Sudarsan Pattnaik : ಖ್ಯಾತ ಮರಳು ಕಲಾವಿದನ ಕುಂಚದಲ್ಲಿ ಅರಳಿದ ವಿಶ್ವದ ಅತೀ ದೊಡ್ಡ ಸಾಂತಾ ಕ್ಲಾಸ್‌

ಗೋಪಾಲ್‌ಪುರ : ಪ್ರಪಚದಾದ್ಯಂತ ಕ್ರೈಸ್ತ ಬಾಂಧವರು ಕ್ರಿಸ್‌ಮಸ್‌ ಹಬ್ಬವನ್ನು ಬಹಳಷ್ಟು ಸಡಗರದಿಂದ ಆಚರಿಸುತ್ತಿದ್ದಾರೆ. ಜನಪ್ರಿಯ ಮರಳು ಕಲಾವಿದ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸುದರ್ಶನ್ ಪಟ್ನಾಯಕ್ (Sudarsan Pattnaik) ಅವರು (Merry Christmas) ಕ್ರಿಸ್‌ಮಸ್ ಸಂದರ್ಭದಲ್ಲಿ ಒಡಿಶಾದ ಗೋಪಾಲ್‌ಪುರ ಬೀಚ್‌ನಲ್ಲಿ ಟೊಮೆಟೊಗಳಿಂದ ಮಾಡಿದ ಸಾಂಟಾ ಕ್ಲಾಸ್‌ನ ಮರಳು ಕಲೆಯನ್ನು ರಚಿಸಿದ್ದಾರೆ. ಈ ಮರಳು ಕಲೆಯಲ್ಲಿ 1.5 ಟನ್ ಟೊಮೆಟೊಗಳನ್ನು ಬಳಸಲಾಗಿದೆ ಎಂದು ಕಲಾವಿದ ಬಹಿರಂಗಪಡಿಸಿದ್ದಾರೆ.

ಶಿಲ್ಪವು 27 ಅಡಿ ಎತ್ತರ ಮತ್ತು 60 ಅಡಿ ಅಗಲವಿದೆ. ಅದನ್ನು ಸಕಾಲದಲ್ಲಿ ಪೂರ್ಣಗೊಳಿಸಲು ಪಟ್ನಾಯಕ್ ಅವರ ವಿದ್ಯಾರ್ಥಿಗಳ ಸಹಾಯವನ್ನು ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ. ಪಟ್ನಾಯಕ್ ಅವರು ಟ್ವಿಟರ್‌ನಲ್ಲಿ ತಾವು ಮತ್ತು ಅವರ ವಿದ್ಯಾರ್ಥಿಗಳು ಒಟ್ಟಾಗಿ ರಚಿಸಿದ ಸಾಂಟಾ ಕ್ಲಾಸ್ ಅನ್ನು ಪ್ರದರ್ಶಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ : Christmas Gifts For Children: ಮಕ್ಕಳಿಗೆ ಕ್ರಿಸ್‌ಮಸ್‌ ಗಿಫ್ಟ್‌ ಕೊಡಬೇಕಾ; ಇಲ್ಲಿದೆ ಬೆಸ್ಟ್‌ ಐಡಿಯಾಗಳು

ಇದನ್ನೂ ಓದಿ : Merry Christmas 2022 : ಮೇರಿ ಕ್ರಿಸ್‌ಮಸ್‌ ಆಚರಣೆಯ ಇತಿಹಾಸ, ಮಹತ್ವ ನಿಮಗೆಷ್ಟು ಗೊತ್ತು ? ಇಲ್ಲಿದೆ ವಿವರ

ಇದನ್ನೂ ಓದಿ : Christmas Cakes : ಈ ವರ್ಷದ ಕ್ರಿಸ್‌ಮಸ್‌ ಗೆ ಮನೆಯಲ್ಲಿಯೇ ಹೀಗೆ ಕೇಕ್‌ ತಯಾರಿಸಿ

ಪಟ್ನಾಯಕ್ ಅವರು ಪೋಸ್ಟ್ ಮಾಡಿದ 15 ಸೆಕೆಂಡುಗಳ ವೀಡಿಯೊದಲ್ಲಿ, ಟೊಮೆಟೊ ಮತ್ತು ಮರಳಿನಿಂದ ಮಾಡಿದ ಸಾಂಟಾ ಕ್ಲಾಸ್‌ನ ಬೃಹತ್ ಮರಳು ಕಲೆಯನ್ನು ನಾವು ನೋಡಬಹುದು. ಪಟ್ನಾಯಕ್ ಅವರು ಶಿಲ್ಪಕ್ಕೆ ಕೆಲವು ಅಂತಿಮ ಸ್ಪರ್ಶ ನೀಡುವುದನ್ನು ವೀಡಿಯೊದಲ್ಲಿ ಕಾಣಬಹುದು. ಅವರು ರಚನೆ ಮಾಡುತ್ತಿದ್ದಾಗ ಅದನ್ನು ನೋಡಲು ಸಾಕಷ್ಟು ಜನರು ಸಹ ಅಲ್ಲಿ ನೆರೆದಿದ್ದರು. ಪಟ್ನಾಯಕ್ ಅವರ ಪ್ರಯತ್ನಗಳಿಗಾಗಿ ಜನರು ಟ್ವೀಟ್‌ನ ಕಾಮೆಂಟ್ ವಿಭಾಗದಲ್ಲಿ ಮೆಚ್ಚುಗೆಯನ್ನು ಸೂಚಿಸಿದ್ದಾರೆ. ಈ ಅದ್ಭುತ ಕಲೆಗೆ ಜನರು ಮನ ಸೋತಿದ್ದು, ಕಲೆಗಾರರನ್ನು ಸಾಮಜಿಕ ಜಾಲತಾಣದಲ್ಲಿ ಶ್ಲಾಘಿಸಿದ್ದಾರೆ.

ಇದನ್ನೂ ಓದಿ : Coronavirus Lockdown News Today : ಕ್ರಿಸ್‌ಮಸ್‌, ಹೊಸ ವರ್ಷಕ್ಕೂ ಮೊದಲು ಭಾರತದಲ್ಲಿ ಕೋವಿಡ್ ನಿರ್ಬಂಧ ಸಾಧ್ಯತೆ

Sudarsan Pattnaik: The world’s biggest Santa Claus blossomed from the brush of the famous sand artist

Comments are closed.