Control Body Cholesterol Tips:ದೇಹದ ಕೊಲೆಸ್ಟ್ರಾಲ್‌ ನಿಯಂತ್ರಿಸಲು ಇಲ್ಲಿದೆ ಸುಲಭ ಮಾರ್ಗ

(Control Body Cholesterol Tips)ಇತ್ತೀಚಿನ ದಿನಗಳಲ್ಲಿ ರಕ್ತದೊತ್ತಡ ಮತ್ತು ಮಧುಮೇಹದ ಸಮಸ್ಯೆಗಳು ಎಲ್ಲರನ್ನು ಕಾಡುತ್ತದೆ ಇದರ ಜೊತೆಗೆ ಕೊಲೆಸ್ಟ್ರಾಲ್(ಕೊಬ್ಬು) ಸಮಸ್ಯೆಯು ಕೂಡ ಒಂದು . ದೇಹದಲ್ಲಿ ಕೊಲೆಸ್ಟ್ರಾಲ್‌ ಹೆಚ್ಚಾದರೆ ಅಪಾಯಕಾರಿ ಹಾಗಾಗಿ ಇದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಆರೋಗ್ಯಕ್ಕೆ ಉತ್ತಮ. ಇದಕ್ಕಾಗಿ ಸರಿಯಾದ ಆಹಾರ ಕ್ರಮವನ್ನು ಅನುಸರಿಸಬೇಕು. ನಮ್ಮ ದೇಹದಲ್ಲಿ ಎಲ್‌ಡಿಎಲ್(LDL) ಮತ್ತುಎಚ್‌ ಡಿ ಎಲ್‌ (HDL) ಎಂಬ ಎರಡು ಬಗೆಯ ಕೊಲೆಸ್ಟ್ರಾಲ್ ಇದೆ. ಎಲ್‌ಡಿಎಲ್ ಕೊಲೆಸ್ಟ್ರಾಲ್‌ ದೇಹಕ್ಕೆ ಹಾನಿ ಮಾಡುತ್ತದೆ ಹಾಗಾಗಿ ಇದನ್ನು ಕೆಟ್ಟ ಕೊಲೆಸ್ಟ್ರಾಲ್‌ ಎಂದು ಕರೆಯಲಾಗುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆ ಮತ್ತು ಪಾರ್ಶ್ವವಾಯು ಬರುತ್ತದೆ.ಇನ್ನು ಎಚ್‌ ಡಿ ಎಲ್‌ ಉತ್ತಮ ಕೊಲೆಸ್ಟ್ರಾಲ್‌ ಆಗಿದೆ ಇದರಿಂದ ದೇಹಕ್ಕೆ ಒಳ್ಳೆದು ಎಂದು ಹೇಳಲಾಗುತ್ತದೆ ಇದು ಹೃದ್ರೋಗ ಮತ್ತು ಪಾರ್ಶ್ವವಾಯು ಆಗುವ ಅಪಾಯ ಮಟ್ಟ ವನ್ನು ಕಡಿಮೆ ಮಾಡುತ್ತದೆ. ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಣದಲ್ಲಿ ಹೇಗೆ ಇಟ್ಟುಕೊಳ್ಳುವುದು ಎಂಬ ಮಾಹಿತಿ ತಿಳಿಯಿರಿ.

