Chewing Gum Information:ಚೂಯಿಂಗ್‌ ಗಮ್‌ ಜಗಿದು ಉಗಿಯುವ ಮುನ್ನ ಈ ವಿಷಯ ತಿಳಿದಿರಲಿ

(Chewing Gum Information)ಹಲವರು ಚೂಯಿಂಗ್‌ ಗಮ್‌ ತಿನ್ನಲು ಇಷ್ಟ ಪಡುತ್ತಾರೆ ಅದರಲ್ಲೂ ಮಕ್ಕಳು ಹೆಚ್ಚು ಇಷ್ಟ ಪಡುತ್ತಾರೆ. ಅಂಗಡಿಯಲ್ಲಿ ಚೂಯಿಂಗ್‌ ಗಮ್‌ ಖರೀದಿ ಮಾಡಿ ಅದನ್ನು ಬಾಯಲ್ಲಿ ಹಾಕಿ ಗುಳ್ಳೆ ಬರಿಸಿ ಖುಷಿ ಪಡುತ್ತಾರೆ. ಇನ್ನು ಕೆಲವರು ಇದನ್ನು ಮೌತ್‌ ಪ್ರೆಶನರ್‌ ಆಗಿ ಬಳಕೆ ಮಾಡುತ್ತಾರೆ. ಈ ಚೂಯಿಂಗ್‌ ಗಮ್‌ ಅಗಿಯುವುದರಿಂದ ಹಾನಿಕಾರಕವು ಹೌದು ,ಇದರಿಂದ ಹಲವು ಪ್ರಯೋಜನವಿದೆ. ಯಾವುದೇ ಆಗಲಿ ಮೀತವಾಗಿ ಸೇವನೆ ಮಾಡುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

(Chewing Gum Information)ಚ್ಯೂಯಿಂಗ್‌ ಗಮ್‌ ಅಗಿಯುವುದರಿಂದ ಹಲ್ಲುಗಳಿಗೆ ವ್ಯಾಯಾಮ ಆಗುವಂತೆ ಮಾಡಿ ದವಡೆ ಮತ್ತು ಕೆನ್ನೆ ಬಲಗೊಳ್ಳುತ್ತದೆ. ನಿಮ್ಮ ಮುಖದ ರಕ್ತ ಚಲನೆಯನ್ನು ಹೆಚ್ಚಾಗುವಂತೆ ನೋಡಿಕೊಳ್ಳುತ್ತದೆ. ಕೆಲವರು ಆತಂಕವಾದರೆ ದೀರ್ಘ ಉಸಿರು ತೆಗೆದುಕೊಂಡು ಸರಿ ಮಾಡಿಕೊಳ್ಳುತ್ತಾರೆ ಆದರೆ ಚ್ಯೂಯಿಂಗ್‌ ಗಮ್‌ ಅಗಿಯುವುದರಿಂದ ಕೂಡ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲದೆ ಸಿಗರೆಟ್‌ ನಂತಹ ಚಟವನ್ನು ಬಿಡಿಸುವುದಕ್ಕೂ ಕೂಡ ಈ ಚೂಯಿಂಗ್‌ ಗಮ್‌ ಸಹಕಾರಿಯಾಗಿದೆ. ಇದನ್ನು ಅಗಿಯುವುದರಿಂದ ನಿಮ್ಮ ಬಾಯಿಯ ದುರ್ವಾಸನೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಲಸದ ಮೇಲೆ ಗಮನ ಹರಿಸಲು ಸಹಾಯ ಮಾಡುತ್ತದೆ.

