Curry Leaves: ರುಚಿಗೆ ಅಷ್ಟೇ ಅಲ್ಲ ಅರೋಗ್ಯಕ್ಕೂ ಉತ್ತಮ ಕರಿಬೇವಿನ ಎಲೆಗಳು

(Curry Leaves)ಕರಿಬೇವಿನ ಎಲೆಯಲ್ಲಿ ಲಿನೂಲ್‌,ಮೈರ್ಸೀನ್‌,ಮಹಾನಿಂಬೈನ್‌,ಕ್ಯಾರಿಯೊಫಿಲೀನ್‌,ಮುರಾಯನಾಲ್‌ ಮತ್ತು ಅಲ್ಫಾ ಟೆರ್ಪಿನೆನ್‌, ಮೈರ್ಸೀನ್‌,ಮಾಹಾನಿಂಬೈನ್‌,ಕ್ಯಾರಿಯೊಫಿಲೀನ್‌, ಮುರಾಯನಾಲ್‌ ಆಲ್ಪಾ ಪಿನೆನ್‌ ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿರುವುದರಿಂದ ಇದರಿಂದ ದೇಹಕ್ಕೆ ಹಲವು ಆರೋಗ್ಯದ ಪ್ರಯೋಜನವಿದೆ. ಆಯುರ್ವೇದದಲ್ಲೂ ಕೂಡ ಕರಿಬೇವು ಸೊಪ್ಪು ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ . ಕರಿಬೇವಿನಿಂದ ಹಲವಾರು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಆಹಾರದ ಪರಿಮಳ ಹೆಚ್ಚಿಸುವಲ್ಲೂ ಕೂಡ ಪಾತ್ರವಹಿಸುತ್ತದೆ.

(Curry Leaves)ಕರಿಬೇವು ಎಲೆಯನ್ನು ಹೆಚ್ಚಾಗಿ ಒಗ್ಗರಣೆಯಲ್ಲಿ ಮತ್ತು ಮಸಾಲೆಯುಕ್ತ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಆದರೆ ಇದನ್ನು ತಿನ್ನುವವರು ಅತಿ ಕಡಿಮೆ, ತಟ್ಟೆಯಲ್ಲಿ ಕರಿಬೇವು ನೋಡಿದರೆ ತಟ್ಟೆ ಬದಿಯಲ್ಲಿ ಎತ್ತಿಡುವವರು ಹೆಚ್ಚು. ಈ ಮಾಹಿತಿಯನ್ನು ನೀವು ತಿಳಿದುಕೊಂಡರೆ ಕರಿಬೇವಿನ ಎಲೆಯನ್ನು ತಟ್ಟೆಯಲ್ಲಿ ಬಿಡುವುದಿಲ್ಲ. ಕರಿಬೇವಿನ ಎಲೆಯಿಂದ ಎನೆಲ್ಲಾ ಆರೋಗ್ಯದ ಪ್ರಯೋಜನವನ್ನು ಪಡೆಬಹುದು ಎಂಬ ಮಾಹಿತಿಯ ಕುರಿತು ತಿಳಿಯೋಣ.

ಕರಿಬೇವಿನ ಎಲೆಯನ್ನು ಸೇವನೆ ಮಾಡುವುದರಿಂದ ದೇಹದಲ್ಲಿರುವ ರೋಗನೀರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವನ್ನು ಕಾಪಾಡುತ್ತದೆ. ಹೊಟ್ಟೆಗೆ ಸಂಬಂಧಿಸಿದ ರೋಗಗಳನ್ನು ನಿವಾರಣೆ ಮಾಡುತ್ತದೆ. ಕರೀಬೇವಿನಲ್ಲಿ ಇರುವ ಅಂಶವು ಹೃದಯ,ಮೆದಳು ಮತ್ತು ಮೂತ್ರಕೋಶಗಳ ಆರೋಗ್ಯವನ್ನು ಕಾಪಾಡುತ್ತದೆ.

ಕರಿಬೇವಿನಲ್ಲಿ ಕಾರ್ಬಜೋಲ್‌ ಅಲ್ಕಾಲೋಯ್ಢ್‌ ಅಂಶವಿರುವುದರಿಂದ ಇದನ್ನು ತಿಂದರೆ ಅತಿಸಾರದ ಸಮಸ್ಯೆ ಬಾರದಹಾಗೆ ನಮ್ಮ ದೇಹವನ್ನು ಕಾಪಾಡುತ್ತದೆ. ಆಹಾರದ ಮುಖಾಂತರ ಕರಿಬೇವು ತಿನ್ನುವುದರಿಂದ ಶ್ವಾಸಕೋಶದ ಆರೋಗ್ಯವನ್ನು ವೃದ್ಧಿಸಿ ಕೆಮ್ಮು,ನೆಗಡಿ ಅಸ್ತಮಾದಿಂದ ದೂರವಿರಿಸುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿನ ಕೊಲೆಸ್ಟ್ರಾಲ್‌ ಅಂಶವನ್ನು ನಿಯಂತ್ರಿಸುವುದಲ್ಲದೆ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.
ಕರಿಬೇವು ಸೇವನೆ ಮಾಡುವುದರಿಂದ ದೇಹದಲ್ಲಿ ಕಬ್ಬಿಣ ಅಂಶದ ಕೊರತೆಯನ್ನು ಪರಿಹರಿಸಿ ರಕ್ತಹೀನತೆಯಿಂದ ನಮ್ಮನ್ನು ರಕ್ಷಣೆ ಮಾಡುತ್ತದೆ.

