Benefits of Mangoes: ದೇಹದಲ್ಲಿನ ಹಲವು ಸಮಸ್ಯೆಗಳಿಗೆ ರಾಮಬಾಣ ಈ ಹುಳಿ ಮಾವಿನಕಾಯಿಗಳು

(Benefits of Mangoes) ಹಣ್ಣುಗಳ ರಾಜ ಎಂತಲೇ ಕರೆಸಿಕೊಳ್ಳುವ ಮಾವಿನ ಹಣ್ಣು ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹಲವರು ಇದಕ್ಕೆ ಉಪ್ಪು, ಖಾರವನ್ನು ಸೇರಿಸಿ ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಇದು ಮಾವಿನ ಕಾಯಿ ಸೀಸನ್‌ ಬೇರೆ. ಎಲ್ಲಾ ಕಡೆಯಲ್ಲೂ ಮಾವಿನ ಕಾಯಿ ಹೇರಳವಾಗಿ ಲಭಿಸುತ್ತದೆ. ಇನ್ನೂ ಗರ್ಭಿಣಿಯರಿಗೆ ಮಾವಿನಕಾಯಿ ಎಂದರೇ ಸಾಕು, ಪ್ರಪಂಚವನ್ನೇ ಮರೆತು ಮಾವಿನಕಾಯಿಯನ್ನು ತಿನ್ನುತ್ತಾರೆ. ಮಾವಿನ ಕಾಯಿ ಅಥವಾ ಹಣ್ಣಿನಿಂದ ಚಟ್ನಿ, ಗೊಜ್ಜು, ಉಪ್ಪಿನಕಾಯಿ, ಮಾವಿನಕಾಯಿ ಚಿತ್ರಾನ್ನ ಹೀಗೆ ನಾನಾ ರೀತಿಯಲ್ಲಿ ಖಾದ್ಯಗಳನ್ನು ತಯಾರಿಸಿ ತಿನ್ನುತ್ತಾರೆ. ಆದರೆ ಮಾವಿನಕಾಯಿ ತಿನ್ನುವುದರಿಂದ ಮಾನವನ ದೇಹಕ್ಕೆ ಅನೇಕ ಪ್ರಯೋಜನಗಳಿವೆ ಎನ್ನುವುದು ಹಲವರಿಗೆ ತಿಳಿದಿರದ ವಿಷಯ. ಇದು ದೇಹದ ಬೊಜ್ಜು, ಉರಿಯೂತವನ್ನು ಕಡಿಮೆಗೊಳಿಸುತ್ತದೆ. ಕ್ಯಾನ್ಸರ್‌ ವಿರೋಧಿ ಗುಣವನ್ನು ಕೂಡ ಇದು ಹೊಂದಿದೆ.

ಇನ್ನೂ ಸಾಂಪ್ರದಾಯಿಕ ಭಾರತೀಯ ಔಷಧ ಪದ್ದತಿಯಾದ ಆಯುರ್ವೇದದಲ್ಲೂ ಕೂಡ ನಿಗದಿತ ಪ್ಮಾಣದಲ್ಲಿ ಮಾವಿನಕಾಯಿಯನ್ನು ತಿಂದರೆ ಅದ್ಭುತ ಆರೋಗ್ಯವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಬೇಸಿಗೆಯ ಸಮಯದಲ್ಲಂತೂ ಇದು ಅನೇಕ ರೀತಿಯಲ್ಲಿ ಸಹಾಯವಾಗುತ್ತದೆ. ಬೇಸಿಗೆಯ ಬಿಸಿಲಿಗೆ ದೇಹದಿಂದ ಬೆವರಿನ ರೂಪದಲ್ಲಿ ನೀರು ಹೊರ ಹೋಗುತ್ತದೆ. ಹೀಗಾಗಿ ಬೇಸಿಗೆಯ ಸಮಯದಲ್ಲಿ ದೃವಾಹಾರವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು ಎಂದು ಹೇಳಲಾಗುತ್ತದೆ. ಆದರೆ ಬೇಸಿಗೆಯಲ್ಲಿ ಮಾವಿನಕಾಯಿಯಿಂದ ಪಾನೀಯವನ್ನು ತಯಾರಿಸಿ ಕುಡಿದರೆ ದೇಹದಲ್ಲಾಗುವ ನಿರ್ಜಲೀಕರಣವನ್ನು ತಡೆಯಬಹುದು. ಈ ಪಾನೀಯ ಸೋಡಿಯಂ ಕ್ಲೋರೈಡ್‌ ಹಾಗೂ ಕಬ್ಬಿಣಾಂಶ ವನ್ನು ದೇಹದಿಂದ ಹೊರ ಹೋಗದಂತೆ ತಡೆಯುತ್ತದೆ.

