Chips Filled With Air:ನೀವು ತಿನ್ನುವ ಚಿಪ್ಸ್‌ ಪ್ಯಾಕ್‌ ನಲ್ಲಿ ಯಾಕೆ ಗಾಳಿ ತುಂಬಿರುತ್ತೆ ಗೊತ್ತಾ?

(Chips Filled With Air)ಅಂಗಡಿಗಳಲ್ಲಿ ಲೆಸ್‌ ಪ್ಯಾಕ್‌ ಕೊಳ್ಳುವಾಗ ತೂಕ ಹೆಚ್ಚಿಸುವುದಕ್ಕಾಗಿ ಗಾಳಿ ತುಂಬಿರುತ್ತಾರೆ ಎಂದು ಹಿಡಿ ಶಾಪ ಹಾಕುವವರೆ ಹೆಚ್ಚು, ಆದರೆ ಲೆಸ್‌ ಪ್ಯಾಕ್‌ ನಲ್ಲಿ ಗಾಳಿ ಏಕೆ ತುಂಬಿರುತ್ತಾರೆ ಎಂದು ಯಾರಿಗೂ ತಿಳಿದಿರುವುದಿಲ್ಲ. ಲೇಸ್‌ ಪ್ಯಾಕ್‌ ನಲ್ಲಿ ಗಾಳಿ ಏಕೆ ತುಂಬಿರುತ್ತಾರೆ. ಯಾವ ಗಾಳಿಯನ್ನು ತುಂಬಿರುತ್ತಾರೆ ಇದರ ಪಾತ್ರವೇನು ಎಂಬ ಮಾಹಿತಿಯ ಕುರಿತು ತಿಳಿದುಕೊಳ್ಳಿ.

(Chips Filled With Air)ನೀವು ಅಂಗಡಿಯಲ್ಲಿ ಕೊಳ್ಳುವ ಲೆಸ್‌ ಪ್ಯಾಕ್‌ ನಲ್ಲಿ ಗಾಳಿ ತುಂಬಿಡುವುದಕ್ಕೆ ಕಾರಣವಿದೆ ಇದು ಚಿಪ್ಸ್‌ ಕೆಡದಂತೆ ಕಾರ್ಯ ನಿರ್ವಹಿಸುತ್ತದೆ. ಇದರಲ್ಲಿ ಯಾವ ಗಾಳಿ ಬಳಸುತ್ತಾರೆ ಎಂಬ ಮಾಹಿತಿ ಹಲವರಲ್ಲಿ ಇರುವುದಿಲ್ಲ , ಆಮ್ಲಜನಕ ಬಳಸುತ್ತಾರೆ ಎಂದು ತಿಳಿದುಕೊಂಡಿರುತ್ತಾರೆ. ಆದರೆ ಇದರಲ್ಲಿ ಆಮ್ಲಜನಕದ ಬದಲು ಸಾರಜನಕವನ್ನು ಬಳಕೆ ಮಾಡುತ್ತಾರೆ. ಸಾರಜನಕ ಆರೋಗ್ಯಕ್ಕೆ ಹಾನಿಯನ್ನು ಮಾಡುವುದಿಲ್ಲ ಹಾಗಾಗಿ ಆಹಾರಗಳ ಪ್ಯಾಂಕಿಂಗ್‌ ಮಾಡುವುದಕ್ಕಾಗಿ ಇದನ್ನು ಬಳಕೆ ಮಾಡಲಾಗುತ್ತದೆ.