ಕರಿಬೇವಿನ ಸೊಪ್ಪಿನಲ್ಲಿ ನಾರಿನ ಅಂಶ ಹೆಚ್ಚಾಗಿರುವುದರಿಂದ ದೇಹದಲ್ಲಿ ಜೀರ್ಣಕ್ರಿಯೆಯನ್ನು ನಿಧಾನಗೋಳಿಸುವುದರ ಜೊತೆಗೆ ದೇಹದ ರಕ್ತದಲ್ಲಿನ ಸಕ್ಕರೆ ಅಂಶವನ್ನು ಸುಲಭವಾಗಿ ಜೀರ್ಣವಾಗಲು ಬಿಡದೆ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.

ಕರಿಬೇವಿನಿಂದ ತೈಲ ತಯಾರಿಸಿ ಕೂದಲಿಗೆ ಹಚ್ಚುವುದರಿಂದ ಕೂದಲು ಹೆಚ್ಚು ಕಪ್ಪಾಗಿರುವಂತೆ ನೋಡಿಕೊಳ್ಳುತ್ತದೆ. ಕರಿಬೇವಿನ ಚಹಾ ತಯಾರಿಸಿ ಕುಡಿಯುವ ಹವ್ಯಾಸ ಮಾಡಿಕೊಂಡರೆ ಹಲವು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಈ ಚಹಾವನ್ನು ಹೇಗೆ ತಯಾರಿಸಿಕೊಳ್ಳುವುದು ಎಂಬ ಮಾಹಿತಿಯ ಕುರಿತು ಈ ಕೆಳಗೆ ತಿಳಿಸಲಾಗಿದೆ.

ಬೇಕಾಗುವ ಸಾಮಾಗ್ರಿಗಳು
ಕರಿಬೇವಿನ ಎಲೆ
ಶುಂಠಿ
ಜೇನುತುಪ್ಪ
ನಿಂಬೆ ರಸ

ಇದನ್ನೂ ಓದಿ:Herb for glowing skin: ಚಳಿಗಾಲದಲ್ಲಿ ಚರ್ಮ ಫಳ ಫಳ ಹೊಳೆಯಲು ಈ ಗಿಡಮೂಲಿಕೆ ಬಳಸಿ

ಇದನ್ನೂ ಓದಿ:Home Remedy For Period Pain: ಋತುಚಕ್ರದಲ್ಲಿ ಕಾಡುವ ಹೊಟ್ಟೆನೋವಿಗೆ ಇಲ್ಲಿದೆ ಮನೆಮದ್ದು

ಮಾಡುವ ವಿಧಾನ

ಕರಿಬೇವಿನ ಎಲೆಗಳನ್ನು ನೀರಿನಲ್ಲಿ ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಒಂದು ಪಾತ್ರೆಗೆ ನೀರು ಹಾಕಿ ಚೆನ್ನಾಗಿ ಕುದಿಸಿಕೊಂಡು ಅದಕ್ಕೆ ಕರಿಬೇವಿನ ಎಲೆ, ಶುಂಠಿ ಹಾಕಿ ಕುದಿಸಿದರೆ ಕರಿಬೇವಿನ ಚಹಾ ರೆಡಿಯಾಗುತ್ತದೆ. ಇದಕ್ಕೆ ಜೇನುತುಪ್ಪ ಮತ್ತು ನಿಂಬೆ ರಸ ಸೇರಿಸಿ ಕುಡಿದರೆ ಆರೋಗ್ಯಕ್ಕೆ ಹಲವು ಪ್ರಯೋಜನವಿದೆ. ಬರಿ ಎಲೆಯನ್ನು ತಿನ್ನಲು ಇಷ್ಟ ಪಡದವರು ಕರಿಬೇವಿನ ಚಹಾ ಮಾಡಿ ಕುಡಿದರೆ ಆರೋಗ್ಯಕ್ಕೆ ಉತ್ತಮ. ಹಲವು ರೀತಿಯ ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತದೆ.

Curry leaves are good not only for taste but also for health

Comments are closed.