ಮಾವಿನ ಕಾಯಿಯಲ್ಲಿ ನಿಯಾಸಿನ್‌ ನ ಅಂಶವಿದ್ದು, ಇದು ಹೃದಯದ ಆರೋಗ್ಯಕ್ಕೆ ಉತ್ತಮವೆನಿಸಿದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ಕಡಿಮೆಗೊಳಿಸುವುದರ ಜೊತೆಗೆ ರಕ್ತದಲ್ಲಿನ ಉತ್ತಮ ಕೊಲೆಸ್ಟ್ರಾಲ್‌ ಮಟ್ಟವನ್ನು ಹೆಚ್ಚಿಸಲು ಕೂಡ ಸಹಾಯ ಮಾಡುತ್ತದೆ. ಇನ್ನೂ ಒಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ಅದನ್ನೂ ಕೂಡ ಮಾವಿನಕಾಯಿ ತಗ್ಗಿಸುತ್ತದೆ. ಜೊತೆಗೆ ಹಲ್ಲುಗಳು ಹುಳುಕಾಗದಂತೆ ತಡೆಯುವುದರ ಜೊತೆಗೆ ತಾಜಾತನದ ಅನುಭವವನ್ನು ನೀಡುತ್ತದೆ. ಬೇಸಿಗೆಯಲ್ಲಿ ಕಾಡುವ ಅಜೀರ್ಣ, ಮಲಬದ್ದತೆ, ಭೇದಿ ಹೀಗೆ ಕೆಲವು ಸಮಸ್ಯೆಗಳಿಗೆ ಮಾವಿನ ಕಾಯಿ ಸೇವನೆ ರಾಮಬಾಣವಾಗಿದೆ.

ಇದನ್ನೂ ಓದಿ : Silver ring benefit: ಬೆಳ್ಳಿ ಉಂಗುರವನ್ನು ಧರಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಯಕೃತ್ತಿನಲ್ಲಿನ ಬೈಲ್‌ ಎಂಬ ಅಂಶವನ್ನು ಮಾವಿನಕಾಯಿ ತಿನ್ನುವುದರಿಂದ ಹೆಚ್ಚಿಸಬಹುದು. ಇದು ಸಣ್ಣ ಕರುಳಿನಲ್ಲಿನ ಫ್ಯಾಟದ ಹಾಗೂ ಕೆಲವು ವಿಟಮಿನ್‌ ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೀರಿಕೊಳ್ಳಲು ನೆರವು ನೀಡುತ್ತದೆ. ಇನ್ನೂ ಹೆಚ್ಚಿನವರು ತೂಕ ಇಳಿಸಿಕೊಳ್ಳಲು ಹರಸಾಹಸ ಪಡುತ್ತಿರುತ್ತಾರೆ ಅಂತವರು ತೂಕ ಇಳಿಕೆಗೆ ಮಾವಿನ ಕಾಯಿಯನ್ನು ಸೇವನೆ ಮಾಡಬಹುದು. ಮಾವಿನ ಕಾಯಿ ಚಯಾಪಚಯ ಕ್ರೀಯೆಯನ್ನು ಹೆಚ್ಚಿಸುತ್ತದೆ. ಈ ಮೂಲಕ ಕ್ಯಾಲೋರಿ ಬರ್ನ್‌ ಮಾಡಲು ನೆರವು ನೀಡುತ್ತದೆ. ಅಲ್ಲದೇ ಮದುಮೇಹಿಗಳಿಗೂ ಕೂಡ ಇದು ಉತ್ತಮವೆನಸಿದೆ. ಇನ್ನೂ ವಿಟಮಿನ್‌ ಸಿ ಹೇರಳವಾಗಿರುವ ಮಾವಿನಕಾಯಿಯನ್ನು ಸೇವಿಸುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ : Natural food colour: ಮನೆಯಲ್ಲೇ ಸುಲಭವಾಗಿ ತಯಾರಿಸಿ ನೈಸರ್ಗಿಕವಾದ ಫುಡ್‌ ಕಲರ್‌

Benefits of Mangoes: These sour mangoes are a panacea for many problems in the body

Comments are closed.