Himachalpradesh election result 2022: ಸೆರಾಜ್‌ ಕ್ಷೇತ್ರದಲ್ಲಿ ಗೆಲುವು ಕಂಡ ಕರ್ನಾಟಕದ ಅಳಿಯ

ಸೆರಾಜ್‌: (Himachalpradesh election result 2022) ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಿವೆ. ಮುನ್ನಡೆಯಲ್ಲಿ ಹಾವು-ಏಣಿ ಆಟ ನಡೆಯುತ್ತಿದ್ದು, ಗೆಲುವು ಯಾರದಾಗಲಿದೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಪ್ರಸ್ತುತ ಹಿಮಾಚಲದಲ್ಲಿ ಕಾಂಗ್ರೆಸ್‌ 30 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದರೆ, ಬಿಜೆಪಿ 35 ಕ್ಷೇತ್ರಗಳಲ್ಲಿ ಮುನ್ನಡೆ ಕಂಡಿದೆ. ಇತರರು ಮೂರು ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ.

ಈ ನಡುವೆ ಕರ್ನಾಟಕದ ಅಳಿಯ ಹಾಗೂ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಅಭ್ಯರ್ಥಿ ಜೈರಾಮ್‌ ಠಾಕೂರ್‌ ಬರೋಬ್ಬರಿ 20 ಸಾವಿರ ಮತಗಳ ಅಂತರದಿಂದ ಸೆರಾಜ್‌ ಕ್ಷೇತ್ರದಿಂದ ಗೆಲುವು (Himachalpradesh election result 2022) ಕಂಡಿದ್ದಾರೆ. ಹಿಮಾಚಲ ಪ್ರದೇಶ ಹಾಲಿ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಅವರ ಪಾಲಿಗೆ ಇದು ಭಾರಿ ಗೆಲುವಾಗಿದೆ. ಇತ್ತೀಚಿನ ವರದಿಯ ಪ್ರಕಾರ, ಠಾಕೂರ್ ಅವರು ಸೆರಾಜ್ ಕ್ಷೇತ್ರದಲ್ಲಿ 20,000 ಕ್ಕೂ ಹೆಚ್ಚು ಮತಗಳಿಂದ ಭರ್ಜರಿ ಗೆಲುವನ್ನು ಸಾದಿಸಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.

1985 ರಲ್ಲಿ 149 ಸ್ಥಾನ ಗೆದ್ದಿದ್ದ ಕಾಂಗ್ರೆಸ್‌ ಗೆ ಇದೀಗ ಸೆರಾಜ್‌ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನಿಂದ ಮರ್ಮಾಘಾತವಾಗಿದೆ. ಕರ್ನಾಟಕದ ಅಳಿಯ ಜಯರಾಮ್‌ ಠಾಕೂರ್‌ ಸೆರಾಜ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ ವಿರುದ್ದ ಭರ್ಜರಿ ಗೆಲುವು ಕಂಡಿದ್ದು, ಕಾಂಗ್ರೆಸ್‌ ಗೆ ಮುಖಭಂಗವಾಗಿದೆ. ಹಿಮಾಚಲ ಪ್ರದೇಶದಲ್ಲಿ ಒಟ್ಟು ಶೇ. 76.44ರಷ್ಟು ಮತದಾನ ನಡೆದಿದೆ. 68 ಸ್ಥಾನ ಹೊಂದಿರುವ ಹಿಮಾಚಲದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಸಮಬಲದಲ್ಲಿ ಹೋರಾಟ ನೆಡೆಸುತ್ತಿದ್ದು, ಎರಡು ಪಕ್ಷಗಳ ನಡುವೆ ಹಾವು ಏಣಿ ಆಟ ಮುಂದುವರಿದಿದೆ.

ಇದನ್ನೂ ಓದಿ : CM Yogi Adityanath : ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕೃಷ್ಣ ನಗರಿ ಉಡುಪಿಗೆ ಆಗಮನ

ಇದನ್ನೂ ಓದಿ : Gujarat Election Result 2022: ಗುಜರಾತ್​ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ಬಿಜೆಪಿ

ಇದನ್ನೂ ಓದಿ : Janardhan Reddy: ಗಣಿಧಣಿ ಜನಾರ್ಧನ್ ರೆಡ್ಡಿ ವಿರುದ್ಧದ 4 ಕೇಸ್ ಗಳು ರದ್ದು: ರಾಜಕೀಯ ಹಾದಿ ಇನ್ನಷ್ಟು ಸುಗಮ

(Himachalpradesh election result 2022) In Himachal Pradesh BJP and Congress parties have fought fiercely for victory. There is a snake-ladder game going on in the lead and everyone is curious as to who will win. Currently, Congress is leading in 30 constituencies in Himachal while BJP is leading in 35 constituencies. Others are leading in three areas.

Comments are closed.