿತ್ಯದಿಂದ ಮೊದಲು ಹಾನಿಗೊಳಗಾಗುವುದೇ ತುಟಿ. ಧೂಮಪಾನ, ಮಾಲಿನ್ಯ , ನಿರ್ಜಲೀಕರಣ ಹೀಗೆ ನಾನಾ ಕಾರಣಗಳಿಂದ ತುಟಿಯ ಆರೋಗ್ಯವು ಹದಗೆಡುತ್ತದೆ. ಒಡಕು ತುಟಿಗಳು ಕಾಲ ಕಳೆದಂತೆ ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ನಮ್ಮ ಚರ್ಮದ ಬಣ್ಣದಂತೆ ಪ್ರತಿಯೊಬ್ಬರ ತುಟಿಯೂ ಒಂದೊಂದು ಬಣ್ಣದಲ್ಲಿ ಇರುತ್ತದೆ. ಯಾವುದೇ ಒಂದು ಬಣ್ಣವನ್ನು ನಾವು ಆರೋಗ್ಯಕರ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆದರೆ ನಾವು ಕೆಲವೊಂದು ಮನೆಮದ್ದಿನ ಸಹಾಯದಿಂದ ಕಪ್ಪು ಬಣ್ಣದ ತುಟಿಯನ್ನು ಕಾಂತಿಯುತವಾಗಿ ಮಾಡಬಹುದಾಗಿದೆ.

ಗುಲಾಬಿ ಹೂವಿನ ದಳಗಳು: ಗಾರ್ಡನ್​ನಲ್ಲಿ ಬೆಳೆದ ಗುಲಾಬಿ ಹೂಗಳು ಬಾಡಿ ಉದುರುವ ಮುನ್ನ ನೀವಿದನ್ನು ನಿಮ್ಮ ತುಟಿಯ ಬಣ್ಣ ಬದಲಾಯಿಸಲು ಬಳಕೆ ಮಾಡಬಹುದು. ನಿಮ್ಮ ತುಟಿಯನ್ನು ಮೃದುವಾಗಿಸಲು ಗುಲಾಬಿ ದಳವು ಅತ್ಯಂತ ಸಹಾಯಕ. ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ. ರಾತ್ರಿ ಮಲಗುವ ಮುನ್ನ ಕಾಲು ಕಪ್​ ಹಾಲಿನಲ್ಲಿ ಸ್ವಲ್ಪ ಗುಲಾಬಿ ಹೂವಿನ ದಳಗಳನ್ನು ನೆನೆಸಿಡಿ. ಇದನ್ನು ನಿಮ್ಮ ತುಟಿಗೆ ಹಚ್ಚಿಕೊಂಡು 30 ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳಿ. ಈ ರೀತಿ ಮಾಡುವುದರಿಂದ ನೀವು ಕ್ರಮೇಣವಾಗಿ ಕಪ್ಪು ತುಟಿಯಿಂದ ಮುಕ್ತಿ ಹೊಂದಬಹುದಾಗಿದೆ.

ಬೀಟ್ ರೂಟ್​ : ಬೀಟ್​ ರೂಟ್​ನಲ್ಲಿರುವ ನೈಸರ್ಗಿಕ ಗುಲಾಬಿ ಬಣ್ಣವು ನಿಮ್ಮ ತುಟಿಯ ಆರೋಗ್ಯವನ್ನು ಸುಧಾರಿಸಬಲ್ಲದು. ಇದಕ್ಕಾಗಿ ನೀವು ಮಾಡಬೇಕಾದದ್ದು ಇಷ್ಟೇ. ಸಣ್ಣ ತುಂಡು ಬೀಟ್​ರೂಟ್​ನ್ನು ತೆಗೆದುಕೊಂಡು ನಿಮ್ಮ ತುಟಿಗೆ ಉಜ್ಜಿಕೊಳ್ಳಿ.ಅಥವಾ ಬೀಟ್​ರೂಟ್​ ರಸವನ್ನು ತೆಗೆದು ಇದಕ್ಕೆ ಜೇನುತುಪ್ಪವನ್ನು ಸೇರಿಸಿ ಈ ಮಿಶ್ರಣವನ್ನು ರಾತ್ರಿ ತುಟಿಗೆ ಹಚ್ಚಿಕೊಂಡು ಮಲಗಿ. ಮಾರನೇ ದಿನ ಬೆಳಗ್ಗೆ ತುಟಿಯನ್ನು ತೊಳೆದುಕೊಳ್ಳಿ. ಇದರಿಂದ ನಿಮ್ಮ ಕಪ್ಪು ಬಣ್ಣದ ತುಟಿ ಗುಲಾಬಿ ಬಣ್ಣಕ್ಕೆ ತಿರುಗಲಿದೆ.

ಹಾಲು ಹಾಗೂ ಅರಿಶಿಣ :ಅರಿಶಿಣ ಪುರಾತನ ಕಾಲದಿಂದಲೂ ಆರ್ಯುವೇದದಲ್ಲಿ ಬಳಕೆಯಾಗುತ್ತಿದೆ. ಇದು ನಿಮ್ಮ ಮುಖದ ಆರೋಗ್ಯದ ರಕ್ಷಣೆ ಮಾತ್ರವಲ್ಲದೇ ತುಟಿಯ ಆರೋಗ್ಯವನ್ನೂ ರಕ್ಷಿಸಬಲ್ಲದು. ಅರಿಶಿಣವು ನಿಮ್ಮ ತುಟಿಯ ಮೇಲಿರುವ ಡೆಡ್​ ಸ್ಕಿನ್​ನ್ನು ನಾಶ ಮಾಡಬಲ್ಲದು. ಕೆಲ ಹನಿ ಹಾಲಿನ ಜೊತೆಯಲ್ಲಿ ಅರಿಶಿಣವನ್ನು ಮಿಶ್ರಣ ಮಾಡಿ ತುಟಿಗೆ ಹಚ್ಚಿಕೊಳ್ಳಿ. 15-20 ನಿಮಿಷ ಬಿಟ್ಟು ತುಟಿಯನ್ನು ತೊಳೆದುಕೊಳ್ಳಿ. ಇದರಿಂದ ಕಪ್ಪು ಬಣ್ಣದ ತುಟಿಯ ಸಮಸ್ಯೆಯಿಂದ ಮುಕ್ತಿ ಹೊಂದಬಹುದಾಗಿದೆ.

ಇದನ್ನು ಓದಿ : hair masks to stop hair fall in winters :ಚಳಿಗಾಲದಲ್ಲಿ ಕೂದಲಿನ ಆರೈಕೆಗೆ ಟ್ರೈ ಮಾಡಿ ಈ ಹೇರ್​ಮಾಸ್ಕ್​​​

ಇದನ್ನೂ ಓದಿ : Benefits Of Saffron : ತ್ವಚೆಯ ಆರೋಗ್ಯ ಕಾಪಾಡಲು ಬಳಸಿ ‘ಕೇಸರಿ’

Are dark lips the cause of your sorrow? THESE are the 3 easy home remedies to improve dark lips naturally

Comments are closed.