ಪ್ರೋಟಿನ್‌ ಶೇಕ್‌ ಕುಡಿಯೋದ್ರಿಂದ ಕಾರ್ಡಿಕ್‌ ಅರೆಸ್ಟ್‌ ! ಡಾ. ರಾಜುಕೃಷ್ಣಮೂರ್ತಿ ಅವರು ಹೇಳೋದೇನು ?

Protein Shake - Cardiac arrest : ಇಂದಿನ ಜೀವನ ಶೈಲಿಯಲ್ಲಿ ನಮ್ಮ ಆಹಾರ ಪದ್ದತಿಯೂ ಬದಲಾಗುತ್ತಿದೆ. ದೇಹಕ್ಕೆ ಯಾವ ಆಹಾರ ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟು ಮಾತ್ರವೇ ಸೇವನೆ ಮಾಡಬೇಕು. ಕಡಿಮೆಯಾದ್ರೂ ಅಪಾಯ, ಹೆಚ್ಚಾದ್ರೂ ಅಪಾಯ. ಇದಕ್ಕೆ ಬೆಸ್ಟ್‌ ಎಕ್ಸಾಂಪಲ್‌ ಪ್ರೋಟಿನ್‌ ಶೇಕ್‌ (protein shake)  ಅಥವಾ ಪ್ರೋಟಿನ್‌ ಪೌಡರ್‌ ಬಳಕೆ.

Protein Shake – Cardiac arrest : ಇಂದಿನ ಜೀವನ ಶೈಲಿಯಲ್ಲಿ ನಮ್ಮ ಆಹಾರ ಪದ್ದತಿಯೂ ಬದಲಾಗುತ್ತಿದೆ. ದೇಹಕ್ಕೆ ಯಾವ ಆಹಾರ ಎಷ್ಟು ಪ್ರಮಾಣದಲ್ಲಿ ಬೇಕೋ ಅಷ್ಟು ಮಾತ್ರವೇ ಸೇವನೆ ಮಾಡಬೇಕು. ಕಡಿಮೆಯಾದ್ರೂ ಅಪಾಯ, ಹೆಚ್ಚಾದ್ರೂ ಅಪಾಯ. ಇದಕ್ಕೆ ಬೆಸ್ಟ್‌ ಎಕ್ಸಾಂಪಲ್‌ ಪ್ರೋಟಿನ್‌ ಶೇಕ್‌ (protein shake)  ಅಥವಾ ಪ್ರೋಟಿನ್‌ ಪೌಡರ್‌ ಬಳಕೆ.

Cardiac arrest due to drinking protein shake. What does Dr Raju Krishnamurthy say
Image Credit to Original Source

ಖ್ಯಾತ ವೈದ್ಯರಾದ ಡಾ.ರಾಜು ಕೃಷ್ಣಮೂರ್ತಿ ಅವರು ಪ್ರೋಟಿನ್‌ ಪೌಡರ್‌ ಕುರಿತ ಆಘಾತಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ನಾವು ಸೇವಿಸುತ್ತಿರುವ ಆಹಾರದಲ್ಲಿ ಪ್ರೋಟಿನ್‌ ಕೊರತೆ ಇದೆ. ಹೀಗಾಗಿ ನೀವು ಪ್ರೋಟಿನ್‌ ಶೇಕ್‌ ಬಳಕೆ ಮಾಡಬೇಕು ಅಂತಾ ಹಲವು ಮಂದಿ ಹೇಳುತ್ತಾರೆ. ಒಂದೊಮ್ಮೆ ಪ್ರೋಟಿನ್‌ ಸಮಪ್ರಮಾಣದಲ್ಲಿ ದೇಹಕ್ಕೆ ಹೋಗಬೇಕಾದ್ರೆ ಕೆಜಿ ಗಟ್ಟಲೆ ಆಹಾರ ಸೇವನೆ ಮಾಡಬೇಕೆಂಬ ಮಾತುಗಳು ಕೇಳಿಬರುತ್ತಿದೆ.

ಇದನ್ನು ತಪ್ಪಿಸೋ ಸಲುವಾಗಿ ಪ್ರೋಟಿನ್‌ ಶೇಕ್‌ ಕುಡಿಯೋದು ಬೆಸ್ಟ್‌ ಪ್ರೋಟಿನ್‌ ಪೌಡರ್‌ ಕಂಪೆನಿಗಳು ಜನರಿಗೆ ಹೇಳುತ್ತಿವೆ. ಆದರೆ ಇದು ಶುದ್ದ ಸುಳ್ಳು ಅಂತಿದ್ದಾರೆ. ಡಾ. ರಾಜು ಕೃಷ್ಣಮೂರ್ತಿ. ಹಾಗಾದ್ರೆ ನಾವು ತಿನ್ನುವ ಆಹಾರದಲ್ಲಿ ಪ್ರೋಟಿನ್‌ ನಮ್ಮ ದೇಹಕ್ಕೆ ಸಿಗುತ್ತಾ ಇದೆಯಾ ಅನ್ನೋದನ್ನು ನೋಡೋದಾದ್ರೆ.

