ಕೂದಲು ಉದುರುತ್ತಿದ್ಯಾ ? ಟೆನ್ಶನ್ ಬಿಡಿ ಮನೆಯಲ್ಲಿಯೇ ಮಾಡಿ ಮದ್ದು….!!!

  • ಅಂಚನ್ ಗೀತಾ

ಕೂದಲು ಉದುರುವುದು ಇಂದು ಸಾಮಾನ್ಯವಾಗಿ ಎಲ್ಲರಲ್ಲೂ ಕಾಣಿಸಿಕೊಳ್ಳುವ ಸಮಸ್ಯೆಯಾಗಿದೆ. ಅದ್ರಲ್ಲು ಹುಡುಗರಲ್ಲಂತೂ ಹುಡುಗಿಯರಿಗಿಂತನೂ ಹೆಚ್ಚಾಗಿ ಈ ಸಮಸ್ಯೆ ಕಾಡುತ್ತಿದೆ. ಕೆಲವೊಮ್ಮೆ ಕೂದಲು ಉದುರುವಿಕೆ ಎಷ್ಟರ ಮಟ್ಟಿಗೆ ಅಧಿಕವಾಗಿರುತ್ತದೆ.

ಅಂದರೆ ಮನೆಯ ಯಾವುದೇ ಸ್ಥಳದಲ್ಲಿ ನೋಡಿದರೂ ಅಲ್ಲಿ ಕೂದಲಿನ ಎಳೆಗಳೇ! ಹೀಗೆ ನನ್ನ ಗೆಳೆಯನೊಬ್ಬ ಕೂದಲು ಉದೋರದಕ್ಕೆ ಪರಿಹಾರ ಹೇಳು ಅಂದ. ಅದಕ್ಕಾಗಿ ಈ ಮನೆಮದ್ದನ್ನ ಇಲ್ಲಿ ಹಾಕ್ತಿನಿ. ನಿಮಗೂ ಸಹಾಯವಾಗಬಹುದು. ಕೂದಲು ಉದುರುವುದನ್ನು ತಡೆಯಲು ಸಾಕಷ್ಟು ವಿವಿಧ ಬಗೆಯ ಶಾಂಪೂ ಮತ್ತಿತರ ವಸ್ತುಗಳನ್ನು ಬಳಸುತ್ತೇವೆ. ಆದರೆ ಇವುಗಳಿಂದ ಕೂದಲು ಉದುರುವಿಕೆಯನ್ನು ತಡೆಯುವುದಕ್ಕಿಂತ ಅಧಿಕವಾಗಿ ಅಡ್ದ ಪರಿಣಾಮಗಳೇ ಹೆಚ್ಚು.

ಆದ್ದರಿಂದಲೇ ಕೂದಲು ಉದುರಿವಿಕೆಯನ್ನು ಕಡಿಮೆ ಮಾಡುವ ಹಾಗೂ ಯಾವುದೇ ಅಡ್ಡಪರಿಣಾಮಗಳಿಲ್ಲದ ಮನೆ ಮದ್ದುಗಳನ್ನು ಬಳಸುವುದು ಕೂದಲಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.

ಮನೆಮದ್ದುಗಳನ್ನು ನೈಸರ್ಗಿಕವಾಗಿ ದೊರಕುವ ವಸ್ತುಗಳನ್ನು ಉಪಯೋಗಿಸಿ ತಯಾರಿಸುವುದಾದ್ದರಿಂದ ಇದು ಕೂದಲಿಗೆ ಬಹಳ ಒಳ್ಳೆಯದು. ಹೀಗಾಗಿ ನಾವು ಹೇಳುವ ಮನೆ ಮದ್ದುಗಳನ್ನು ಟ್ರೈ ಮಾಡಿ.

ಸದಾ ಕೂದಲನ್ನು ಸ್ವಚ್ಛವಾಗಿಡಿ :
ನಿಮ್ಮ ಕೂದಲಿಗೆ ಸರಿಹೊಂದುವಂತಹ ಶ್ಯಾಂಪೂ ಹಾಗೂ ಕಂಡೀಷನರ್ ಗಳನ್ನೇ ಬಳಸಿ.

ಸಾಸಿವೆ ಎಣ್ಣೆ
ಒಂದು ಲೋಟ ಸಾಸಿವೆ ಎಣ್ಣೆ ಹಾಗೂ ನಾಲ್ಕಾರು ಗೋರಂಟಿ ಎಲೆಗಳನ್ನು ಮಿಶ್ರಣ ಮಾಡಿ, ಕುದಿಸಿ ಒಂದು ಬಾಟಲಿಯಲ್ಲಿ ಶೇಖರಿಸಿಕೊಳ್ಳಿ ಆನಂತರ ನಿಧಾನವಾಗಿ ಅದನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿಕೊಳ್ಳಿ.

