Bamboo Bottle Benefits : ಬಿದಿರಿನ ಬಾಟಲಿಯಲ್ಲಿ ನೀರುಕುಡಿಯುವುದರಿಂದ ಸಿಗುವ ಪ್ರಯೋಜನಗಳು ನಿಮಗೆ ಗೊತ್ತಾ?

ಬಿದಿರು (Bamboo) ಬಹಳ ಉಪಯುಕ್ತ ಬೆಳೆ. ಬಿದಿರಿನಿಂದ ಅನೇಕ ಪ್ರಯೋಜನಗಳಿವೆ. ಈಶಾನ್ಯ (North-East) ಭಾರತದ ರೈತರು ತಮ್ಮ ಜೀವನೋಪಾಯಕ್ಕಾಗಿ ಬಿದಿರನ್ನು ಬೆಳೆಯುತ್ತಾರೆ. ಹಾಗೆಯೇ ಭಾರತದ ಇತರ ಭಾಗಗಳಲ್ಲಿಯೂ ಬಿದಿರು ಕೃಷಿಯನ್ನು ಮಾಡಲಾಗುತ್ತದೆ. ಬಿದಿರಿನ ಏಣಿಯನ್ನು ಮಾಡುವುದಲ್ಲದೆ, ಅದರಿಂದ ಬುಟ್ಟಿ, ಪ್ಲೇಟ್‌ಗಳನ್ನೂ ತಯಾರಿಸುತ್ತಾರೆ. ಬಿದಿರಿನಿಂದ ನೀರಿನ ಬಾಟಲಿಗಳನ್ನೂ ತಯಾರಿಸುತ್ತಾರೆ. ಇದರ ಒಂದು ವಿಶೇಷತೆ ಏನೆಂದರೆ ಇದು ನೀರನ್ನು ದೀರ್ಘಕಾಲ ತಣ್ಣಗಿರಿಸುತ್ತದೆ. ಇದರಲ್ಲಿರುವ ನೀರು, ಆರೋಗ್ಯ ಪ್ರಯೋಜನಗಳನ್ನು (Bamboo Bottle Benefits) ಸಹ ನೀಡುತ್ತದೆ. ಹಾಗೆ ನೋಡುವುದಾದರೆ ಬಿದಿರಿನ ಬಳಕೆಯು ಆರೋಗ್ಯ ಮತ್ತು ಆರ್ಥಿಕತೆಯ ದೃಷ್ಟಿಯಿಂದ ಲಾಭದಾಯಕ ವ್ಯವಹಾರವೂ ಆಗಿದೆ.

ಸದ್ಯ ಬಿದಿರಿನ ಬಾಟಲಿ ವಿಶೇಷ ಕಾರಣದಿಂದ ಚರ್ಚೆಗೆ ಗ್ರಾಸವಾಗಿದೆ. ನಾಗಾಲ್ಯಾಂಡ್‌ನ ಸಚಿವರು ಬಿದಿರಿನ ಪ್ರಯೋಜನಗಳ ಬಗ್ಗೆ ಟ್ವೀಟ್ ಮಾಡಿದ್ದಾರೆ. ಅಂದಿನಿಂದ ಬಿದಿರು ಬೆಳಕಿಗೆ ಬಂದಿದೆ. ಬಿದಿರು ಕೊಡುವುದಲ್ಲ, ಬಿದಿರಿನಿಮದ ನೀರು ಕುಡಿಯಲು ಎಂದು ಬರೆದುಕೊಂಡಿದ್ದಾರೆ. ಇಂಗ್ಲಿಷ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಹಸಿರು ಚಿನ್ನ ಎಂದು ಕರೆಯಲ್ಪಡುವ ಬಿದಿರು ಅನಿಯಮಿತ ಸಾಮರ್ಥ್ಯವನ್ನು ಹೊಂದಿದೆ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆಯಲ್ಲಿ ಅದರ ಬಳಕೆಯು ಪ್ರಕೃತಿ ಮಾತೆಗೆ ಅದ್ಭುತಗಳನ್ನು ಮಾಡುತ್ತದೆ ಎಂದು ಬರೆದಿದ್ದಾರೆ. ಈಶಾನ್ಯ ಭಾರತದ ಎಲ್ಲಾ ವಾಣಿಜ್ಯೋದ್ಯಮಿಗಳಿಗೆ ಅಭಿನಂದನೆಗಳು, ಅದರ ನಿಜವಾದ ಸಾಮರ್ಥ್ಯವನ್ನು ಪಡೆಯಲು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ.