Cardiac arrest due to drinking protein shake. What does Dr Raju Krishnamurthy say
Image Credit to Original Source

ಸಾಮಾನ್ಯವಾಗಿ ಸಸ್ಯಹಾರ ಅಥವಾ ಮಾಂಸಹಾರ ಸೇವನೆಯ ವೇಳೆಯಲ್ಲಿಯೂ ನಮ್ಮ ದೇಹಕ್ಕೆ ಬೇಕಾಗುವಷ್ಟು ಪ್ರೋಟಿನ್‌ ಸಿಗುತ್ತಿದೆ. ಸಾವಿರಾರು ವರ್ಷಗಳಿಂದಲೂ ನಮ್ಮ ಪೂರ್ವಜರು ಬಳಕೆ ಮಾಡುತ್ತಿದ್ದ ಆಹಾರವನ್ನೇ ನಾವು ಬಳಕೆ ಮಾಡುತ್ತಿದ್ದೇವೆ. ಅವರಿಗೆ ಕಾಡದ ಪ್ರೋಟಿನ್‌ ಕೊರತೆ ನಮಗೆ ಕಾಡೋದಕ್ಕೆ ಸಾಧ್ಯವೇ ಇಲ್ಲ. ಯಾಕೆಂದ್ರೆ.

ಇದನ್ನೂ ಓದಿ : ಹೃದಯಾಘಾತ ತಡಿಯೋಕೆ ಉತ್ತಮ ಔಷಧ: ಎಳ್ಳಿನಿಂದ ಮಾಯವಾಗುತ್ತೆ ಹಲವು ರೋಗ

ನಮ್ಮ ದೇಶದಲ್ಲಿ ಕಾಳು, ಬೇಳೆ ಪದಾರ್ಥಗಳನ್ನು ಎಥೇಚ್ಚವಾಗಿ ಬಳಕೆ ಮಾಡುತ್ತೇವೆ. ಇದರಿಂದ ಶೇ.20 ಕ್ಕಿಂತ ಅಧಿಕ ಪ್ರೋಟಿನ್‌ ನಮ್ಮ ದೇಹಕ್ಕೆ ಸಿಗುತ್ತಿದೆ. ಇನ್ನು ರಾಗಿ ಗೋಧಿಯ ಬಳಕೆಯು ಅತೀ ಹೆಚ್ಚಿದ್ದು, ಇವುಗಳಿಂದ ಶೇ. 5-8 ರಷ್ಟು ಪ್ರೋಟಿನ್‌ ನಮಗೆ ಲಭ್ಯವಾಗುತ್ತಿದೆ. ಹೀಗಾಗಿ ಭಾರತೀಯು ಬಳಸುವ ಆಹಾರದಲ್ಲಿ ಯಥೇಚ್ಚವಾಗಿ ಪ್ರೋಟಿನ್‌ ಸೇವನೆ ಮಾಡುತ್ತಿದ್ದು, ನಮಗೆ ಪ್ರೋಟಿನ್‌ ಪೌಡರ್‌ ಅನಗತ್ಯ.

ಅತೀಯಾದ ಪ್ರೋಟಿನ್‌ನಿಂದ ಹೃದಯಾಘಾತ. ಕಾರ್ಡಿಕ್‌ ಅರೆಸ್ಟ್‌ .!!
ಹೌದು, ಪ್ರೋಟಿನ್‌ ಸಮಪ್ರಮಾಣದಲ್ಲಿ ಇದ್ದರೆ ಮಾತ್ರವೇ ಆರೋಗ್ಯವಾಗಿ ಇರೋದಕ್ಕೆ ಸಾಧ್ಯವಿದೆ. ಒಂದೊಮ್ಮೆ ಅಗತ್ಯಕ್ಕಿಂತ ಹೆಚ್ಚು ಪ್ರೋಟಿನ್‌ ನಮ್ಮ ದೇಹಕ್ಕೆ ಸಿಕ್ಕಿದ್ರೆ ಅದು ಅನಾರೋಗ್ಯಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಅದ್ರಲ್ಲೂ ಪ್ರೋಟಿನ್‌ ಪೌಡರ್‌, ಪ್ರೋಟಿನ್‌ ಶೇಕ್‌ ಅತಿಯಾಗಿ ಸೇವನೆ ಮಾಡೋದ್ರಿಂದ ಕಾರ್ಡಿಕ್‌ ಅರೆಸ್ಟ್‌ ಆಗುತ್ತೆ ಅನ್ನೋದು ಹಲವು ಸಂಶೋಧನೆಗಳಿಂದ ಬಯಲಾಗಿದೆ.

