Tips for Hair : ಕೂದಲು ನಯವಾಗಿ ಸೊಂಪಾಗಿ ಬೆಳೆಯಲು ಇಲ್ಲಿದೆ ಟಿಪ್ಸ್

ತಲೆಗೂದಲು ತುಂಬಾ ನಯವಾಗಿರಬೇಕು, ಹೀರೋಯಿನ್ ಗಳ ಹಾಗೆ ಸಾಫ್ಟ್ ಮತ್ತು ಸಿಲ್ಕ್ ಆಗಿರಬೇಕು ಅನ್ನೋದು ಬಹುತೇಕರ ಬಯಕೆ. ನಯವಾದ ಕೂದಲು ಪಡೆಯೋದಕ್ಕೆ ಹಣವನ್ನು ಖರ್ಚು ಮಾಡಬೇಕಿಲ್ಲ. ಬದಲಾಗಿ ಮನೆಯಲ್ಲಿಯೇ ಸಿಗುವ ಸಾಮಗ್ರಿಗಳನ್ನ ಬಳಸಿ ಕೂದಲ ಸೌಂದರ್ಯ ಹೆಚ್ಚಿಸೋ ಟಿಪ್ಸ್‌ ಇಲ್ಲಿದೆ ನೋಡಿ.

ಕೊಬ್ಬರಿ ಎಣ್ಣೆಯನ್ನ ಸ್ವಲ್ಪ ಬಿಸಿ ಮಾಡಿ, ಅದಕ್ಕೆ ಗುಲಾಬಿ ದಳಗಳನ್ನ ಹಾಕಿ. ಎಣ್ಣೆ ತಣ್ಣಗಾದ ಬಳಿಕ ಗುಲಾಬಿ ದಳಗಳನ್ನ ಕಿವುಚಿ ತೆಗೆಯಿರಿ. ನಂತರ ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ, 3 ಗಂಟೆಗಳ ನಂತರ ಸ್ನಾನ ಮಾಡಿ. ರಾತ್ರಿ ಎಣ್ಣೆ ಹಚ್ಚಿಕೊಂಡು ಬೆಳಿಗ್ಗೆ ತಲೆಗೆ ಸ್ನಾನ ಮಾಡುವುದು ಉತ್ತಮ.

ಇದನ್ನೂ ಓದಿ: Coffee Beauty : ಕುಡಿಯೋದಕ್ಕೆ ಮಾತ್ರವಲ್ಲ ಒಂದು ಕಪ್‌ ಕಾಫಿ ಹೆಚ್ಚಿಸುತ್ತೆ ನಿಮ್ಮ ಸೌಂದರ್ಯ !

ಕುದಿಯುವ ನೀರಿಗೆ ಟೀ ಪುಡಿ ಮತ್ತು 5-6 ಲವಂಗ ಹಾಕಿ ಡಿಕಾಕ್ಷನ್ ತಯಾರಿಸಿ. ತಣ್ಣಗಾದ ನಂತರ ಮೆಹಂದಿ ಪುಡಿ, ಸ್ವಲ್ಪ ಮೊಸರು ಅಥವಾ ನಿಂಬೆಹಣ್ಣು ಹಾಕಿ ಮಿಕ್ಸ್ ಮಾಡಿ 3 ಗಂಟೆ ನೆನೆಯಲು ಬಿಡಿ. ಕೂದಲಿಗೆ ಸಂಪೂರ್ಣವಾಗಿ ಮೆಹಂದಿ ಹಚ್ಚಿ 1/2 ಗಂಟೆ ಒಣಗಲು ಬಿಡಿ. ಬಳಿಕ ಸ್ನಾನ ಮಾಡಿ.

ನೆಲ್ಲಿಕಾಯಿ ಪೇಸ್ಟ್ ಮಾಡಿ ಎಣ್ಣೆಯೊಂದಿಗೆ ಬೆರೆಸಿ ಕುದಿಸಿ ಬಳಸುವುದರಿಂದ ಕೂದಲಿಗೆ ಹೊಳಪು ಮಾತ್ರವಲ್ಲ, ಹೊಟ್ಟು, ತುರಿಕೆ, ಕೂದಲು ಉದುರುವ ಸಮಸ್ಯೆಗಳೂ ದೂರವಾಗುತ್ತವೆ. ಮೊಸರಿಗೆ ಜೇನು ಅಥವಾ ನಿಂಬೆರಸ ಬೆರೆಸಿ ಹಚ್ಚಿಕೊಳ್ಳುವುದರಿಂದ ಇದಕ್ಕಿಂತ ಉತ್ತಮವಾದ ಕಂಡಿಷನರ್ ಮತ್ತೊಂದಿಲ್ಲ. ಕೂದಲಿನ ಎಣ್ಣೆಯ ಅಂಶ ಹೋಗದಿದ್ದರೆ ಲಿಂಬೆ ರಸ ಬಳಸಬಹುದು.

ಇದನ್ನೂ ಓದಿ: ತಲೆಹೊಟ್ಟಿನ ಸಮಸ್ಯೆಯೆ !! ಇಲ್ಲಿದೆ ಮನೆ ಮದ್ದು

(Tips for hair to grow smoothly lush)

Comments are closed.