Sanju Samson play Ireland: ಐರ್ಲೆಂಡ್ ಪರ ಆಡಲಿದ್ದಾರಾ ಸಂಜು ಸ್ಯಾಮ್ಸನ್.. ಐರ್ಲೆಂಡ್ ಆಫರ್‌ಗೆ ಸಂಜು ಹೇಳಿದ್ದೇನು ?

ಬೆಂಗಳೂರು: Sanju Samson play Ireland : ಭಾರತ ತಂಡದಲ್ಲಿ ಸತತವಾಗಿ ಅವಕಾಶ ವಂಚಿತರಾಗುತ್ತಿರುವ ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಸಂಜು ಸ್ಯಾಮ್ಸನ್ (Sanju Samsom) ಭಾರತವನ್ನು ತೊರೆದು ಐರ್ಲೆಂಡ್ ಪರ ಆಡಲಿದ್ದಾರೆಯೇ ? ಹೀಗೊಂದು ಸುದ್ದಿ ಹರಿದಾಡಲು ಕಾರಣ ಈಗ ನಡೆದಿರುವ ಬೆಳವಣಿಗೆ. ಐರ್ಲೆಂಡ್ ಕ್ರಿಕೆಟ್ ಸಂಸ್ಥೆಯಿಂದ (Ireland Cricket Board) ಸಂಜು ಸ್ಯಾಮ್ಸನ್’ಗೆ ತಮ್ಮ ದೇಶದ ಪರ ಆಡುವಂತೆ ಆಫರ್ ಬಂದಿದೆ. ಸಂಜು ಸ್ಯಾಮ್ಸನ್ ಭಾರತವನ್ನು ತೊರೆದು ಐರ್ಲೆಂಡ್ ಪರ ಆಡಲು ನಿರ್ಧರಿಸಿದರೆ, ಐರ್ಲೆಂಡ್ ಆಡುವ ಪ್ರತೀ ಪಂದ್ಯದಲ್ಲೂ ಆಡುವ ಅವಕಾಶ ನೀಡುವುದಾಗಿ ಐರ್ಲೆಂಡ್ ಕ್ರಿಕೆಟ್ ಸಂಸ್ಥೆ ಸ್ಯಾಮ್ಸನ್’ಗೆ ಆಫರ್ ನೀಡಿದೆ. ಹಾಗಾದ್ರೆ ಈ ಆಫರ್’ಗೆ ಸಂಜು ಸ್ಯಾಮ್ಸನ್ ಹೇಳಿದ್ದೇನು? ಐರ್ಲೆಂಡ್ ಕ್ರಿಕೆಟ್ ಸಂಸ್ಥೆ ನೀಡಿರುವ ಆಫರನ್ನು ಸ್ಯಾಮ್ಸನ್ ಒಪ್ಪಿಕೊಳ್ತಾರಾ..?

