Dates Health Tips:ಖರ್ಜೂರ ಉಂಡೆ ತಿಂದು ಆರೋಗ್ಯ ಕಾಪಾಡಿಕೊಳ್ಳಿ

(Dates Health Tips)ಖರ್ಜೂರ ತಿನ್ನುವುದರಿಂದ ಅಪಾರ ಪ್ರಮಾಣದ ಕ್ಯಾಲೋರಿಯನ್ನು ನಮ್ಮ ದೇಹಕ್ಕೆ ಒದಗಿಸುತ್ತದೆ. ಖರ್ಜೂರದಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗಳು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದನ್ನು ಪ್ರತಿದಿನ ಒಂದೊಂದಾಗಿ ತಿನ್ನುವುದರಿಂದ ಹಲವು ಆರೋಗ್ಯದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಖರ್ಜೂರದ ಉಂಡೆ ಮಾಡಿಟ್ಟುಕೊಂಡರೆ ಇನ್ನು ಉತ್ತಮ. ಪ್ರತಿದಿನ ಒಂದೊಂದು ಉಂಡೆ ತಿನ್ನುವುದರಿಂದ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಸಹಕಾರಿಯಾಗಿದೆ. ಖರ್ಜೂರ ಉಂಡೆ ಹೇಗೆ ಮಾಡುವುದು ಎಂಬುದರ ಕುರಿತು ಮಾಹಿತಿ ತಿಳಿಯೋಣ.

(Dates Health Tips)ಬೇಕಾಗುವ ಸಾಮಾಗ್ರಿಗಳು:

  • ಉತ್ತುತ್ತಿ
  • ಖರ್ಜೂರ
  • ಒಣಕೊಬ್ಬರಿ
  • ಸಕ್ಕರೆ
  • ಏಲಕ್ಕಿ ಪುಡಿ
  • ತುಪ್ಪ
  • ಗೊಡಂಬಿ
  • ಬಾದಾಮಿ
  • ದ್ರಾಕ್ಷಿ

ಮಾಡುವ ವಿಧಾನ:
ಉತ್ತುತ್ತಿ ಎರಡು ಭಾಗಗಳಾಗಿ ಮಾಡಿಕೊಂಡು ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಂಡು ಬೌಲ್‌ ನಲ್ಲಿ ಹಾಕಿ ಇಟ್ಟುಕೊಳ್ಳಬೇಕು. ಖರ್ಜೂರದಿಂದ ಬೀಜವನ್ನು ಬೇರ್ಪಡಿಸಿಕೊಂಡು ಮಿಕ್ಸಿ ಜಾರಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಂಡು ಬೌಲ್‌ ನಲ್ಲಿ ಹಾಕಿ ಇಟ್ಟುಕೊಳ್ಳಬೇಕು. ನಂತರ ಬಾಣಲೆಗೆ ಕೊಬ್ಬರಿ ಹಾಕಿ ಹುರಿದುಕೊಂಡು ಬೌಲ್ ನಲ್ಲಿ ಹಾಕಿ ಬದಿಯಲ್ಲಿ ಇಟ್ಟುಕೊಳ್ಳಬೇಕು. ಅದೆ ಬಾಣಲೆಗೆ ಎರಡು ಚಮಚ ತುಪ್ಪ ಹಾಕಿ ಕಾದ ನಂತರ ಬಾದಾಮಿ ,ಗೋಡಂಬಿ, ದ್ರಾಕ್ಷಿ ಯನ್ನು ಬೇರೆ ಬೇರೆಯಾಗಿ ಹುರಿದು ಕೊಂಡು ಗ್ಯಾಸ್‌ ಆಫ್‌ ಮಾಡಬೇಕು. ಹುರಿದ ಪದಾರ್ಥ ತಣ್ಣಗಾದ ನಂತರ ಬೌಲ್ ಗೆ ಹಾಕಿಕೊಂಡು ತರಿ ತರಿಯಾಗಿ ರುಬ್ಬಿಕೊಂಡ ಉತ್ತುತ್ತಿ,ಖರ್ಜೂರ,ಸಕ್ಕರೆ,ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಕಲಸಿಕೊಂಡು ಉಂಡೆ ಕಟ್ಟಿ ಹುರಿದುಕೊಂಡ ಕೊಬ್ಬರಿಯ ಮೇಲೆ ಹೊರಡಿಸಿದರೆ ರುಚಿಕರವಾಗಿ ತಿನ್ನಲು ಖರ್ಜೂರ ಉಂಡೆ ರೆಡಿ. ಖರ್ಜೂರ ಉಂಡೆ ತಿನ್ನುವುದರಿಂದ ಆರೋಗ್ಯವನ್ನು ಕಾಪಾಡುತ್ತದೆ.

ಇದನ್ನೂ ಓದಿ:Control Diabetes Tips: ಮಧುಮೇಹ ಕಂಟ್ರೋಲ್ ಮಾಡಲು ಇಲ್ಲಿದೆ ಬೆಸ್ಟ್ ಟಿಪ್ಸ್

ಇದನ್ನೂ ಓದಿ:Coconut Milk Tea Recipe:ಎಂದಾದರೂ ಟ್ರೈ ಮಾಡಿದ್ರಾ ತೆಂಗಿನಕಾಯಿ ಹಾಲಿನ ಚಹಾ

ಖರ್ಜೂರ
ಖರ್ಜೂರದಲ್ಲಿ ನಾರಿನ ಅಂಶ ಹೆಚ್ಚಾಗಿರುವುದರಿಂದ ಇದನ್ನು ತಿಂದರೆ ಹಸಿವು ನೀಗಿಸಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಕರುಳಿನ ಭಾಗದ ಹುಳುಗಳನ್ನು ನಾಶ ಪಡಿಸುವಲ್ಲಿ ಖರ್ಜೂರ ಸಹಕಾರಿಯಾಗಿದೆ. ರಾತ್ರಿ ಖರ್ಜೂರವನ್ನು ನೀರಲ್ಲಿ ನೆನಸಿಟ್ಟು ಬೆಳಿಗ್ಗೆ ತಿನ್ನುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ. ಮರೆವಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಖರ್ಜೂರದಲ್ಲಿ ಅಧಿಕವಾಗಿ ಪ್ರೋಟಿನ್‌ ಅಂಶ ಇರುವುದರಿಂದ ಇದನ್ನು ಸೇವನೆ ಮಾಡಿದರೆ ಮಾಂಸ -ಖಂಡಗಳ ಬಲವನ್ನು ಹೆಚ್ಚಿಸುತ್ತದೆ. ಹಾಲಲ್ಲಿ ಖರ್ಜೂರ ಹಾಕಿ ಕುಡಿಯುವುದರಿಂದ ಮೂಳೆಯನ್ನು ಬಲಪಡಿಸುತ್ತದೆ.

Dates Health Tips Eat dates and maintain health

Comments are closed.