ಸಾರಜನಕವು ಪ್ರತಿಕ್ರಿಯಾತ್ಮಕವಲ್ಲ ಹಾಗಾಗಿ ಪ್ಯಾಕ್‌ ನಲ್ಲಿರುವ ಆಹಾರ ಸುರಕ್ಷಿತವಾಗಿರುತ್ತದೆ. ಆಮ್ಲಜನಕ ಹೆಚ್ಚು ಪ್ರತಿಕ್ರಿಯಾತ್ಮಕವಾಗಿರುವುದರಿಂದ ರಾಸಾಯನಿಕ ಬದಲಾವಣೆಯಾಗಿ ಆಹಾರ ಕೆಡುವಂತೆ ಮಾಡುತ್ತದೆ. ಹಾಗಾಗಿ ಚಿಪ್ಸ್‌ ಪ್ಯಾಕ್‌ ನಲ್ಲಿ ಅಥವಾ ಬೇರೆ ತಿಂಡಿಗಳ ಪ್ಯಾಕ್‌ ನಲ್ಲಿ ಸಾರಜನಕ ಬಳಸಲಾಗುತ್ತದೆ. ಈ ಸಾರಜನಕವು ಆಹಾರ ಕೆಡದಂತೆ ನೋಡಿಕೊಳ್ಳುವಂತಹ ಕೆಲಸವನ್ನು ಮಾಡುತ್ತದೆ. ಮತ್ತು ಚಿಪ್ಸ್‌ ಪ್ಯಾಕ್‌ ಅನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸುವ ಸಂದರ್ಭದಲ್ಲಿ ಕುಷನ್‌ ರೀತಿ ಕಾರ್ಯ ನಿರ್ವಹಿಸಿ ಚಿಪ್ಸ್‌ ಪುಡಿಯಾಗದಂತೆ ನೊಡಿಕೊಳ್ಳುತ್ತದೆ.

ಇದನ್ನೂ ಓದಿ:Diabetes Affect Eyes:ಸಕ್ಕರೆ ಖಾಯಿಲೆಗೆ ಒಳಗಾಗಿದ್ದೀರಾ ? ಹಾಗಾದರೆ ಎಚ್ಚರ ವಹಿಸಿ ! ನಿಮ್ಮನ್ನು ಕಾಡಬಹುದು ಕಣ್ಣಿನ ಸಮಸ್ಯೆ

ಇದನ್ನೂ ಓದಿ:Dragon Fruit Reduce Weight: ನೀವೂ ದೇಹದ ತೂಕ ಇಳಿಸಲು ಬಯಸುತ್ತಿದೀರಾ? ತಿನ್ನಿ ಡ್ರ್ಯಾಗನ್ ಪ್ರೂಟ್

ಇದನ್ನೂ ಓದಿ:Chewing Gum Information:ಚೂಯಿಂಗ್‌ ಗಮ್‌ ಜಗಿದು ಉಗಿಯುವ ಮುನ್ನ ಈ ವಿಷಯ ತಿಳಿದಿರಲಿ

ಉತ್ಪನ್ನ ತಯಾರು ಮಾಡುವಂತಹ ಕಂಪನಿಗಳು ತಮ್ಮ ಗ್ರಾಹಕರಿಗೆ ಪ್ಯಾಕ್‌ ನಲ್ಲಿ ಇರುವ ಆಹಾರ ಮತ್ತು ಎಷ್ಟು ಪ್ರಮಾಣದ ಗಾಳಿಯನ್ನು ಬಳಸಲಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಆದರೆ ಉತ್ಪಾದನೆ ತಯಾರಕರು ಈ ನಿಯಮವನ್ನು ಪಾಲನೆ ಮಾಡುವುದಿಲ್ಲ ತಮ್ಮ ಗ್ರಾಹಕರಿಗೆ ಪ್ಯಾಕ್‌ ನಲ್ಲಿ ಇರುವ ಆಹಾರ ಮತ್ತು ಎಷ್ಟು ಪ್ರಮಾಣದಲ್ಲಿ ಗಾಳಿ ಶೇಖರಣೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ತನ್ನ ಗ್ರಾಹಕರಿಗೆ ತಿಳಿಸುವುದಿಲ್ಲ. ಲೇಸ್‌ ಪ್ಯಾಕ್‌ ನ ಹಿಂದೆ ಎಷ್ಟು ಪ್ರಮಾಣದ ಆಹಾರ ಇರುತ್ತದೆ ಮತ್ತು ಎಷ್ಟು ಪ್ರಮಾಣದಲ್ಲಿ ಗಾಳಿ ತುಂಬಲಾಗುತ್ತದೆ ಎಂಬ ಮಾಹಿತಿಯನ್ನು ಸ್ಷಷ್ಟವಾಗಿ ನಮೂದಿಸಿದರೆ ಗ್ರಾಹರಿಗರ ಇದರ ಬಗ್ಗೆ ಮಾಹಿತಿ ತಿಳಿಯುತ್ತದೆ.

ಇದನ್ನೂ ಓದಿ:Omicron BF.7: ನೀವು ಖರೀದಿಸುವ ಮಾಸ್ಕ್‌ ಎಷ್ಟು ಸೇಪ್ ?‌

Chips Filled With Air Do you know why the chips you eat are filled with air?

Comments are closed.