Cardiac arrest due to drinking protein shake. What does Dr Raju Krishnamurthy say
Image Credit to Original Source

ಇದನ್ನೂ ಓದಿ : ಬೇಸಿಗೆ ಬೇಗೆಗೆ ಮುಕ್ತಿ ನೀಡುತ್ತೆ ಈ ಬಟ್ಟೆ : ಇದನ್ನು ಬಳಸಿದ್ರೆ ಭೂಮಿ , ದೇಹ ಎರಡಕ್ಕೂ ಉತ್ತಮ

ಪಿನ್‌ಲ್ಯಾಂಡ್‌ನಲ್ಲಿ ಪ್ರೋಟಿನ್‌ ಪೌಡರ್‌ ಬಳಕೆ ಮಾಡುತ್ತಿರುವವರನ್ನು ಸಂಶೋಧನೆಗೆ ಒಳಪಡಿಸಿದ ವೇಳೆಯಲ್ಲಿ ಆಘಾತಕಾರಿ ಅಂಶ ಬಯಲಾಗಿತ್ತು. ಪ್ರೋಟಿನ್‌ ಪೌಡರ್‌ ಸೇವನೆ ಮಾಡುತ್ತಿರುವವರ ಪೈಕಿ ೩೦-೪೦ ಜನರು ಕಾರ್ಡಿಕ ಅರೆಸ್ಟ್‌, ಅಥವಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಅನ್ನೋದು ಬಯಲಾಗಿದೆ ಎಂದು ಡಾ. ರಾಜುಕೃಷ್ಣಮೂರ್ತಿ ಅವರು ಮಾಹಿತಿ ನೀಡಿದ್ದಾರೆ.

ಪ್ರೋಟಿನ್‌ ಪೌಡರ್‌ ಅತಿಯಾದ ಸೇವನೆಯಿಂದಾಗಿ ನಮ್ಮ ರಕ್ತದ ಒಳಪದರಕ್ಕೆ ಸಮಸ್ಯೆ ಉಂಟಾಗಲಿದೆ. ರಕ್ತನಾಳಗಳು ಕ್ರಮೇಣ ಸಣ್ಣದಾಗಲಿದ್ದು, ಕ್ರಾನಿಕ್‌ ಲಿವರ್‌ ಡ್ಯಾಮೇಜ್‌ ಕೂಡ ಆಗಲಿದೆ. ಇಷ್ಟೇ ಅಲ್ಲದೇ ಪ್ರೋಟಿನ್‌ ಶೇಕ್‌ ಕುಡಿಯೋದ್ರಿಂದಾಗಿ ಮಧುಮೇಹ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.

ಹಲವು ಸಮಯಗಳಿಂದಲೂ ನಾವು ಪ್ರೋಟಿನ್‌ ಪೌಡರ್‌ ಉಪಯೋಗ ಮಾಡುತ್ತಿದ್ದೇವೆ ಆದರೆ ಇದುವರೆಗೆ ನಮಗೆ ಯಾವುದೇ ಸಮಸ್ಯೆ ಆಗಿಲ್ಲ ಎನ್ನುತ್ತಾರೆ. ಆದರೆ ಪ್ರೋಟಿನ್‌ ಪೌಡರ್‌ ತಯಾರಿಕೆಯಲ್ಲಿ ಕೆಮಿಕಲ್‌ ಬಳಸದೇ ಇದ್ದರೂ ಕೂಡ ಅವುಗಳನ್ನು ಸಂಗ್ರಹಿಸಲು ಕೆಮಿಕಲ್‌ ಬಳಕೆ ಮಾಡಲಾಗುತ್ತದೆ.

ಇದನ್ನೂ ಓದಿ : ಅನ್ನ ತಿನ್ನೋದ್ರಿಂದ ಇಷ್ಟೇ ಅಲ್ಲಾ ಸಮಸ್ಯೆ ಇದೆಯಾ !!! ಅನ್ನದಿಂದ ರೋಗವೋ, ಅನಾರೋಗ್ಯವೋ ?

ನಿತ್ಯದ ಆಹಾರದಲ್ಲಿ ಬೇಳೆಕಾಳು, ಗೋದಿ, ರಾಗಿ ಬಳಕೆ ಮಾಡುತ್ತಿದ್ದರೆ, ಇನ್ನು ಮೀನು, ಮೊಟ್ಟೆಯಿಂದಲೂ ಅತೀ ಹೆಚ್ಚು ಪ್ರೋಟಿನ್‌ ಪಡೆದುಕೊಳ್ಳ ಬಹುದಾಗಿದೆ. ಹೀಗಾಗಿ ಅನಗತ್ಯವಾಗಿರುವ ಪ್ರೋಟಿನ್‌ ಪೌಡರ್‌ ಬಳಕೆ ಮಾಡುವ ಮುನ್ನ ಎಚ್ಚರವಾಗಿರುವುದು ಒಳಿತು.

Cardiac arrest due to drinking protein shake. What does Dr. Raju Krishnamurthy say ?

Comments are closed.