Benefits Of Sunlight:ದೇಹದಲ್ಲಿ ವಿಟಮಿನ್‌ ಡಿ ಹೆಚ್ಚಿಸುವ ಸೂರ್ಯನ ಕಿರಣದಿಂದ ಹಲವು ಪ್ರಯೋಜನ

(Benefits Of Sunlight)ಬೆಳಿಗ್ಗೆಯ ಬಿಸಿಲಲ್ಲಿ ನಿಂತುಕೊಳ್ಳುವುದರಿಂದ ವಿಟಮಿನ್‌ ಡಿ ಅಂಶ ನಮ್ಮ ದೇಹಕ್ಕೆ ಸಿಗುತ್ತದೆ ಇದರಿಂದ ಮೂಳೆ ದೌರ್ಬಲ್ಯದ ಸಮಸ್ಯೆ ನಿವಾರಣೆ ಆಗುತ್ತದೆ ಎಂಬ ವಿಷಯ ಸಾಮಾನ್ಯವಾಗಿ ಎಲ್ಲರಿಗೂ ತಿಳಿದೆ ಇದೆ. ಆದರೆ ವಿಟಮಿನ್‌ ಡಿ ಯಿಂದ ಹಲವು ಆರೋಗ್ಯದ ಪ್ರಯೋಜನವನ್ನು ನಾವು ಪಡೆದುಕೊಳ್ಳಬಹುದು. ಸೂರ್ಯನ ಕಿರಣದಿಂದ ಹೊರಬರುವ ವಿಟಮಿನ್‌ ಡಿ ಯಿಂದ ಯಾವೆಲ್ಲಾ ಪ್ರಯೋಜನವನ್ನು ಪಡೆಯಬಹುದು ಎಂಬ ಮಾಹಿತಿಯ ಕುರಿತು ತಿಳಿಯೋಣ.

(Benefits Of Sunlight)ನಿದ್ರಾಹೀನತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.
ಸೂರ್ಯನ ಕಿರಣಕ್ಕೆ ಮೈ ಒಡ್ಡುವುದರಿಂದ ದೇಹದಲ್ಲಿ ಮೆಲಟೋನಿನ್ ಉತ್ಪಾದನೆ ಆಗಲು ಸಹಾಯ ಮಾಡುತ್ತದೆ. ಹಾಗಾಗಿ ಬೆಳಗ್ಗಿನ ತಿಳಿ ಸೂರ್ಯ ಕಿರಣಗಳು ಇರುವಾಗ ಹದಿನೈದು ನಿಮಿಷ ನಿಂತುಕೊಳ್ಳುವುದರಿಂದ ನಿಮ್ಮ ನಿದ್ರಾಹೀನತೆ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

ಒತ್ತಡವನ್ನು ಕಡಿಮೆ ಮಾಡುತ್ತದೆ
ಬಿಸಿಲಿಗೆ ನಿಂತಾಗ ದೇಹದಲ್ಲಿ ಮೆಲಟೋನಿನ್‌ ಉತ್ಪಾದನೆ ಆಗುವುದರಿಂದ ನೀವು ಉತ್ತಮವಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ. ಉತ್ತಮ ನಿದ್ದೆ ಮಾಡುವುದರಿಂದ ನಿಮ್ಮ ದಿನವು ಚೆನ್ನಾಗಿರುತ್ತದೆ. ಜೊತೆಗೆ ವ್ಯಾಯಾಮ ಮಾಡುವ ಹವ್ಯಾಸ ರೂಡಿಸಿಕೊಂಡರೆ ಇನ್ನು ಉತ್ತಮ.

ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ
ಬೆಳಿಗ್ಗೆ ಸೂರ್ಯನ ಬಿಸಿಲಿಗೆ ನಿಲ್ಲುವುದರಿಂದ ದೇಹದಲ್ಲಿ ವಿಟಮಿನ್‌ ಡಿ ಅಂಶವನ್ನು ಹೆಚ್ಚಾಗುವಂತೆ ಮಾಡುತ್ತದೆ. ಇದರಿಂದ ಮೂಳೆ ಮತ್ತು ಚರ್ಮದ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.

ರೋಗನಿರೋಧಕ ಶಕ್ತಿಯನ್ನು ಹೆಚ್ಚುತ್ತದೆ
ವಿಟಮಿನ್‌ ಡಿ ಕೊರತೆಯಿಂದಾಗಿ ಮಧುಮೇಹ, ಅಸ್ತಮಾ ಮತ್ತು ಸಂಧಿವಾತದಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇಂತಹ ಸಮಸ್ಯೆಗಳ ವಿರುದ್ದ ಹೋರಾಡಲು ನಮ್ಮ ದೇಹಕ್ಕೆ ರೋಗನಿರೋಧಕ ಅಷ್ಟೇ ಮುಖ್ಯ ಹಾಗಾಗಿ ಪ್ರತಿದಿನ ಸ್ವಲ್ಪ ಸಮಯ ಬಿಸಿಲಿನಲ್ಲಿ ನಿಲ್ಲುವುದರಿಂದ ರೋಗನೀರೋಧಕ ಶಕ್ತಿ ಹೆಚ್ಚಾಗುವಂತೆ ಮಾಡುತ್ತದೆ. ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುವುದರಿಂದ ಹಲವು ಕಾಯಿಲೆಯ ವಿರುದ್ದ ಹೊರಾಡಿ ಆರೋಗ್ಯವನ್ನು ಕಾಪಾಡುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ
ಬಿಸಿಲಿನಲ್ಲಿ ನಿಲ್ಲುವುದರಿಂದ ದೇಹದಲ್ಲಿ ಉಸಿರಾಟ ಸರಾಗವಾಗಿ ಮಾಡುವಂತೆ ಮಾಡುತ್ತದೆ ಇದರಿಂದ ರಕ್ತನಾಳಗಳು ವಿಸ್ತರಣೆ ಆಗುತ್ತದೆ. ಇದರ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡಿ ಹೃದ್ರೋಗದ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ.

ಇದನ್ನೂ ಓದಿ:Cracked Heels Reduce Tips:ನಿಮ್ಮ ಹಿಮ್ಮಡಿ ಬಿರುಕು ಬಿಡುತ್ತಿದ್ದರೆ ಚಿಂತೆ ಬೇಡ ಇಲ್ಲಿದೆ ಪರಿಹಾರ

ಇದನ್ನೂ ಓದಿ:Sleeping Problem Tips:ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲವೇ ? ಹಾಗಾದ್ರೆ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ

ಇದನ್ನೂ ಓದಿ:Kidney Stone Health Tips:ಕಿಡ್ನಿ ಸ್ಟೋನ್ ಪರಿಹಾರಕ್ಕೆ ಬಾಳೆ ದಿಂಡಿನ ಜ್ಯೂಸ್

ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ
ಬಿಸಿಲಿನಲ್ಲಿ ನಿಲ್ಲುವುದರಿಂದ ದೇಹದ ಸಿರೊಟೋನಿನ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಸಿರೊಟೋನಿನ್ ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.

Benefits Of Sunlight There are many benefits of sunlight that increases vitamin D in the body

Comments are closed.