ಕಿಟಕಿ, ಬಾಗಿಲು ತೆರೆದಿಡಿ ಕರೋನಾದಿಂದ ರಕ್ಷಿಸಿಕೊಳ್ಳಿ ! ಕೊರೋನಾ ಹರಡುವಿಕೆ ತಡೆಗೆ ತಜ್ಞರ ಸಲಹೆ !

ಸಿಂಗಾಪುರ: ಕೊರೋನಾ ಎರಡನೇ ಅಲೆ ಭಾರತ ಹಾಗೂ ಕರ್ನಾಟಕದಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದು, ಜನರು ರೋಗಭೀತಿಯಿಂದ ಕಂಗಾಲಾಗಿದ್ದಾರೆ. ಈ ಮಧ್ಯೆ ಮನೆ,ಕಚೇರಿ ಅಥವಾ ವಾಸಸ್ಥಳದ ಬಾಗಿಲು,ಕಿಟಕಿಗಳನ್ನು ತೆರೆದಿಡುವುದು ಕೊರೋನಾ ಹರಡುವಿಕೆಯ ಪ್ರಮಾಣವನ್ನು ನಿಯಂತ್ರಿಸಲು ಸಹಕಾರಿ ಎಂಬ ಸಂಗತಿ ಅಧ್ಯಯನದಿಂದ ಸಾಬೀತಾಗಿದೆ.

ಸಿಂಗಾಪೂರ ಮೂಲದ ಮುಖ್ಯವಿಜ್ಞಾನಿ ಟ್ಯಾನ್ ಚೋರ್ ಚೌನ್ ಈ ಬಗ್ಗೆ ವಿವರಣೆ ನೀಡಿದ್ದು, ಜನರು ಎಸಿ ಸೇರಿದಂತೆ ಹವಾನಿಯಂತ್ರಕಗಳನ್ನು ಸ್ವಿಚ್ ಆಫ್ ಮಾಡಬೇಕು ಹಾಗೂ ತಾಜಾ ಗಾಳಿಯನ್ನು ಉಸಿರಾಡಿಸಬೇಕು. ಇದರಿಂದ ಕೊರೋನಾ ಹರಡುವಿಕೆಯ ಸಾಧ್ಯತೆಯನ್ನು ತಡೆಗಟ್ಟಬಹುದು ಎಂದಿದ್ದಾರೆ.

ವಿಜ್ಞಾನಿಗಳ ಪ್ರಕಾರ ವಾತಾವರಣದಲ್ಲಿ ಈ ವೈರಸ್ ಜೀವಂತವಾಗಿರುವ ಸಾಧ್ಯತೆ ಕಡಿಮೆ. ಹೀಗಾಗಿ ಮನೆ,ಕಚೇರಿ ಸೇರಿದಂತೆ ಎಲ್ಲ ಬಗೆಯ ಕಟ್ಟಡಗಳಲ್ಲಿ ಬಾಗಿಲು,ಕಿಟಕಿಗಳನ್ನು ತೆರೆದು ಗಾಳಿಯಾಡಲು ಮುಕ್ತ ಅವಕಾಶ ಕಲ್ಪಿಸುವ ಮೂಲಕ ಕೊರೋನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಸಾಧ್ಯವಿದೆ.

ಗಾಳಿಯಾಡಲು ಅಥವಾ ವೆಂಟಿಲೇಶನ್ ಗೆ ಅವಕಾಶವಿಲ್ಲದ ಜನನಿಬಿಡ ಪ್ರದೇಶಗಳೇ ಕೊರೋನಾ ಹರಡಲು ಕಾರಣವಾಗಿದ್ದು, ಇಂಥ ಪ್ರದೇಶಗಳಲ್ಲಿ ಉಸಿರಾಡುವ ಮೂಲಕ ವ್ಯಕ್ತಿಯೂ ಬೇಗ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚು.

ಕಿಟಕಿ,ಬಾಗಿಲು ತೆರೆಯಲು ಸಾಧ್ಯವಾಗದಂತಹ ಕೋಟೆಯಲ್ಲಿ ಕುಳಿತು ಕೆಲಸಮಾಡುವವರು ಹಾಗೂ ಎಸಿಕಚೇರಿಗಳಲ್ಲಿ ಕುಳಿತು ಕೆಲಸ ಮಾಡುವವರೇ ಹೆಚ್ಚು ಸೋಂಕಿಗೆ ಒಳಗಾಗುತ್ತಾರೆ ಎಂದು ಅಧ್ಯಯನ ವರದಿಗಳು ಹೇಳಿವೆ. ಸೋಂಕಿತರ ಸನಿಹದಲ್ಲೇ ಉಸಿರಾಡುವುದರಿಂದ ಸೋಂಕು ಬೇಗನೇ ತಗುಲುತ್ತದೆ. ಆದರೆ ಮಾಸ್ಕ್ ಹಾಗೂ ಅಂತರ ಕಾಪಾಡಿಕೊಳ್ಳುವುದರಿಂದ ಈ ಅಪಾಯ ಕಡಿಮೆ.

ಗಾಳಿಯಾಡದ ಸ್ಥಳದಲ್ಲಿ ನೀವು ಉಸಿರಾಡುವ ಏರೋಸೆಲ್ ಗಳು  ಇನ್ನೊಬ್ಬರು ಉಸಿರಾಡುವ ಏರೋಸೆಲ್ ಗಳ ಜೊತೆ ಹೆಚ್ಚು ಹತ್ತಿರವಾಗಿರುತ್ತದೆ. ಇದರಿಂದ ಸೋಂಕಿನ ಸಾಧ್ಯತೆ ಹೆಚ್ಚು. ಇದು ಸ್ಮೋಕ್ ಮಾಡುವ ವ್ಯಕ್ತಿಯ ಸನಿಹದಲ್ಲಿ ನಿಲ್ಲುವುದರಿಂದ ಹೆಚ್ಚು ಅಪಾಯಕಾರಿ.

ಹೀಗಾಗಿ ಕೊರೋನಾದಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಲು ನಿಮ್ಮ ಸುತ್ತಲಿನ ವಾತಾವರಣವನ್ನು ಗಾಳಿಯಾಡುವಂತೆ ಅಥವಾ ಶುದ್ಧ ಗಾಳಿ ಚಲಿಸುವಂತೆ ಕಿಟಕಿ-ಬಾಗಿಲೆ ತೆರೆದಿಡುವುದು ಒಳ್ಳೆಯದು ಎಂದು ವಿಜ್ಞಾನಿಗಳು ಅಭಿಪ್ರಾಯಿಸಿದ್ದಾರೆ.

ಇದನ್ನೂ ಓದಿ : ಗ್ರೀನ್ ಟೀ ಕುಡಿಯುವ ಅಭ್ಯಾಸವಿದೆಯಾ ? ಹಾಗಾದ್ರೆ ಕುಡಿಯುವ ಮುನ್ನ ಈ ವಿಚಾರವನ್ನು ತಿಳಿದುಕೊಳ್ಳಲೇ ಬೇಕು

ಇದನ್ನೂ ಓದಿ : ಹೃದಯಾಘಾತ ದಿಢೀರ್ ಬರುವುದಿಲ್ಲ : ಮೊದಲೇ ತಿಳಿಯುತ್ತೆ !

(Keep Windows, Doors Open To Cut Coronavirus Risk )

Comments are closed.