ಐಪಿಎಲ್ ಮತ್ತು ಭಾರತ ತಂಡದ ಪರ ಉತ್ತಮ ಪ್ರದರ್ಶನ ತೋರಿದರು ಸಂಜು ಸ್ಯಾಮ್ಸನ್ ಅವರನ್ನು ಪದೇ ಪದೇ ಕಡೆಗಣಿಸಲಾಗುತ್ತಿದೆ. ಕಳೆದ ಐಸಿಸಿ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ಸ್ಯಾಮ್ಸನ್’ಗೆ ಅಲ್ಲಿ ನಿರಾಸೆಯಾಗಿತ್ತು. ಕಳೆದ ನ್ಯೂಜಿಲೆಂಡ್ ಪ್ರವಾಸದಲ್ಲೂ ಸ್ಯಾಮ್ಸನ್ ಅವರಿಗೆ ಅರ್ಹ ಅವಕಾಶಗಳು ಸಿಕ್ಕಿರಲಿಲ್ಲ. 3 ಪಂದ್ಯಗಳ ಟಿ20 ಸರಣಿಯಲ್ಲಿ ಕೇವ ಒಂದು ಪಂದ್ಯದಲ್ಲಷ್ಟೇ ಆಡುವ ಅವಕಾಶ ಪಡೆದಿದ್ದ ಸ್ಯಾಮ್ಸನ್, ಏಕದಿನ ಸರಣಿಯಲ್ಲಿ ಸಂಪೂರ್ಣವಾಗಿ ಕಡೆಗಣಿಸಲ್ಪಟ್ಟಿದ್ದರು. ಇನ್ನು ಬಾಂಗ್ಲಾದೇಶದಲ್ಲಿ ನಡೆದ ಏಕದಿನ ಸರಣಿಗೂ ಸ್ಯಾಮ್ಸನ್ ಅವರನ್ನು ಕಡೆಗಣಿಸಲಾಗಿತ್ತು. ಸ್ಯಾಮ್ಸನ್ ಅವರಿಗೆ ಈ ರೀತಿ ಅನ್ಯಾಯವಾಗುತ್ತಿರುವುದರ ವಿರುದ್ಧ ಕ್ರಿಕೆಟ್ ಪ್ರಿಯರು ಬಿಸಿಸಿಐ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರ ಹಾಕುತ್ತಲೇ ಇದ್ದಾರೆ. ಇದರ ಮಧ್ಯೆ ಸ್ಯಾಮ್ಸನ್ ಅವರಿಗೆ ಐರ್ಲೆಂಡ್ ತಂಡದಿಂದ ಆಫರ್ ಬಂದಿದೆ.

ಐರ್ಲೆಂಡ್ ಕ್ರಿಕೆಟ್ ಸಂಸ್ಥೆಯ ಆಫರ್ ಅನ್ನು ಸಂಜು ಸ್ಯಾಮ್ಸನ್ ನಯವಾಗಿಯೇ ತಿರಸ್ಕರಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಯಾಮ್ಸನ್, “ನನ್ನ ಜೀವಮಾನದಲ್ಲಿ ಮತ್ತೊಂದು ದೇಶದ ಪರ ಆಡುವ ಸಾಧ್ಯತೆಯೇ ಇಲ್ಲ. ನಾನು ಕೊನೆಯವರೆಗೂ ಭಾರತದ ಪರ ಆಡಲಷ್ಟೇ ಬಯಸುತ್ತೇನೆ ಹೊರತು ಬೇರೆ ದೇಶದ ಪರ ಅಲ್ಲ” ಎಂದಿದ್ದಾರೆ.

ಭಾರತ ಪರ ಇದುವರೆಗೆ 11 ಏಕದಿನ ಪಂದ್ಯಗಳನ್ನಾಡಿರುವ 28 ವರ್ಷದ ಸಂಜು ಸ್ಯಾಮ್ಸನ್ 66ರ ಸರಾಸರಿಯಲ್ಲಿ 2 ಅರ್ಧಶತಕಗಳ ಸಹಿತ 330 ರನ್ ಗಳಿಸಿದ್ದಾರೆ. 16 ಟಿ20 ಪಂದ್ಯಗಳಿಂದ 135.15ರ ಸ್ಟ್ರೈಕ್’ರೇಟ್’ನಲ್ಲಿ 296 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : India women beat Australia : ಆಸೀಸ್ ವನಿತೆಯರ ಗರ್ವಭಂಗ.. 45 ಸಾವಿರ ಪ್ರೇಕ್ಷಕರ ಮುಂದೆ ಟೀಮ್ ಇಂಡಿಯಾಗೆ ಸೂಪರ್ ಜಯ

ಇದನ್ನೂ ಓದಿ : KL Rahul to lead Team India: ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಿಂದ ರೋಹಿತ್ ಔಟ್; ಟೀಂ ಇಂಡಿಯಾಗೆ ಕೆ.ಎಲ್. ರಾಹುಲ್ ನಾಯಕ

Sanju Samson play for Ireland team: lack of chance in Team India

Comments are closed.