ಬಿದಿರಿನ ಪ್ರಯೋಜನಗಳು:

  • ಪ್ಲಾಸ್ಟಿಕ್‌ ಬಾಟಲಿಯಲ್ಲಿ ಸಂಗ್ರಹಿಸಿದ ನೀರು ಉತ್ತಮವಲ್ಲ. ಆದರೆ ಬಿದಿರಿನ ಬಾಟಲಿಯಲ್ಲಿ ಶೇಖರಿಸಿದ ನೀರು ಆರೋಗ್ಯಕ್ಕೆ ಉತ್ತಮವಾಗಿದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ.
  • ಪ್ಲಾಸ್ಟಿಕ್‌ ಬಾಟಲಿಯ ನೀರಿನಿಂದ ರಾಸಾಯನಿಕಗಳು ದೇಹಕ್ಕೆ ಸೇರುತ್ತವೆ. ಇದಲ್ಲದೇ ಪ್ಲಾಸ್ಟಿಕ್‌ ಬಾಟಲಿಯಿಂದ ಮಾಲಿನ್ಯವೂ ಆಗುತ್ತದೆ.
  • ಬಿದಿರಿನ ಬಾಟಲಿಯ ನೀರು ಪೋಷಕಾಂಶಗಳ ಗಣಿಯಾಗಿದೆ. ಇದು ಉತ್ತಮ ಪ್ರಮಾಣದ ವಿಟಮಿನ್ ಬಿ 6 (ಪಿರಿಡಾಕ್ಸಿನ್), ಪೊಟ್ಯಾಸಿಯಮ್, ತಾಮ್ರ, ಮ್ಯಾಂಗನೀಸ್, ಸತು, ವಿಟಮಿನ್ ಬಿ 2 (ರೈಬೋಫ್ಲಾವನ್), ಟ್ರಿಪ್ಟೊಮರ್, ಪ್ರೋಟೀನ್, ಐಸೊಲ್ಯೂಸಿನ್ ಮತ್ತು ಕಬ್ಬಿಣವನ್ನು ಹೊಂದಿರುತ್ತದೆ. ಬಿದಿರಿನ ಬಾಟಲಿಯನ್ನು ನೀರಿಗಾಗಿ ಬಳಸಿದರೆ, ಈ ಎಲ್ಲಾ ಅಂಶಗಳು ದೇಹವನ್ನು ತಲುಪುತ್ತವೆ.

ಇದನ್ನೂ ಓದಿ : Pacemaker and Smartwatches : ಸ್ಮಾರ್ಟ್‌ವಾಚ್‌ನಿಂದ ಪೇಸ್‌ಮೇಕರ್‌ ಹಾಕಿಸಿಕೊಂಡವರಿಗೆ ತೊಂದರೆ ಆಗಬಹುದಾ? ಅಧ್ಯಯನ ಹೇಳುವುದಾದರೂ ಏನು?

ಇದನ್ನೂ ಓದಿ : High Cholesterol Tips : ಅಧಿಕ ಕೊಲೆಸ್ಟ್ರಾಲ್‌ನ ಭಯವೇ ? ಹಾಗಾದರೆ ಈ ಆಹಾರವನ್ನು ತಿನ್ನಿರಿ

(Bamboo Bottle Benefits. This is better than plastic bottle. know the health benefits)

Comments are closed.