Diet Tips : ಮೊಡವೆ ಸಮಸ್ಯೆಯಿಂದ ಬಳಲುತ್ತಿದ್ದೀರೇ..? ಹಾಗಾದರೆ ಈ ಆಹಾರಗಳ ಸೇವನೆ ಇಂದಿನಿಂದಲೇ ತ್ಯಜಿಸಿ

Diet Tips : ಮೊಡವೆ ಇದ್ದರೆ ಎಷ್ಟು ಕಷ್ಟ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಇದು ಹವಮಾನ ವೈಪರಿತ್ಯ, ಆಹಾರ ಕ್ರಮ ಹೀಗೆ ನಾನಾ ಕಾರಣಗಳಿಂದ ಬಂದೇ ಬರುತ್ತದೆ. ಮಾರುಕಟ್ಟೆಯಲ್ಲಿ ಮೊಡವೆ ಕಡಿಮೆ ಮಾಡುತ್ತೇನೆ ಎಂದು ಹೇಳಿಕೊಳ್ಳುವ ಸಾಕಷ್ಟು ಕ್ರೀಮ್​ಗಳು, ಫೇಸ್​ ವಾಶ್​, ಸೀರಂ ಹೀಗೆ ನಾನಾ ಉತ್ಪನ್ನಗಳು ನಿಮಗೆ ಸಿಗುತ್ತದೆ. ಆದರೆ ನಿಮ್ಮ ಆಹಾರ ಕ್ರಮದಲ್ಲಿ ಮಾಡಿಕೊಳ್ಳುವ ಸಣ್ಣ ಬದಲಾವಣೆ ಕೂಡ ನಿಮ್ಮ ಮೊಡವೆ ಸಮಸ್ಯೆಯನ್ನು ದೂರ ಮಾಡಬಲ್ಲದು ಎಂಬುದು ನಿಮಗೆ ತಿಳಿದಿದೆಯೇ..?

ಹೌದು..! ಮೊಡವೆ ಸಮಸ್ಯೆ ಇರುವವರು ಆಹಾರ ಸೇವನೆ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸಬೇಕು. ಎಲ್ಲರಂತೆ ನೀವು ಬಾಯಿಗೆ ರುಚಿ ಎನ್ನಿಸುವ ಆಹಾರವನ್ನು ಸೇವನೆ ಮಾಡುವಂತಿಲ್ಲ. ಆಹಾರವನ್ನು ಆಯ್ಕೆ ಮಾಡಿಕೊಳ್ಳುವ ವಿಚಾರದಲ್ಲಿ ಬಹಳ ಅಂದರೆ ಬಹಳವೇ ಎಚ್ಚರಿಕೆಯಿಂದ ಇರಬೇಕು. ಮೊಡವೆ ಸಮಸ್ಯೆ ಇರುವವರು ಹಾಲು ಸೇವನೆ ಕಡಿಮೆ ಮಾಡಿದಷ್ಟೂ ಒಳ್ಳೆಯದು. ಹಸುವಿನ ಹಾಲಿನಲ್ಲಿರುವ ಐಜಿಎಫ್​ 1 ಹಾಗೂ ಬೋವಿನ್​ನಂತಹ ಹಾರ್ಮೋನ್​ಗಳು ಮೊಡವೆ ಸಮಸ್ಯೆಯನ್ನು ಉಂಟು ಮಾಡುತ್ತವೆ.

ಇದು ಮೊಡವೆ ಹಾಗೂ ಮುಖದಲ್ಲಿ ಕೂದಲನ್ನು ಹೆಚ್ಚಿಸುತ್ತದೆ. ಹಾಲೊಂದೇ ಅಲ್ಲ ಉಪ್ಪು ಸೇವನೆಯನ್ನೂ ನೀವು ಕಡಿಮೆ ಮಾಡಬೇಕು. ಅತಿಯಾದ ಉಪ್ಪು ಆರೋಗ್ಯಕ್ಕೂ ಒಳ್ಳೆಯದಲ್ಲ. ಅದರ ಜೊತೆಯಲ್ಲಿ ಮೊಡವೆಯನ್ನು ಉಂಟು ಮಾಡುತ್ತದೆ. ಆಯೋಡಿನ್​ನಿಂದ ಮೊಡವೆ ಉಂಟಾಗುವ ಸಾಧ್ಯತೆ ಹೆಚ್ಚಿದೆ. ಎಣ್ಣೆಯಲ್ಲಿ ಕರಿದ ಹಾಗೂ ಕೊಬ್ಬಿನಂಶ ಹೆಚ್ಚಿರುವ ಆಹಾರ ಸೇವನೆಯನ್ನಂತೂ ಸಂಪೂರ್ಣವಾಗಿ ತ್ಯಜಿಸಿಬಿಡಿ.

ಇಂತಹ ಆಹಾರಗಳ ಸೇವನೆ ಮೊಡವೆಗೆ ಆಹ್ವಾನ ನೀಡಿದಂತೆ. ಚಿಪ್ಸ್​, ಡ್ರಿಂಕ್ಸ್​, ಬರ್ಗರ್​ನಂತಹ ಆಹಾರಗಳ ಸೇವನೆಯೂ ಒಳ್ಳೆಯದಲ್ಲ.ತ್ವಚೆಯ ಆಹಾರವನ್ನು ಕಾಪಾಡಿಕೊಳ್ಳಲು ಅಗಸೆ ಬೀಜ, ಚಿಯಾ ಬೀಜ ಹಾಗೂ ಮೀನೆಣ್ಣೆ ಸೇವನೆ ಮಾಡಿ. ಇದರಿಂದ ನಿಮ್ಮ ತ್ವಚೆಯ ಆರೋಗ್ಯ ಹೆಚ್ಚಲಿದೆ.

ಇದನ್ನು ಓದಿ: Winter Health Tips: ಚಳಿಗಾಲದಲ್ಲಿ ಚರ್ಮದ ಆರೈಕೆ ಹೀಗಿರಲಿ: ಪಾರ್ಲರ್ ಇಲ್ಲದೆ ಮನೆಯಲ್ಲೇ ಮಾಡಿ ಈ ಸಿಂಪಲ್ ಸ್ಟೆಪ್ಸ್

ಇದನ್ನೂ ಓದಿ : Beer Drinking: ನೀವೂ ಬಿಯರ್ ಕುಡೀತೀರಾ? ಬಿಯರ್‌ನಿಂದ ದೇಹಕ್ಕೆ ಉಪಯೋಗವೂ ಇದೆ, ಹಾನಿಯೂ ಇದೆ

Diet Tips: 7 Tips That May Help To Reduce Acne

Comments are closed.