Calotropis gigantea Leaf Oil:ಮಂಡಿ ನೋವಿನಿಂದ ಬೇಸತ್ತಿದ್ದೀರಾ?ಎಕ್ಕ ಎಲೆಯ ಎಣ್ಣೆ ಬಳಸಿ ನೋಡಿ

(Calotropis gigantea Leaf Oil)ಮಂಡಿ ನೋವಿನಿಂದ ಬೇಸತ್ತಿದ್ದೀರಾ?ಎಕ್ಕ ಎಲೆಯ ಎಣ್ಣೆ ಬಳಸಿ ನೋಡಿಹಿರಿಯರು ಅತಿ ಹೆಚ್ಚಾಗಿ ಮಂಡಿ ನೋವಿನ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ. ವಯಸ್ಸಾದಂತೆ ಕಾಲಿನ ಸ್ನಾಯುಗಳಲ್ಲಿ ಶಕ್ತಿ ಕುಂದುತ್ತದೆ. ಇದರಿಂದಾಗಿ ಹಿರಿಯರಲ್ಲಿ ಅತಿ ಹೆಚ್ಚು ಮಂಡಿ ನೋವಿನ ಸಮಸ್ಯೆ ಕಾಡಲಾರಂಭಿಸುತ್ತದೆ. ಮಂಡಿ ಭಾಗದಲ್ಲಿ ಮಾಂಸಖಂಡ ಅಥವಾ ಮೂಳೆ ದುರ್ಬಲ ಗೊಂಡಾಗ ಹೆಚ್ಚು ಮಂಡಿನೋವು ಕಾಣಿಸಿಕೊಳ್ಳುತ್ತದೆ. ಮಂಡಿನೋವು ಅತಿಹೆಚ್ಚಾಗಿ ಬರುತ್ತಿದ್ದರೆ ವೈದ್ಯರನ್ನು ಬೇಟಿ ಮಾಡುವುದು ಉತ್ತಮ. ಮಂಡಿ ನೋವು ಕಡಿಮೆ ಮಾಡಿಕೊಳ್ಳುವುದಕ್ಕೆ ಕೇಲವು ಮನೆಮದ್ದು ಮಾಡಿಟ್ಟುಕೊಂಡು ಹಚ್ಚಿಕೊಳ್ಳುವುದರಿಂದ ಮಂಡಿನೋವು ಕಡಿಮೆ ಆಗುತ್ತದೆ. ಎಕ್ಕ ಎಲೆಯ ಎಣ್ಣೆ ಮಾಡಿಟ್ಟುಕೊಂಡು ಹಚ್ಚುವುದರ ಮೂಲಕ ಮಂಡಿ ನೋವಿಗೆ ಪರಿಹಾರ ಕಂಡುಕೊಳ್ಳಬಹುದು. ಎಕ್ಕ ಎಲೆಯ ಎಣ್ಣೆ ತಯಾರಿಸುವ ಕುರಿತು ಮಾಹಿತಿ ಈ ಕೆಳಗೆ ತಿಳಿಸಲಾಗಿದೆ.

(Calotropis gigantea Leaf Oil)ಮಂಡಿ ನೋವಿನಿಂದ ಬೇಸತ್ತಿದ್ದೀರಾ?ಎಕ್ಕ ಎಲೆಯ ಎಣ್ಣೆ ಬಳಸಿ ನೋಡಿಬೇಕಾಗುವ ಸಾಮಾಗ್ರಿಗಳು:

  • ಎಕ್ಕದ ಎಲೆ
  • ಓಮದ ಕಾಳು
  • ಪಚ್‌ ಕರ್ಪೂರ
  • ಕೊಬ್ಬರಿ ಎಣ್ಣೆ

ಮಾಡುವ ವಿಧಾನ
ಪಾತ್ರೆಗೆ ಅರ್ಧ ಕೊಬ್ಬರಿ ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿಕೊಳ್ಳಬೇಕು ನಂತರ ಅದಕ್ಕೆ 9 ಎಕ್ಕದ ಎಲೆ ಹಾಕಿ ಕಾಯಿಸಬೇಕು ಎಣ್ಣೆ ಬಿಸಿ ಆಗುತ್ತಿದ್ದ ಹಾಗೆ ಕುಟ್ಟಣಿಗೆಯಲ್ಲಿ ಕುಟ್ಟಿ ಪುಡಿಮಾಡಿಕೊಂಡ ಓಮದ ಕಾಳು, ಪಚ್‌ ಕರ್ಪೂರ ಹಾಕಿ ಸಣ್ಣ ಉರಿಯಲ್ಲಿ ಕಾಯಿಸಬೇಕು. ನಂತರ ಗ್ಯಾಸ್‌ ಆಫ್‌ ಮಾಡಿ ಎಣ್ಣೆ ತಣ್ಣಗಾದ ನಂತರ ಎಕ್ಕದ ಎಲೆಯ ಸಮೇತ ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಪ್ರತಿದಿನ ಎಕ್ಕ ಎಲೆಯ ಎಣ್ಣೆಯನ್ನು ಮಂಡಿಗೆ ಹಚ್ಚಿಕೊಂಡು ಮಸಾಜ್‌ ಮಾಡಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಮಂಡಿ ನೋವು ಕಡಿಮೆ ಆಗುತ್ತದೆ.

ಇದನ್ನೂ ಓದಿ:Dates Health Tips:ಖರ್ಜೂರ ಉಂಡೆ ತಿಂದು ಆರೋಗ್ಯ ಕಾಪಾಡಿಕೊಳ್ಳಿ

ಇದನ್ನೂ ಓದಿ:Triphala Churna Powder:ಕಣ್ಣಿನ ದೃಷ್ಟಿ ದೋಷ ನಿವಾರಣೆಗೆ ತ್ರಿಫಲ ಚೂರ್ಣ

ಎಕ್ಕದ ಗಿಡ

ಎಕ್ಕದ ಗಿಡದಲ್ಲಿ ಬೀಡುವ ಹೂವನ್ನು ದೇವರ ಪೂಜೆಗೆ ಬಳಸುವುದಷ್ಟೇ ಅಲ್ಲದೆ ಅದರಲ್ಲಿ ಹಲವು ಔಷಧೀಯ ಗುಣವಿದೆ. ದೇಹದ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣವಾಗಿದೆ. ಕೀಲು ನೋವು,ರಕ್ತದೊತ್ತಡ ಅಥವಾ ಸಕ್ಕರೆ ಸಂಬಂಧಿತ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಅಷ್ಟೇ ಮಾತ್ರವಲ್ಲ ಮೊಣಕಾಲು ನೋವು ಬೇಗನೆ ಶಮನಗೊಳ್ಳುವಂತೆ ಮಾಡುತ್ತದೆ. ಎಕ್ಕದ ಗಿಡವನ್ನು ಸ್ಪರ್ಷ ಮಾಡುವುದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎನ್ನುವುದು ಹಿರಿಯರ ನಂಬಿಕೆ. ಎಕ್ಕದ ಎಲೆಯನ್ನು ಬಿಸಿ ಮಾಡಿ ತಣ್ಣಗಾದ ನಂತರ ಗಾಯದ ಮೇಲೆ ಇಡುವುದರಿಂದ ರಕ್ತಸ್ರಾವ ನಿಲ್ಲುವಂತೆ ಮಾಡುತ್ತದೆ.

Calotropis gigantea Oil Tired of knee pain? Try using ekka leaf oil

Comments are closed.