(Control Body Cholesterol Tips)ಫೈಬರ್ ಅಂಶ ಇರುವ ಆಹಾರ
ಫೈಬರ್‌ ಅಂಶ ಇರುವ ಆಹಾರವನ್ನು ಅತಿ ಹೆಚ್ಚು ಸೇವನೆ ಮಾಡಿದರೆ ದೇಹದಲ್ಲಿ ಕೊಲೆಸ್ಟ್ರಾಲ್‌ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅತಿ ಹೆಚ್ಚಾಗಿ ಹಣ್ಣು ಮತ್ತು ತರಕಾರಿಗಳನ್ನು ಸೇವನೆ ಮಾಡಿ ಪೆರಲೆ,ಸೇಬು,ಬೀನ್ಸ್‌ ತಿನ್ನುವುದರಿಂದ ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಎಚ್‌ ಡಿಎಲ್ ಕೊಬ್ಬನ್ನು ಹೆಚ್ಚಿಸಿ
ದೇಹದಲ್ಲಿ ಎಲ್‌ ಡಿ ಎಲ್‌ ಕೊಬ್ಬಿಗಿಂತ ಎಚ್‌ ಡಿ ಎಲ್‌ ಕೊಬ್ಬನ್ನು ಹೆಚ್ಚಿರುವಂತೆ ನೋಡಿಕೊಳ್ಳಿ. ಇದರಿಂದ ದೇಹದಲ್ಲಿ ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಒಮೆಗಾ 3 ಸಮೃದ್ಧವಾಗಿರುವ ಆಹಾರ ಸೇವಿಸಿ
ದೇಹದಲ್ಲಿರುವ ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಧಾನ್ಯ, ಮೊಟ್ಟೆ, ಮೀನನ್ನು ಅತಿ ಹೆಚ್ಚಾಗಿ ಸೇವನೆ ಮಾಡಬೇಕು. ಇದನ್ನು ಮೀತವಾಗಿ ಸೇವನೆ ಮಾಡುವುದರಿಂದ ನಿಮ್ಮ ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಇದನ್ನೂ ಓದಿ:Benefits Of Drinking Water:ನೀರು ಕುಡಿಯದಿದ್ದರೆ ನಿಮ್ಮನ್ನು ಕಾಡುತ್ತೆ ಈ ಗಂಭೀರ ಸಮಸ್ಯೆಗಳು

ಇದನ್ನೂ ಓದಿ:Orange Health Tips:ಕಿತ್ತಳೆ ಹಣ್ಣಿನ ಆರೋಗ್ಯದ ಪ್ರಯೋಜನ ತಿಳಿದುಕೊಳ್ಳಿ

ವ್ಯಾಯಾಮ ಮಾಡಿ
ಪ್ರತಿದಿನ ವ್ಯಾಯಾಮ ಮಾಡುವ ಮೂಲಕ ದೇಹದಲ್ಲಿ ಎಚ್‌ ಡಿ ಎಲ್‌ (ಒಳ್ಳೆಯ ಕೊಲೆಸ್ಟ್ರಾಲ್‌ ) ಹೆಚ್ಚಿಸಿಕೊಳ್ಳಬಹುದು. ಈ ಒಳ್ಳೆಯ ಕೊಲೆಸ್ಟ್ರಾಲ್‌ ನಿಮ್ಮ ಹೃದಯದ ಆರೋಗ್ಯ ಕಾಪಾಡುತ್ತದೆ. ಪ್ರತಿದಿನ ಸ್ವಲ್ಪ ಸಮಯ ವ್ಯಾಯಾಮ ಮಾಡುದಕ್ಕೆ ಮೀಸಲಿಟ್ಟರೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಜೊತೆಗೆ ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ.

ಧೂಮಪಾನ ತ್ಯಜಿಸಿ
ಆದಷ್ಟು ಸಿಗರೆಟ್‌ ಸೇದುವುದನ್ನು ಕಡಿಮೆ ಮಾಡಿ ಎಕೆಂದರೆ ದೇಹದಲ್ಲಿ (ಎಚ್‌ಡಿಎಲ್) ಹೆಚ್ಚಾಗುತ್ತದೆ. ಎಚ್‌ ಡಿ ಎಲ್‌ ದೇಹದಲ್ಲಿ ಹೆಚ್ಚಿರುವುದರಿಂದ ಕೊಲೆಸ್ಟ್ರಾಲ್‌ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.

Control Body Cholesterol Tips Here is an easy way to control body cholesterol

Comments are closed.