ಪಾಲಿಶ್ ಅಕ್ಕಿ ಸೇವನೆ ಮಾಡುತ್ತಿದ್ದೀರಾ ? ಹಾಗಾದ್ರೆ ಅಪಾಯ ಗ್ಯಾರಂಟಿ ಅಂತಿದೆ ಅಧ್ಯಯನ ವರದಿ !

0

ಬೆಂಗಳೂರು : ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಪಾಲಿಶ್ ಮಾಡಿದ ಅಕ್ಕಿಯನ್ನೇ ಊಟಕ್ಕೆ ಬಳಕೆ ಮಾಡ್ತಾರೆ. ಆದರೆ ನಾವು ತಿನ್ನುವ ಪಾಲಿಶ್ ಅಕ್ಕಿ ಇಂದು ಅಪಾಯವನ್ನು ತಂದೊಡ್ಡುತ್ತಿದೆ. ಅದ್ರಲ್ಲೂ ನವಜಾತ ಶಿಶುಗಳಲ್ಲಿ ವಿಟಮಿನ್ ಬಿ 1 ಕೊರತೆಗೆ ಮತ್ತು ಹೃದಯ ಕಾಯಿಲೆಗಳಿಗೆ ಕಾರಣವಾಗುತ್ತದೆ ಎನ್ನುತ್ತಿದೆ ಸಂಶೋಧನಾ ವರದಿ.

ಹೌದು, ಪಾಲಿಶ್ ಮಾಡಿದ ಅಕ್ಕಿಯನ್ನು ಸೇವಿಸುವ ತಾಯಂದಿರ ಎದೆಹಾಲಿನಲ್ಲಿ ಪೌಷ್ಟಿಕಾಂಶ ಕೊರತೆ ಎದುರಾಗಲಿದ್ದು, ಪರಿಣಾಮವಾಗಿ ಶಿಶುಗಳು ಹೃದಯ ಸಂಬಂಧಿ ಸಮಸ್ಯೆಗಳಿಗೆ ಗುರಿಯಾಗಬಹುದು ಎಂಬ ಆತಂಕಕಾರಿ ಮಾಹಿತಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯರು ನಡೆಸಿದ ಸಂಶೋಧನೆಯಿಂದ ಬಹಿರಂಗಗೊಂಡಿದೆ.

ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಸೈನ್ಸಸ್ ಅಂಡ್ ರಿಸರ್ಚ್ (ಎಸ್ಜೆಐಸಿಎಸ್ಆರ್) ತಂದ ಡಾ. ಉಷಾ, ಡಾ. ಜಯರಂಗನಾಥ್ ಅವರ ನೇತೃತ್ವದಲ್ಲಿ ನಡೆಸಿದ ಆರು ವರ್ಷಗಳ ಅಧ್ಯಯನವು ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ 250 ಶಿಶುಗಳನ್ನು ತ್ವರಿತ ಉಸಿರಾಟ, ವಾಂತಿ, ಆಸ್ಪತ್ರೆಯಲ್ಲಿ ಉಸಿರಾಟದ ಫೀಡ್ ತೆಗೆದುಕೊಳ್ಳಲು ಅಸಮರ್ಥತೆಯ ಚಿಹ್ನೆಗಳನ್ನು ದಾಖಲಿಸಿದೆ.

ಅನೇಕ ಶಿಶುಗಳು ಮಾರಣಾಂತಿಕ ರೋಗಕ್ಕೆ ಏಕೆ ಈಡಾಗುತ್ತಿದ್ದಾರೆ ಎಂದು ಸಂಶೋಧಕರು ಪತ್ತೆ ಹಚ್ಚಿದ ವೇಳೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಇದೇ ವೇಳೆ ಸಂಶೋಧನೆಯಲ್ಲಿ ಹೃದಯದ ಬಲಭಾಗದಲ್ಲಿ ಮತ್ತು ಶ್ವಾಸಕೋಶದಲ್ಲಿನ ರಕ್ತನಾಳಗಳಲ್ಲಿ ತೀವ್ರವಾಗಿ ಹೆಚ್ಚಿದ ರಕ್ತದ ಒತ್ತಡ ವನ್ನು ಸಹ ಕಂಡು ಹಿಡಿಯಲಾಗಿದೆ.

ವೈದ್ಯರ ತಂಡವು ‘ಪಾಲಿಶ್ ಮಾಡಲಾದ ಅಕ್ಕಿ, ಆಹಾರ ಸೇವನೆ ನಿರ್ಬಂಧ ಮತ್ತು ಶಿಶುಗಳಲ್ಲಿ ಹೃದಯ ವೈಫಲ್ಯ’ದ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಿದೆ. ಈ ಪ್ರಕಾರ, ದೇಶದ ದಕ್ಷಿಣ ಹಾಗೂ ಈಶಾನ್ಯ ಭಾಗಗಳಲ್ಲಿ ಪಾಲಿಶ್ ಮಾಡಿದ ಅಕ್ಕಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ. ಪಾಲಿಶ್ ಮಾಡಿದ ಬಳಿಕ ಅಕ್ಕಿಯ ಮೇಲ್ಪದರ ನಾಶವಾಗುತ್ತದೆ. ಆ ಮೇಲ್ಪದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಬಿ1 ಪ್ರಮಾಣ ಇರುತ್ತದೆ ಎಂಬ ಅಂಶವನ್ನು ಸಂಸ್ಥೆಯು ವರದಿಯಲ್ಲಿ ಉಲ್ಲೇಖಿಸಿದೆ.

Leave A Reply

Your email address will not be published.