Aromatherapy :ಸುವಾಸನೆ ಮೂಲಕವೂ ಚಿಕಿತ್ಸೆ: ಅರೋಮ ಥೆರಪಿ ಹಲವು ರೋಗಗಳಿಗೆ ರಾಮಬಾಣ

ಅರೋಮಾಥೆರಪಿ ( Aromatherapy)ಯು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಕಳೆದ ಕೆಲವು ವರ್ಷಗಳಿಂದ, ಮೆದುಳನ್ನು ಶಾಂತಗೊಳಿಸಲು ಮತ್ತು ದೇಹವನ್ನು ವಿಶ್ರಾಂತಿ ಮಾಡಲು ಇದನ್ನು ಬಳಸಲಾಗುತ್ತದೆ. ಸ್ಪಾ(Spa)ಗಳು ಮತ್ತು ವೆಲ್ ನೆಸ್ ಕೇಂದ್ರ(Wellness Centre)ಗಳಲ್ಲಿ, ಜನರು ಯಂಗ್(Young) ಆಗಿ ಕಾಣುವಂತೆ ಮಾಡಲು ಅರೋಮಾಥೆರಪಿಯನ್ನು ಬಳಸಲಾಗುತ್ತದೆ. ತಜ್ಞರು ನಿದ್ರಾಹೀನತೆಯಿಂದ ಬಳಲುತ್ತಿರುವ ಜನರಿಗೆ ಕೆಲವು ಗಂಟೆಗಳ ನಿದ್ರೆಯನ್ನು ಪಡೆಯಲು ಮಲಗುವ ಮೊದಲು ಅದರ ಬಳಕೆಯನ್ನು ಶಿಫಾರಸು ಮಾಡುತ್ತಾರೆ.

ಅರೋಮ ಥೆರಪಿ ಅಂದ್ರೇನು?
ಅರೋಮಾಥೆರಪಿಯು ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಲು ನೈಸರ್ಗಿಕ ಸಸ್ಯ ಸಾರಗಳನ್ನು ಬಳಸಿ ಮಾಡುವ ಚಿಕಿತ್ಸಾ ವಿಧಾನವಾಗಿದೆ. ಕೆಲವೊಮ್ಮೆ ಇದನ್ನ ಎಸೆನ್ಶಿಯಲ್ ಆಯಿಲ್ ಥೆರಪಿ ಎಂದು ಕರೆಯಲಾಗುತ್ತದೆ. ಅರೋಮಾಥೆರಪಿಯು ದೇಹ, ಮನಸ್ಸು ಮತ್ತು ಆತ್ಮದ ಆರೋಗ್ಯವನ್ನು ಸುಧಾರಿಸಲು ಆರೊಮ್ಯಾಟಿಕ್ ತೈಲಗಳನ್ನು ಬಳಸುತ್ತದೆ. ಇದು ದೈಹಿಕ ಮತ್ತು ಭಾವನಾತ್ಮಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಆದರೆ ಅರೋಮಾಥೆರಪಿ ಚರ್ಮಕ್ಕೆ ಹೇಗೆ ಪ್ರಯೋಜನವನ್ನು ನೀಡುತ್ತದೆ? ಯಾವೆಲ್ಲಾ ರೀತಿಯಲ್ಲಿ ಅರೋಮ ಥೆರಪಿ ಮಾಡಬೇಕು, ಯಾವ ಎಸೆನ್ಶಿಯಲ್ ಆಯಿಲ್ ಬಳಸಬಹುದು ಇಲ್ಲಿದೆ ಪೂರ್ತಿ ಡೀಟೈಲ್ಸ್.

ಲ್ಯಾವೆಂಡರ್ ಎಸೆನ್ಶಿಯಲ್ ಆಯಿಲ್
ಈ ಎಸೆನ್ಶಿಯಲ್ ಆಯಿಲ್ ನಿಮ್ಮ ನರಮಂಡಲವನ್ನು ಶಾಂತಗೊಳಿಸುತ್ತದೆ ಮತ್ತು ಮನಸ್ಸಿನಲ್ಲಿ ವಿಶ್ರಾಂತಿ ಸ್ಥಿತಿಯನ್ನು ಉಂಟುಮಾಡುತ್ತದೆ. ಲ್ಯಾವೆಂಡರ್ ಆಯಿಲ್ ಸರಾಡಿಕಲ್‌ಗಳಿಂದ ಚರ್ಮವನ್ನು ರಕ್ಷಿಸುತ್ತದೆ ಮತ್ತು ಆಯಾಸವನ್ನು ತೊಡೆದುಹಾಕುತ್ತದೆ.

