Nipah virus Alert : ಕೇರಳದಲ್ಲಿ ನಿಫಾ ವೈರಸ್‌ ಆರ್ಭಟ : ದ.ಕ ಜಿಲ್ಲೆ ಗಡಿ ಭಾಗದಲ್ಲಿ ಕಟ್ಟೆಚ್ಚರ

ಮಂಗಳೂರು : ಕೊರೊನಾ ವೈರಸ್‌ ಬೆನ್ನಲ್ಲೇ ಕೇರಳದಲ್ಲೀಗ ನಿಫಾ ವೈರಸ್‌ ಪ್ರಕರಣ ಪತ್ತೆಯಾಗಿದೆ. ಅದ್ರಲ್ಲೂ 12 ವರ್ಷದ ಬಾಲಕ ಸಾವನ್ನಪ್ಪಿದ್ದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಕಟ್ಟೆಚ್ಚರವಹಿಸಲಾಗಿದೆ.

ಕೇರಳದಲ್ಲಿ ನಿಫಾ ವೈರಸ್‌ ಸೋಂಕಿತರ ಸಂಪರ್ಕದಲ್ಲಿದ್ದ 12 ಮಂದಿಗೆ ನಿಫಾ ವೈರಸ್‌ ಪತ್ತೆಯಾಗಿದೆ. ಕೇರಳದಿಂದ ಅತೀ ಹೆಚ್ಚು ಸಂಖ್ಯೆಯಲ್ಲಿ ಜನರು ಮಂಗಳೂರಿನ ಆಸ್ಪತ್ರೆ, ಕಾಲೇಜುಗಳಿಗೆ ಆಗಮಿಸುತ್ತಿದ್ದಾರೆ. ಇದರಿಂದಾಗಿ ಕರಾವಳಿ ಭಾಗಕ್ಕೆ ನಿಫಾ ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲೀಗ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದ ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಪ್ರಮುಖವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು, ಸುಳ್ಯ ತಾಲೂಕುಗಳು ಕೇರಳದೊಂದಿಗೆ ನಿಕಟ ಸಂಪರ್ಕವನ್ನು ಹೊಂದಿದೆ. ಈಗಾಗಲೇ ಕೊರೊನಾ ವೈರಸ್‌ ಸೋಂಕು ಕೇರಳದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಮಾರಕವಾಗಿ ಪರಿಗಣಿಸಿತ್ತು. ಇದೀಗ ನಿಫಾ ಭೀತಿ ಕರಾವಳಿಗರನ್ನು ಕಾಡುತ್ತಿದೆ.

ನಿಫಾ ವೈರಸ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರು ಎಚ್ಚರಿಕೆಯಿಂದ ಇರಬೇಕಾಗಿದೆ. ನಿಫಾ ಸೋಂಕು ಹರಡುವ ಬಾವಲಿ ಹಾಗೂ ಹಂದಿಗಳಿಂದ ದೂರವಿರಬೇಕು. ಅಲ್ಲದೇ ಪ್ರಾಣಿ ಅಥವಾ ಪಕ್ಷಿಗಳು ತಿಂದಿರುವ ಹಣ್ಣು ಹಂಪಲುಗಳನ್ನು ಸೇವನೆ ಮಾಡಬಾರದು. ಒಂದೊಮ್ಮೆ ನಿಫಾ ವೈರಸ್‌ಗೆ ತುತ್ತಾಗಿರುವ ರೋಗಿಗಳಿಂದ ಅಂತರ ಕಾಯ್ದುಕೊಳ್ಳಬೇಕು.

ಇದನ್ನೂ ಓದಿ : ಕಿಟಕಿ, ಬಾಗಿಲು ತೆರೆದಿಡಿ ಕರೋನಾದಿಂದ ರಕ್ಷಿಸಿಕೊಳ್ಳಿ ! ಕೊರೋನಾ ಹರಡುವಿಕೆ ತಡೆಗೆ ತಜ್ಞರ ಸಲಹೆ !

ಇದನ್ನೂ ಓದಿ : 2 ಅಲೆಗಿಂತ 7 ಪಟ್ಟು ಹೆಚ್ಚು ಮಕ್ಕಳನ್ನು ಕಾಡುತ್ತೆ ಕೊರೊನಾ 3ನೇ ಅಲೆ : ತಜ್ಞರ ವರದಿ ಆತಂಕ

(Nipah virus hits Kerala: Dakshina Kannada district border on alert)

Comments are closed.