ಮೆಂತ್ಯ ಬೀಜ
ಒಂದು ಲೋಟ ಮೆಂತ್ಯ ಬೀಜಕ್ಕೆ ನೀರನ್ನು ಸೇರಿಸಿ ರುಬ್ಬಿ. ನಂತರ ಅದನ್ನು ತಲೆಗೆ ಹಚ್ಚಿ 40 ನಿಮಿಷಗಳ ಕಾಲ ಹಾಗೆಯೇ ಬಿಟ್ಟು ನಂತರ ನೀರಿನಲ್ಲಿ ಕೂದಲನ್ನು ಸ್ವಚ್ಛಗೊಳಿಸಿ. ಹೀಗೆ ಒಂದು ತಿಂಗಳ ಕಾಲ ನಿರಂತರವಾಗಿ ಮಾಡಿದರೆ ಕೂದಲುದುರುವಿಕೆ ಕಡಿಮೆಯಾಗುತ್ತದೆ.

ತಣ್ಣೀರಿನಿಂದ ಆರೈಕೆ
ತಣ್ಣನೆಯ ನೀರಿನಲ್ಲಿ ಕೂದಲನ್ನು ತೊಳೆದು ಬೆರಳುಗಳಿಂದ ಬಲವಾಗಿ ತಲೆಯನ್ನು ಉಜ್ಜಿ. ಇದು ಕ್ರಮೇಣ ಕೂದಲು ಉದುರುವ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ.

ಈರುಳ್ಳಿ
ಕೂದಲಿಗೆ ಈರುಳ್ಳಿಯನ್ನು ಚೆನ್ನಾಗಿ ತಿಕ್ಕಿ. ನಂತರ ಅದು ಕೆಂಪು ಬಣ್ಣ ಬಂದ ಮೇಲೆ ಜೇನು ತುಪ್ಪವನ್ನು ಬಳಸಿದರೆ ಕೂದಲು ಉದುರುವುದು ನಿಲ್ಲುತ್ತದೆ.

ಜೇನು ಮತ್ತು ಮೊಟ್ಟೆಯ ಹಳದಿ
ಕೂದಲು ಉದುರುವಿಕೆಯನ್ನು ತಡೆಗಟ್ಟಲು ಜೇನು, ಮೊಟ್ಟೆಯ ಹಳದಿ ಭಾಗವನ್ನು ಮಿಶ್ರಣಮಾಡಿ ಬಳಸಬಹುದು.

ಶ್ಯಾಂಪೂ
ಮನೆಯಲ್ಲಿಯೇ ಶ್ಯಾಂಪೂವನ್ನು ತಯಾರಿಸಿಕೊಳ್ಳಬಹುದು. ಐದು ಚಮಚ ಮೊಸರು, ಒಂದು ಚಮಚ ನಿಂಬೆ ರಸ, ಮಿಶ್ರಣ ಮಾಡಿ ತಲೆಗೆ ಹಚ್ಚಿ ಕೆಲವು ಸಮಯದ ನಂತರ ಸ್ನಾನ ಮಾಡಿ.

ತೆಂಗಿನ ಎಣ್ಣೆ
ತೆಂಗಿನ ಎಣ್ಣೆ ಹಾಗೂ ಒಂದೆರಡು ನೆಲ್ಲಿ ಒಣ ತುಂಡುಗಳನ್ನು ಮಿಶ್ರಣ ಮಾಡಿ ಕುದಿಸಿ ಬಾಟಲಿಯಲ್ಲಿ ಶೇಖರಿಸಿಡಿ. ನಂತರ ನಿರಂತರವಾಗಿ ಈ ಮಿಶ್ರಣವನ್ನು ಕೂದಲಿಗೆ ಹಚ್ಚುತ್ತಾ ಬನ್ನಿ. ಇದರಿಂದ ಭಾಗಶಃ ಕೂದುಲು ಉದುರುವುದು ಕಡಿಮೆಯಾಗುತ್ತದೆ.

ಆಮ್ಲ ಮತ್ತು ನಿಂಬೆ ರಸ
ಆಮ್ಲ ಮತ್ತು ನಿಂಬೆ ರಸದಿಂದ ತಯಾರಿಸಿದ ಶಾಂಪೂ ಕೂದಲಿಗೆ ಒಳ್ಳೆಯದು. ಇದು ಕೂದಲ ಬೆಳವಣಿಗೆಗೂ ಒಳ್ಳೆಯದು.

ಪಾಲಾಕ್ ರಸ
ದಿನವೂ ಒಂದು ಲೋಟ ಪಾಲಾಕ್ ರಸವನ್ನು ಕುಡಿಯುವುದು ಕೂದಲು ಉದುರುವಿಕೆಯನ್ನು ನಿಯಂತ್ರಿಸುತ್ತದೆ.

ತೆಂಗಿನಕಾಯಿ ಹಾಲು
ತೆಂಗಿನಕಾಯಿ ಹಾಲನ್ನು ಕೂದಲಿಗೆ ಹಚ್ಚುವುದೂ ಸಹ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

Comments are closed.