ಅತಿಯಾಗಿ ಚೂಯಿಂಗ್‌ ಗಮ್‌ ತ ತಿನ್ನುವ ಹವ್ಯಾಸ ಮಾಡಿಕೊಂಡರೆ ಹಲವು ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದನ್ನು ಹೆಚ್ಚು ಸಮಯದ ವರೆಗೆ ಅಗಿಯುವುದರಿಂದ ನಿಮ್ಮ ಹಲ್ಲುಗಳಿಗೆ ಹಾನಿ ಮಾಡುತ್ತದೆ.ಮತ್ತು ಹೆಚ್ಚು ಆಹಾರವನ್ನು ಸೇವನೆ ಮಾಡಬೇಕೆಂಬ ಬಯಕೆ ಹೆಚ್ಚಾಗುತ್ತದೆ ಇದರಿಂದಾಗಿ ದೇಹದ ತೂಕ ಹೆಚ್ಚಾಗುತ್ತದೆ. ಹೆಚ್ಚು ಸಮಯದ ವರೆಗೆ ಚ್ಯೂಯಿಂಗ್‌ ಗಮ್‌ ಅನ್ನು ಬಾಯಲ್ಲಿ ಇಟ್ಟುಕೊಳ್ಳುವುದರಿಂದ ಬ್ಯಾಕ್ಟೀರಿಯಾ ಉತ್ಪತ್ತಿ ಆಗಿ ಹಲ್ಲುಗಳ ಮೇಲೆ ತೀರ್ವವಾದ ದುಷ್ಪರಿಣಾಮ ಬೀರುತ್ತದೆ. ಚ್ಯೂಯಿಂಗ್‌ ಗಮ್‌ ಜಗಿದು ಅದರ ರಸವನ್ನು ನುಂಗುವುದರಿಂದ ಇದು ಜೀರ್ಣಾಂಗವ್ಯೂಹದ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಇದನ್ನೂ ಓದಿ:Diabetes Affect Eyes:ಸಕ್ಕರೆ ಖಾಯಿಲೆಗೆ ಒಳಗಾಗಿದ್ದೀರಾ ? ಹಾಗಾದರೆ ಎಚ್ಚರ ವಹಿಸಿ ! ನಿಮ್ಮನ್ನು ಕಾಡಬಹುದು ಕಣ್ಣಿನ ಸಮಸ್ಯೆ

ಇದನ್ನೂ ಓದಿ:Dragon Fruit Reduce Weight: ನೀವೂ ದೇಹದ ತೂಕ ಇಳಿಸಲು ಬಯಸುತ್ತಿದೀರಾ? ತಿನ್ನಿ ಡ್ರ್ಯಾಗನ್ ಪ್ರೂಟ್

ಮಕ್ಕಳು ಚೂಯಿಂಗ್‌ ಗಮ್‌ ನುಂಗಿದರೆ ಆಗುವ ಪರಿಣಾಮ
ಕೆಲವೊಮ್ಮೆ ಗೊತ್ತಾಗದೆ ಮಕ್ಕಳು ಚೂಯಿಂಗ್‌ ಗಮ್‌ ನುಂಗಿ ಬೀಡುತ್ತಾರೆ ಇದರಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಚ್ಯೂಯಿಂಗ್‌ ಗಮ್‌ ನುಂಗುವುದರಿಂದ ಇದು ಜೀರ್ಣವಾಗುವುದಿಲ್ಲ ಇದರಿಂದ ಸಮಸ್ಯೆ ಆಗುತ್ತದೆ. ಆದರೆ 40 ಗಂಟೆಗಳ ಬಳಿಕ ಮಲದ ರೂಪದಲ್ಲಿ ಹೊಟ್ಟೆಯಿಂದ ಬರುತ್ತದೆ ಇದರಿಂದ ಮಕ್ಕಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಆದರೆ ಪದೇ ಪದೇ ಚೂಯಿಂಗ್‌ ಗಮ್‌ ನುಂಗಿದರೆ ಇದು ಕರುಳಿನಲ್ಲಿ ಸೇರಿಕೊಂಡು ಮಕ್ಕಳ ಆರೋಗ್ಯವನ್ನು ಹದಗೆಡಿಸುತ್ತದೆ. ಆದಷ್ಟು ಮಕ್ಕಳಿಂದ ಚೂಯಿಂಗ್‌ ಗಮ್‌ ದೂರ ಇಡುವುದು ಉತ್ತಮ.

Chewing Gum Information Be aware of this before chewing gum eat

Comments are closed.