ಸ್ಯಾಂಡಲ್ ವುಡ್ ಎಸೆನ್ಶಿಯಲ್ ಆಯಿಲ್
ಶ್ರೀಗಂಧವು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ ಎಂದು ತಿಳಿದುಬಂದಿದೆ ಮತ್ತು ಚರ್ಮಕ್ಕೆ ಹೆಚ್ಚಿನ ತೇವಾಂಶ ತರುತ್ತದೆ.

ರೋಸ್ ಮೆರಿ ಎಸೆನ್ಶಿಯಲ್ ಆಯಿಲ್
ಇದು ರಕ್ತದ ನಾಳಗಳನ್ನು ಹಿಗ್ಗಿಸಿ ರಕ್ತ ಸಂಚಾರ ಸುಗಮವಾಗುವಂತೆ ಮಾಡುತ್ತದೆ. ಇಷ್ಟೇ ಅಲ್ಲದೇ ಗುಲಾಬಿ, ನಿಂಬೆ, ಟೀ ಟ್ರೀ ಹಾಗೂ ಮುಂತಾದ ಅನೇಕ ಆಯಿಲ್ ಬಳಕೆಯಲ್ಲಿವೆ. ಇವುಗಳನ್ನು ಬಾಡಿ ಲೋಷನ್, ಹೇರ್ ಆಯಿಲ್, ಶಂಪೂ, ಕಂಡೀಶನರ್ ಜೊತೆಯೂ ಬಳಸಬಹುದು.

ಅರೋಮ ಥೆರಪಿ ಉಪಯೋಗಗಳು ಏನೆಲ್ಲಾ?
ಸಾಕಷ್ಟು ಜನಪ್ರಿಯತೆ ಪಡೆದ ಈ ಥೆರಪಿಯು ಹಲವು ಪ್ರಯೋಜನಗಳನ್ನು ಹೊಂದಿದೆ. ಮೈಗ್ರೇನ್, ನಿದ್ರಾಹೀನತೆ, ಸ್ಟ್ರೆಸ್, ಇಮ್ಯುನಿಟಿ ಹೆಚ್ಚಿಸಲು, ಸೌಂದರ್ಯ ವರ್ಧನೆಗೆ ರಾಮಬಾಣವಾಗಿ ಇದನ್ನು ಬಳಸುತ್ತಾರೆ.

ಸೈಡ್ ಇಫೆಕ್ಟ್
ಹೆಚ್ಚಿನ ಎಸೆನ್ಶಿಯಲ್ ಆಯಿಲ್ ಬಳಸಲು ಸುರಕ್ಷಿತವಾಗಿದೆ. ಆದರೆ ಅವುಗಳನ್ನು ಬಳಸುವಾಗ ನೀವು ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆಗಳಿವೆ, ಹಾಗೆಯೇ ನೀವು ತಿಳಿದಿರಬೇಕಾದ ಅಡ್ಡಪರಿಣಾಮಗಳು, ವಿಶೇಷವಾಗಿ ನೀವು ಯಾವುದೇ ಪ್ರಿಸ್ಕ್ರಿಪ್ಷನ್ ಔಷಧಿಗಳನ್ನು ತೆಗೆದುಕೊಂಡರೆ, ನೇರವಾಗಿ ನಿಮ್ಮ ಚರ್ಮಕ್ಕೆ ಬಳಸಬೇಡಿ.
ಎಸೆನ್ಶಿಯಲ್ ಆಯಿಲ್ ಬಳಸುವ ಮೊದಲು ಚರ್ಮದ ಪ್ಯಾಚ್ ಟೆಸ್ಟ್ ಮಾಡಲು ಮರೆಯದಿರಿ. ಇಲ್ಲವಾದಲ್ಲಿ ರಾಶಸ್, ಅಸ್ತಮಾ, ಅಲರ್ಜಿ, ತಲೆ ನೋವು ಉಂಟಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Best Omicron Mask : ಓಮಿಕ್ರಾನ್ ವಿರುದ್ಧ ಹೋರಾಡಲು ಬೆಸ್ಟ್ ಮಾಸ್ಕ್ ಯಾವುದು ಗೊತ್ತಾ?

ಇದನ್ನೂ ಓದಿ: Quinoa Health Benefits : ಕ್ವಿನೋವಾ ಧಾನ್ಯದ ಪರಿಚಯವಿದೆಯೇ? ಆರೋಗ್ಯಕ್ಕಂತೂ ಇದು ಬಹಳ ಉಪಕಾರಿ

(Uses And Types of Aromatherapy)

Comments are closed.