Dates And Almond Recipe:ಖರ್ಜೂರ, ಬಾದಾಮಿ ಉಂಡೆ ಟ್ರೈ ಮಾಡಿ : ಆರೋಗ್ಯ ವೃದ್ದಿಸಿಕೊಳ್ಳಿ

(Dates And Almond Recipe)ಖರ್ಜೂರಗಳಲ್ಲಿ ಪೋಕಾಂಶಗಳು ಹೇರಳವಾಗಿ ಇರುವುದರಿಂದ ಇದನ್ನು ನಿಯಮಿತವಾಗಿ ಸೇವನೆ ಮಾಡಿದರೆ ಹಲವು ಆರೋಗ್ಯದ ಸಮಸ್ಯೆಯನ್ನು ನಿವಾರಣೆ ಮಾಡುತ್ತದೆ. ಬಾದಾಮಿಯಲ್ಲಿ ಪ್ರೋಟೀನ್‌ , ವಿಟಮಿನ್‌,ಮೆಗ್ನೀಷಿಯಂ ಅಂಶ ಇರುವುದರಿಂದ ದೇಹದ ಜೀರ್ಣಶಕ್ತಿಯನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ದೇಹದಲ್ಲಿ ಕೊಲೆಸ್ಟ್ರಾಲ್‌ ಅಂಶವನ್ನು ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಹಾಗಾಗಿ ಖರ್ಜೂರ ಹಾಗೂ ಬಾದಾಮಿಯಿಂದ ಮಾಡಿದ ಉಂಡೆಯನ್ನು ತಿನ್ನುವುದರಿಂದ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು ಜೊತೆಗೆ ರುಚಿಕರವಾಗಿರುತ್ತದೆ. ಖರ್ಜೂರ ಹಾಗೂ ಬಾದಾಮಿ ಉಂಡೆ ಹೇಗೆ ಮಾಡುವುದು ಎನ್ನುವ ಮಾಹಿತಿ ಕುರಿತು ತಿಳಿಯೋಣ.

(Dates And Almond Recipe)ಬೇಕಾಗುವ ಸಾಮಾಗ್ರಿಗಳು
ಬಾದಾಮಿ
ಕೊಬ್ಬರಿ ತುರಿ
ಖರ್ಜೂರ
ಏಲಕ್ಕಿ
ಕೊಬ್ಬರಿ ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಮಿಕ್ಸಿ ಜಾರಿಯಲ್ಲಿ ಅರ್ಧ ಕಪ್ ಬಾದಾಮಿ ,‌ ಕಾಲು ಕಪ್‌ ಕೊಬ್ಬರಿ ತುರಿ, ಐದು ಖರ್ಜೂರ ಹಾಕಿ ತರಿತರಿಯಾಗಿ ಉಂಡೆ ಕಟ್ಟಲು ಬರುವ ಹಾಗೆ ಗ್ರೈಂಡ್‌ ಮಾಡಿಕೊಳ್ಳಬೇಕು. ನಂತರ ಒಂದು ಚಮಚ ಕೊಬ್ಬರಿ ಎಣ್ಣೆ ಹಾಕಿ ಮತ್ತೊಮ್ಮೆ ಗ್ರೈಂಡ್‌ ಮಾಡಿಕೊಂಡು ಬೌಲ್‌ ಗೆ ಹಾಕಿಕೊಂಡು ಉಂಡೆ ಕಟ್ಟಿಕೊಳ್ಳಬೇಕು . ಈ ಉಂಡೆಯನ್ನು ಕೊಬ್ಬರಿ ತುರಿಯ ಮೇಲೆ ಹೊರಡಿಸಬೇಕು. ಕೊಬ್ಬರಿ ತುರಿಗೆ ಗಸಗಸೆಯನ್ನು ಹಾಕಿ ಇದರ ಮೇಲೆ ಉಂಡೆಯನ್ನು ಹೊರಡಿಸಬಹುದು. ಪ್ರತಿದಿನ ಒಂದೊಂದೆ ಉಂಡೆಯನ್ನು ತಿನ್ನುವುದರಿಂದ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಬಹುದು.

ಇದನ್ನೂ ಓದಿ:Constipation In Kids : ಮಕ್ಕಳಲ್ಲಿ ಕಾಣಿಸುವ ಮಲಬದ್ಧತೆ ಸಮಸ್ಯೆಗೆ ಇಲ್ಲಿದೆ ಪರಿಹಾರ

ಇದನ್ನೂ ಓದಿ:How To Reduce Belly Fat:ಹೊಟ್ಟೆಯ ಬೊಜ್ಜು ಕರಗಿಸಲು ಉಪಯುಕ್ತ ಜೀರಿಗೆ, ಓಮದ ಕಾಳಿನ ಪಾನೀಯ

ಇದನ್ನೂ ಓದಿ:Deworming Problem Solution:ಪದೇ ಪದೇ ಕಾಡುತ್ತಿರುವ ಜಂತು ಹುಳು ಸಮಸ್ಯೆ ನಿವಾರಣೆಗೆ ಇಲ್ಲಿದೆ ಪರಿಹಾರ

ನೆನಸಿಟ್ಟ ಬಾದಾಮಿ ಮತ್ತು ವಾಲ್ನಟ್‌

ನೆನಸಿಟ್ಟ ಬಾದಾಮಿ ಮತ್ತು ವಾಲ್ನಟ್‌ ಸೇವನೆ ಮಾಡುವುದರಿಂದ ದೇಹಕ್ಕೆ ಸಾಕಷ್ಟು ಶಕ್ತಿ ಸಿಗುತ್ತದೆ. ರಾತ್ರಿಯ ವೇಳೆ ಬೌಲ್‌ ನಲ್ಲಿ ಬಾದಾಮಿ ಮತ್ತು ವಾಲ್ನಟ್‌ ಹಾಕಿ ನೆನಸಿ ಇಟ್ಟುಕೊಂಡು ತಿನ್ನುವುದರಿಂದ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ. ವಾಲ್ನಟ್‌ ನಲ್ಲಿ ವಿಟಮಿನ್‌ ಇ ಅಂಶ, ಪೋಲಿಕ್‌ ಆಮ್ಲ, ಪ್ರೋಟಿನ್‌ ಮತ್ತು ನಾರಿನ ಅಂಶ ಮೆದುಳಿನ ಬುದ್ಧಿಶಕ್ತಿ ಚುರುಕಾಗುವಂತೆ ಮಾಡುತ್ತದೆ. ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡುತ್ತದೆ.

ಖರ್ಜೂರ
ಖರ್ಜೂರದಲ್ಲಿ ಅಧಿಕವಾಗಿ ಪ್ರೋಟೀನ್‌ ಅಂಶ ಇರುವುದರಿಂದ ಮೂಳೆಗಳ ಸಾಂದ್ರತೆ ಹೆಚ್ಚಾಗುವುದರ ಜೊತೆಗೆ ಮಾಂಸ ಖಂಡಗಳ ಬಲವನ್ನು ಹೆಚ್ಚಿಸುತ್ತದೆ. ಖರ್ಜೂರವನ್ನು ತಿನ್ನುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರಮಾಡುತ್ತದೆ.

ಇದನ್ನೂ ಓದಿ:Doddapatre Gojju Recipe:ಮನೆಯ ಹಿತ್ತಲಲ್ಲಿ ಬೆಳೆಯುವ ದೊಡ್ಡ ಪತ್ರೆಯ ಗೊಜ್ಜು ಮಾಡುವುದು ಹೇಗೆ?

Dates And Almond Recipe eat Dates, Almonds: Boost your health

Comments are closed.